More

    ಬೇರೆ ಕಟ್ಟಡಕ್ಕೆ ಬಿಸಿಎಂ ಹಾಸ್ಟೆಲ್ ಸ್ಥಾಳಂತರಿಸಿ

    ಕಂಪ್ಲಿ: ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಕುರಿತು ಚರ್ಚೆ ನಡೆಯಿತು.

    ತೋಟಗಾರಿಕೆ ಇಲಾಖೆಯು ನರೇಗಾದಡಿ ಶೇ.56 ಮಾನವ ದಿನಗಳನ್ನು ಸೃಜಿಸಿದ್ದು ಶೇ.100 ಗುರಿ ಸಾಧಿಸಬೇಕು. ಮಂಜೂರಾದ ಅನುದಾನವನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳಬೇಕು ಎಂದು ತೋಟಗಾರಿಕೆ ಅಧಿಕಾರಿ ಕರಿಗೌಡ ಹಾಗೂ ಟಿಎಚ್‌ಒ ಡಾ.ಜಿ.ಅರುಣ್‌ಗೆ ತಾಪಂ ಇಒ ಶ್ರೀಕುಮಾರ್ ಸೂಚಿಸಿದರು.

    ಬಿಸಿಎಂ ಹಾಸ್ಟೆಲ್ ಬಾಡಿಗೆ ಕಟ್ಟಡದಲ್ಲಿದ್ದು ಸುತ್ತಲೂ ಮದ್ಯದಂಗಡಿ, ಬಾರ್ ಆ್ಯಂಡ್ ರೆಸ್ಟೋರೆಂಟ್ ಇವೆ. ತಕ್ಷಣವೇ ಬೇರೆ ಕಟ್ಟಡಕ್ಕೆ ವಸತಿ ನಿಲಯ ಸ್ಥಳಾಂತರಿಸಬೇಕೆಂದು ವಾರ್ಡನ್ ಮಲ್ಲಿಕಾರ್ಜುನಗೆ ತಾಲೂಕು ಆಡಳಿತಾಧಿಕಾರಿ ಜಿಪಂ ಮುಖ್ಯಲೆಕ್ಕಾಧಿಕಾರಿ ಸಿ.ಜಿ.ಶ್ರೀನಿವಾಸ ತಿಳಿಸಿದರು.
    ಎಸ್ಸಿ ಹಾಸ್ಟೆಲ್‌ಗಳಲ್ಲಿ ಶೇ.100 ಫಲಿತಾಂಶ ಸಾಧಿಸಲು ನಿತ್ಯ 1 ತಾಸು ವಿಶೇಷ ತರಗತಿ ಬೋಧಿಸಲು ಕ್ರಮಕೈಗೊಳ್ಳಲಾಗಿದೆ ಎಂದು ವಾರ್ಡನ್ ವಿರೂಪಾಕ್ಷಿ ಸಭೆಗೆ ತಿಳಿಸಿದರು.

    ಶಿಕ್ಷಣ ಇಲಾಖೆಯಿಂದ ಮಂಜೂರಾದ 332 ಹುದ್ದೆಗಳಲ್ಲಿ 198 ಖಾಲಿ ಇವೆ. ಆಸ್ತಿ ನೋಂದಣಿಯಲ್ಲಿ 13 ಶಾಲೆ ಬಾಕಿ ಉಳಿದಿವೆ. ಮೂಲ ಸೌಕರ್ಯ ಕಲ್ಪಿಸಬೇಕಿದೆ. ಕುಡಿವ ನೀರು ಪೂರೈಕೆಗೆ ತೊಂದರೆಯಾಗದಂತೆ ವಿದ್ಯುತ್ ಒದಗಿಸುವಲ್ಲಿ ಕ್ರಮ ಕೈಗೊಳ್ಳಬೇಕು. ಜೋತು ಬಿದ್ದ ತಂತಿಗಳನ್ನು ಸರಿಪಡಿಸಬೇಕು ಎಂದು ಶ್ರೀನಿವಾಸ್ ಸೂಚಿಸಿದರು. ತಹಸೀಲ್ದಾರ್ ಶಿವರಾಜ, ನರೇಗಾ ಎಡಿ ಕೆ.ಎಸ್.ಮಲ್ಲನಗೌಡ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts