More

    ಸಾಂಪ್ರದಾಯಿಕ ಭತ್ತದ ತಿರಿ ಉಳಿಸಲು ಪಣ

    ಕೋಟ: ಇಲ್ಲಿನ ಗಿಳಿಯಾರು ವ್ಯಾಪ್ತಿಯ ಸ್ಥಳೀಯ ನಿವಾಸಿ ಭೋಜ ಪೂಜಾರಿ ತಮ್ಮ ಮನೆಯಂಗಳದಲ್ಲಿ ಸಾಂಪ್ರದಾಯಿಕ ಭತ್ತದ ತಿರಿ ರಚಿಸಿ ಮುಂದಿನ ಪೀಳಿಗೆಗೆ ಅದರ ಮಹತ್ವ ಸಾರುವ ಸಾಹಸಕ್ಕೆ ಕೈ ಹಾಕಿದ್ದಾರೆ.

    ಸಾಲಿಗ್ರಾಮ ಹಾಗೂ ಕೋಟ ಗ್ರಾಮಪಂಚಾಯಿತಿ ಗಡಿ ಭಾಗದಲ್ಲಿ ವಾಸಿಸುತ್ತಿರುವ ಭೋಜ ಪೂಜಾರಿ ತನ್ನ ಬೇರೆ ಉದ್ಯಮದ ಜತೆಗೆ ಕೃಷಿ ಕಾಯಕದಲ್ಲಿ ತೊಡಗಿಕೊಂಡು ಮಳೆಗಾಲದಲ್ಲಿ ಭತ್ತ, ನಂತರದ ದಿನಗಳಲ್ಲಿ ಉದ್ದು, ಕಲ್ಲಂಗಡಿ ಹಣ್ಣಿನ ಬೇಸಾಯ ಮಾಡುತ್ತಾರೆ.
    ಸದ್ಯ ಇವರ ಮನೆಯಂಗಳದಲ್ಲಿ 150ಮುಡಿ(50) ಕ್ವಿಂಟಾಲ್ ಭತ್ತದ ತಿರಿ ರಚಿಸಿ ಮಾದರಿಯಾಗಿದ್ದಾರೆ.

    ಹಿಂದಿನ ಕಾಲಘಟ್ಟದಲ್ಲಿ ಭತ್ತ ಶೇಖರಿಸಿ ಇಡಲು ಈ ರೀತಿಯ ಭತ್ತದ ಹುಲ್ಲು ಹಾಗೂ ಹುಲ್ಲಿನಿಂದಲೇ ತಯಾರಿಸಿದ ಹಗ್ಗ(ಮಾಡಿಬಳ್ಳಿ)ಹಾಗೂ ರೋಪ್‌ಗಳನ್ನು ಸುತ್ತಿ ಭತ್ತದ ತಿರಿ ರಚಿಸಿಕೊಳ್ಳುತ್ತಾರೆ. ಅದರೊಳಗೆ ಭತ್ತವನ್ನು ಹಾಕಿ ಚಂದದ ಅಂದದ ತಿರಿ ಮನೆಯಂಗಳದಿ ಸೃಷ್ಟಿಸಿಕೊಳ್ಳುತ್ತಿದ್ದರು. ಇದರಲ್ಲಿ ಎಷ್ಟೆ ತಿಂಗಳಾದರೂ ಭತ್ತ ಹಾನಿಯಾಗದೆ ಹಾಗೇ ಉಳಿಯುತ್ತಿತ್ತು. ಆದರೆ ಕಾಲಕ್ರಮೇಣ ಆಧುನಿಕ ಕೃಷಿ ಪದ್ಧತಿಯಿಂದ ಕಟಾವು ಯಂತ್ರಗಳ ಸಾಮ್ರಾಜ್ಯದಿಂದ ಹುಲ್ಲು ಸಿಗದೆ ಭತ್ತವನ್ನು ನೇರವಾಗಿ ಮನೆಯಂಗಳಕ್ಕೆ ಬಂದು ತಲುಪುವ ವ್ಯವಸ್ಥೆ ನಿರ್ಮಾಣಗೊಂಡಿತು. ಇದರಿಂದ ಭತ್ತದ ತಿರಿಗಳ ಸಂಖ್ಯೆ ಕಡಿಮೆಯಾಗಿ ಇಂದು ಬೆರಳೆಣಿಕೆಯಷ್ಟು ತಿರಿಗಳನ್ನು ಅಲ್ಲಲ್ಲಿ ಕಾಣಬಹುದಾಗಿದೆ.

    ನನ್ನ ತಂದೆಯ ಕನಸಿನ ಕೂಸು ಈ ಭತ್ತದ ತಿರಿ ಪದ್ಧತಿ, ಕಟಾವು ಮಾಡಿದ ಭತ್ತವನ್ನು ಮನೆಯ ಕೋಣೆಗೆ ಅಥವಾ ಚೀಲಕ್ಕೆ ಹಾಕಿ ಇಟ್ಟರೆ ಅದು ಹಾಳಾಗುವುದಲ್ಲದೆ ವಿವಿಧ ಬಗೆಯ ಕೀಟಗಳು ಅದರಲ್ಲಿ ಹುಟ್ಟಿಕೊಳ್ಳುತ್ತವೆ. ಆದರೆ ಈ ರೀತಿಯ ತಿರಿ ರಚಿಸಿ ಭತ್ತವನ್ನು ಶೇಖರಿಸಿ ಇಟ್ಟರೆ ಎಷ್ಟು ಸಮಯದವರೆಗೂ ಇಡಬಹುದು.
    – ಭೋಜ ಪೂಜಾರಿ, ಕೃಷಿಕ ಗಿಳಿಯಾರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts