More

    ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ ಸಚಿವ ಹಾಲಪ್ಪ‌ ಆಚಾರ್ ಹೇಳಿಕೆ

    ಕೊಪ್ಪಳ: ರಾಜ್ಯದಲ್ಲಿರುವ ಲಿಂಗತ್ವ ಅಲ್ಪ ಸಂಖ್ಯಾತರ ಮಾಹಿತಿ ಸಂಗ್ರಹಣೆಗಾಗಿ ಮಾ.10ರಿಂದ ಏ.24 ವರೆಗೆ ಬೇಸ್ ಲೈನ್ ಸರ್ವೇ ನಡೆಸಲಾಗುವುದೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.

    ಈ‌ ಹಿಂದೆ ನಿಖರ ಸರ್ವೇ ನಡೆದಿಲ್ಲ. 2011ರ ಮಾಹಿತಿ ಪ್ರಕಾರ 34286 ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. ಅವರ ಅಭಿವೃದ್ಧಿಗಾಗಿ ಸರ್ಕಾರದಿಂದ ಪುನರ್ವಸತಿ ಯೋಜನೆ, ವಸತಿ, ಮೈತ್ರಿ ಯೋಜನೆಯಡಿ ಮಾಸಾಶನ ನೀಡಲಾಗುತ್ತಿದೆ. ಆದರೆ, ಸಮುದಾಯದ ನಿಖರ ಅಂಕಿ ಅಂಶಗಳ ಕೊರತೆ ಇದೆ. ಹೀಗಾಗಿ ಅವರ ಸಮುದಾಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳ ಸಹಯೋಗದಲ್ಲಿ ಸಮೀಕ್ಷಾ ಕಾರ್ಯ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಸಮೀಕ್ಷೆಗಾಗಿ ‘ಕರ್ಮಣಿ’ ವೆಬ್ ಅಪ್ಲಿಕೇಶನ್ ಸಿದ್ಧಪಡಿಸಿದ್ದು, ಪ್ರಾಯೋಗಿಕವಾಗಿ ವಿಜಯಪುರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ತಾಲೂಕುವಾರು ಸಮೀಕ್ಷೆ ನಡೆಯಲಿದೆ. ಸಮೀಕ್ಷೆಯಲ್ಲಿ ಭಾಗಿಯಾಗುವವರಿಗೆ ತರಬೇತಿ ನೀಡಲಾಗಿದೆ.

    ಏಳು ವಿಭಾಗಗಳಡಿ ಸಮೀಕ್ಷೆ ನಡೆಯಲಿದ್ದು, ವ್ಯಕ್ತಿಗತ ವಿವರ, ಶಿಕ್ಷಣ, ಉದ್ಯೋಗ, ವಸತಿ, ಆರೋಗ್ಯ, ಸಾಮಜಿಕ ಭದ್ರತೆ ಅಂಶಗಳನ್ನು ಸಂಗ್ರಹಿಸಲಾಗುವುದು. ಉಸ್ತುವಾರಿ ನೋಡಿಕೊಳ್ಳಲು ಐದು ಸಮಿತಿಗಳನ್ನು ರಚಿಸಲಾಗಿದೆ. ಮಾಹಿತಿ ಸಂಗ್ರಹದಿಂದ ಸರ್ಕಾರದಿಂದ ಯೋಜನೆ ರೂಪಿಸಲು ಹಾಗೂ ಮೀಸಲಾತಿ ಕಲ್ಪಿಸಲು ಅನುಕೂಲವಾಗಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts