More

    ತೃತೀಯಲಿಂಗಿಗಳಿಗಾಗಿಯೇ ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ ರಾಜ್ಯದ ಪ್ರಥಮ ಅನಾಥಾಶ್ರಮ…

    ಬೆಂಗಳೂರು: ಇತರ ಸಾಮಾನ್ಯ ಜನರಂತಲ್ಲ ತೃತೀಯಲಿಂಗಿಗಳ ಜೀವನ. ಹೆತ್ತವರಿಗೆ ಬೇಡವಾಗಿ, ಬಂಧು ಬಳಗದಿಂದ ದೂರವಾಗಿ, ಸರಿಯಾದ ಶಿಕ್ಷಣವನ್ನು ಪಡೆದುಕೊಳ್ಳಲಾಗದೇ, ಸಮಾಜದಿಂದ ಬೇರ್ಪಟ್ಟ ವರ್ಗದಂತೆ ಬದುಕುತ್ತಿರುತ್ತಾರೆ ತೃತೀಯ ಲಿಂಗಿಗಳು. ತಮ್ಮ ಬದುಕಿನ ಬಂಡಿಯನ್ನು ಮುನ್ನಡೆಸಲು ಅದೆಷ್ಟೋ ಜನ ತೃತೀಯ ಲಿಂಗಿಗಳು ಭಿಕ್ಷೆ ಬೇಡುತ್ತಾ, ಹೊಟ್ಟೆ ಪಾಡಿಗಾಗಿ ಒಂದು ಊರಿನಿಂದ ಮತ್ತೊಂದು ಊರಿಗೆ ಅಲೆಮಾರಿಗಳಂತೆ ಹೋಗಿ ಬದುಕುತ್ತಿದ್ದಾರೆ.

    ಅವರಿಗೆ ಸೂಕ್ತವಾದ ಆಸರೆ ಎಂಬುದಿಲ್ಲ. ಅವರ ಸಮಾಜದವರನ್ನು ಬಿಟ್ಟರೆ ಬೇರೆ ಯಾರೂ ಸಹಾಯಕ್ಕೆ ಬರುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ ಇದೀಗ ಸ್ವತಃ ತೃತೀಯಲಿಂಗಿಯಾದ ಡಾ.ನಕ್ಷತ್ರ ಎಂಬುವವರು ತೃತೀಯ ಲಿಂಗಿಗಳಿಗಾಗಿಯೇ ಅನಾಥಾಶ್ರಮವೊಂದನ್ನು ಸ್ಥಾಪಿಸಲು ಮುಂದಾಗುವ ಮೂಲಕ ಅವರ ಬಾಳಿಗೆ ಬೆಳಕಾಗಿದ್ದಾರೆ.

    ಕರ್ನಾಟಕದಲ್ಲಿಯೇ ಪ್ರಪ್ರಥಮವಾಗಿ ಬೆಂಗಳೂರು ಉತ್ತರ ತಾಲೂಕು ಗಂಗೊಂಡನಹಳ್ಳಿಯ ಚಾಮುಂಡೇಶ್ವರಿ ಬಡಾವಣೆಯಲ್ಲಿ ತೃತೀಯಲಿಂಗಿಗಳಿಗಾಗಿ ಈ ಅನಾಥಾಶ್ರಮ ಆರಂಭವಾಗಲಿದೆ. ‘ನಮ್ಮನೆ ಸುಮ್ಮನೆ’ ಎಂದು ಈ ನಿವಾಸಕ್ಕೆ ಹೆಸರು ಇಡಲು ಮುಂದಾಗಿದ್ದಾರೆ ಡಾ. ನಕ್ಷತ್ರ. ಈ ಅನಾಥಾಶ್ರಮಕ್ಕೆ ಇಂದು ಕಂದಾಯ ಸಚಿವ ಆರ್. ಅಶೋಕ್ ಭೂಮಿಪೂಜೆ ನೆರವೇರಿಸಿದರು.

    ಈ ಆಶ್ರಮವು 20 ಗುಂಟೆ ಜಮೀನಿನಲ್ಲಿ ಸ್ಥಾಪನೆಯಾಗಲಿದ್ದು, ಸರ್ಕಾರ ಇದಕ್ಕೆ ಅಧಿಕೃತ ಪರವಾನಗಿ ನೀಡಲಿದೆ ಎಂದು ಸಚಿವರು ತಿಳಿಸಿದರು. ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ಸಾಲುಮರದ ತಿಮ್ಮಕ್ಕ, ಜೋಗತಿ ಮಂಜಮ್ಮ, ಸಂತೋಷ್ ಗುರೂಜಿ ಮುಂತಾದವರು ಕಾರ‌್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts