More

    VIDEO| ಇದ್ದಕ್ಕಿದ್ದಂತೆ 35 ಕಿ.ಮೀ. ವರೆಗೆ ಹಿಮ್ಮುಖವಾಗಿ ಚಲಿಸಿದ ರೈಲು: ಮಾರ್ಗ ಮಧ್ಯೆ ಚಾಲಕನಿಗೆ ಎದುರಾಗಿದ್ದೇನು?

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಿಂದ ಉತ್ತರಖಂಡದ ತನಕ್ಪುರ ಜಿಲ್ಲೆಗೆ ತೆರಳುತ್ತಿದ್ದ ರೈಲೊಂದು ತಾಂತ್ರಿಕ ತೊಂದರೆಯಿಂದಾಗಿ ಸುಮಾರು 35 ಕಿ.ಮೀ ಹಿಮ್ಮುಖವಾಗಿ ಚಲಿಸಿದ ಘಟನೆ ನಡೆದಿದೆ. ಕೊನೆಗೂ ರೈಲನ್ನು ದೆಹಲಿಯಿಂದ ಸುಮಾರು 300 ಕಿ.ಮೀ ದೂರವಿರುವ ಉತ್ತರಖಂಡದ ಖತಿಮಾ ಎಂಬಲ್ಲಿ ತಡೆದು ನಿಲ್ಲಿಸಲಾಗಿದೆ.

    ವರದಿಗಳ ಪ್ರಕಾರ ಪುರ್ನಗಿರಿ ಜನ್ಶತಾಬ್ದಿ ಎಕ್ಸ್​ಪ್ರೆಸ್​ ರೈಲಿನ ಚಾಲಕ, ಹಳಿಯ ಮೇಲೆ ನಿಂತಿದ್ದ ಪ್ರಾಣಿಗಳಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ದಿಢೀರ್​ ಬ್ರೇಕ್​ ಹಾಕಿದ್ದಾರೆ. ಇದಾದ ಬಳಿಕ, ಚಾಲಕ ಲೊಕೊಮೋಟಿವ್​ ನಿಯಂತ್ರಣ ಕಳೆದುಕೊಂಡ ಪರಿಣಾಮ ಇಡೀ ರೈಲು ಹಿಮ್ಮುಖವಾಗಿ ಚಲಿಸಲು ಆರಂಭಿಸಿದೆ.

    ಇದನ್ನೂ ಓದಿರಿ: ಫೇಸ್​ಬುಕ್​ನಲ್ಲಿ ಈಕೆಯ ಬಲೆಗೆ ಬಿದ್ದವರ ಗತಿ ಅಧೋಗತಿ: ಚಾಲಕಿ ಯುವತಿಯ ಖತರ್ನಾಕ್​ ಕೆಲಸವಿದು!

    ಸುಮಾರು 35 ಕಿ.ಮೀಗಳ ವರೆಗೆ ವೇಗವಾಗೇ ರೈಲು ಹಿಮ್ಮುಖವಾಗಿ ಚಲಿಸಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವೇಳೆ ಟ್ರೈನ್​ ಎಲ್ಲಿಯೂ ಹಳಿ ತಪ್ಪಲಿಲ್ಲ. ಕೊನೆಗೆ ಟ್ರೈನ್​ ಅನ್ನು ಖತಿಮಾದಲ್ಲಿ ನಿಲ್ಲಿಸಲಾಯಿತು. ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿ ಬಸ್​ ಮುಖಾಂತರ ತನಕ್ಪುರ ಜಿಲ್ಲೆಗೆ ಕಳುಹಿಸಿಕೊಡಲಾಯಿತು.

    ಉತ್ತರ ಪ್ರದೇಶದ ಪಿಲಿಭಿತ್​ ತಾಂತ್ರಿಕ ತಂಡ ಘಟನೆ ಸಂಬಂಧ ತನಿಖೆ ನಡೆಸಲು ಖತಿಮಾಗೆ ತೆರಳಿದೆ. ಅಲ್ಲದೆ, ಲೊಕೋ ಪೈಲಟ್​ ಮತ್ತು ಗಾರ್ಡ್​ ಅನ್ನು ಈಶಾನ್ಯ ರೈಲ್ವೆ ಅಮಾನತ್ತು ಮಾಡಿದೆ. (ಏಜೆನ್ಸೀಸ್​)

    VIDEO: ಬೈಕ್‌ನಲ್ಲಿ ಬಂದ… ಅತ್ತಿತ್ತ ನೋಡಿದ…ಮಹಿಳೆಯರ ಒಳ ಉಡುಪು ಕದ್ದು ಡಿಕ್ಕಿಯಲ್ಲಿ ಸೇರಿಸಿ ಪರಾರಿಯಾದ..

    ಪಶ್ಚಿಮ ಘಟ್ಟದಲ್ಲೇಕೆ ಮಳೆ ಹೆಚ್ಚು? ಕಾಡಿನಿಂದಾಗಿ ಮಳೆಯೋ? ಮಳೆಯಿಂದಾಗಿ ಕಾಡೋ?

    VIDEO: ಬೈಕ್‌ ವ್ಹೀಲಿಂಗ್‌ ಆಯ್ತು… ಈಗ ಶುರುವಾಯ್ತು ಕಾರ್‌ಸ್ಟಂಟ್‌: ‘ಡೇರ್‌ಡೆವಿಲ್’ ಮಾಡಹೋಗಿ ಸಿಕ್ಕಿಬಿದ್ದ ಯುವಕ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts