More

    ಮಾರ್ಚ್ 21 ರಿಂದ ಸಾರಿಗೆ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ..!

    ಬೆಂಗಳೂರು: ಅನಂತ್ ಸುಬ್ಬರಾವ್ ನೇತೃತ್ವದ ಸಂಘಟನೆ ಸಾರಿಗೆ ನೌಕರರ ಮುಷ್ಕರಕ್ಕೆ ಕರೆ ನೀಡಿದೆ.

    21 ಮಾರ್ಚ್​ನಿಂದ ಅನಿರ್ಧಿಷ್ಟಅವಧಿ ಮುಷ್ಕರ ಶುರುವಾಗಲಿದ್ದು ಅನಂತ್ ಸುಬ್ಬರಾವ್ ಮುಖ್ಯಮಂತ್ರಿಗೂ ಪತ್ರ ಬರೆದು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ನೌಕರರ ಮುಷ್ಕರಕ್ಕೆ 23 ಸಾವಿರ ಬಸ್ ಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದ್ದು ರಾಜ್ಯಾದ್ಯಂತ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

    ಸರ್ಕಾರಿ ನೌಕರರಿಗೆ ಸರಿಸಮಾನ ವೇತನ ಸಿಗಬೇಕು ಎಂದು ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರ ಸಮಾನಮನಸ್ಕರ ವೇದಿಕೆ ಮಾರ್ಚ್ 24ರಿಂದ ಮುಷ್ಕರಕ್ಕೆ ಕರೆ ನೀಡಲಾಗಿದೆ. ಎರಡೂ ಬಣಗಳು ಪ್ರತ್ಯೇಕವಾಗಿ ಕರೆ ನೀಡಿರುವುದರಿಂದ ನೌಕರರ ನಡುವೆಯೂ ಗೊಂದಲ ಉಂಟಾಗಿದೆ.

    ನೌಕರರ ಕೂಟದ ಅಧ್ಯಕ್ಷ ಆರ್.ಚಂದ್ರಶೇಖರ್ ಕೂಡ ನೌಕರರ ಸಮಾನಮನಸ್ಕರ ವೇದಿಕೆಯ ಮೂಲಕ ಮಾರ್ಚ್ 5ರಂದೇ ಸಭೆ ನಡೆಸಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಎರಡೂ ಬಣದ ಬೇಡಿಕೆಗಳು ಭಿನ್ನವಾಗಿರುವುದರಿಂದ ಒಗ್ಗಟ್ಟಿನ ಹೋರಾಟಕ್ಕೆ ತೊಡಕು ಉಂಟಾಗಲಿದೆ.

    ಯುಗಾದಿಗೆ ಊರಿಗೆ ಹೋಗುವ ಮೊದಲು ಹುಷಾರಾಗಿರಿ..!

    ಯುಗಾದಿಗೆ ಊರಿಗೆ ಹೋಗುವವರಿಗೆ ಸಾರಿಗೆ ನೌಕರರ ಪ್ರತಿಭಟನೆ ದೊಡ್ಡ ಆಘಾತವನ್ನು ಉಂಟುಮಾಡುತ್ತಾ ಎನ್ನುವ ಪ್ರಶ್ನೆ ಎದ್ದಿದ್ದು ಮಂಗಳವಾರವೇ ಬಸ್ ಸ್ಥಗಿತಗೊಳ್ಳುವುದರಿಂದ ಊರಿಗೆ ಹೋಗುವವರಿಗೆ ಶಾಕ್ ಕಾದಿದೆ ಎನ್ನಬಹುದು.

    ಸಾರಿಗೆ ನೌಕರರ ಬೇಡಿಕೆ ಏನು..!?
    • ಮೂಲ ವೇತನ ಶೇ 25% ಪರಿಷ್ಕರಣೆಗೆ ಬೇಡಿಕೆ
    • ಬಾಟಾ/ ಭತ್ಯೆಯನ್ನು ಐದು ಪಟ್ಟು ಹೆಚ್ಚಿಸಲು ಆಗ್ರಹ.
    • ಏಪ್ರಿಲ್ 2011 ರಂದು ವಜಾಗೊಂಡ ಸಿಬ್ಬಂದಿಯ ಮರುನೇಮಕ
    • ಸಿಬ್ಬಂದಿಗಳ ಮೇಲಿನ FIR ರದ್ದು ಬೇಡಿಕೆ
    • ಮುಷ್ಕರದ ಸಮಯದಲ್ಲಿ ವರ್ಗಾವಣೆ ಯಾದ ನೌಕರರ ಮರುನೇಮಕ ಮಾಡಿಕೊಳ್ಳಬೇಕು ಅಂತಾ ಆಗ್ರಹ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts