ಯಾದಗಿರಿ: ಕರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ರಾಜ್ಯ ಸಕರ್ಾರ ಕೆಲ ಸಮುದಾಯಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಅಲೆಮಾರಿ ಹಾಗೂ ಹಗಲುವೇಷಗಾರರಿಗೂ ಧನಸಹಾಯ ಒದಗಿಸುವಂತೆ ಅಲೆಮಾರಿ, ಹಗಲುವೇಷಗಾರರ ಸಂಘದಿಂದ ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಬಿ.ಎಲ್. ಆಂಜಿನೇಯ ಮಾತನಾಡಿ, ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಕಲಾವಿದರು ಹಗಲುವೇಷ ಬುರ್ರಕಥೆ ಹೇಳುತ್ತ ಮತ್ತು ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾರೆ. ಇದರಲ್ಲಿ ಕೆಲವರು ಸಣ್ಣಪುಟ್ಟ ವ್ಯಾಪಾರ, ಪ್ಲಾಸ್ಟಿಕ್ ಕೊಡ, ಬಟ್ಟೆ ವ್ಯಾಪಾರ ಮಾಡಿ ಸಂಸಾರ ಸಾಗಿಸುತ್ತಿದ್ದು, ಸ್ವಂತ ಮನೆಗಳಿಲ್ಲ. ಇಂಥ ಸಂದರ್ಭದಲ್ಲಿ ಲಾಕ್ಡೌನ್ ಘೋಷಣೆಯಾದ ಬಳಿಕ ಸಮುದಾಯ ಸಾಕಷ್ಟು ತೊಂದರೆಗೆ ಸಿಲುಕಿದೆ ಎಂದು ಗಮನ ಸೆಳೆದರು.
ಕರೊನಾ ವೈರಸ್ನಿಂದ ಊರೊಳಗೆ ಹೋಗಲು ಆಗದೆ ವ್ಯಾಪಾರ ಸ್ಥಗಿತಗೊಂಡಿದೆ. ನಿತ್ಯ ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಿದ್ದು, ವೃದ್ಧರು, ಗಭರ್ಿಣಿ ಮತ್ತು ಪುಟ್ಟ ಮಕ್ಕಳ ಭವಿಷ್ಯ ನೆನೆಸಿಕೊಂಡರೆ ಆತಂಕ ಶುರುವಾಗಿದೆ. ಮುಖ್ಯಮಂತ್ರಿಗಳು ಈಗಾಗಲೇ ಆಟೋ ಚಾಲಕರು, ನೇಕಾರರು, ಟ್ಯಾಕ್ಸಿ ಚಾಲಕರು ಮೊದಲಾದವರಿಗೆ ಒದಗಿಸಿದ ಆರ್ಥಿಕ ಸಹಾಯವನ್ನು ಈ ಸಮುದಾಯಕ್ಕೂ ಕೊಡುವಂತೆ ಮನವಿ ಮಾಡಿದರು. ಆರ್.ದಾವೇಶ, ಮಾರುತಿ ಚಿತ್ತಾಪುರ ಇದ್ದರು.