More

    VIDEO| ಪರ್ವತದ ತುತ್ತತುದಿಯಲ್ಲಿ ಫೋಟೋಗಾಗಿ ಮಹಿಳೆಯ ಸರ್ಕಸ್​: ಹಾರ್ಟ್​ ವೀಕ್​ ಇದ್ದವರು ಈ ವಿಡಿಯೋ ನೋಡ್ಬೇಡಿ!

    ಬ್ರಾಸಿಲಿಯಾ: ಪ್ರವಾಸದ ಒಂದು ಭಾಗವಾಗಿ ಎದುರಾಗುವ ಅದ್ಭುತ ಹಾಗೂ ಅಪಾಯಕಾರಿ ತಾಣಗಳು ಒಂದು ರೀತಿ ಸಾಹಸ ಮತ್ತು ಥ್ರಿಲ್ಲರ್​ ಅನುಭವವನ್ನು ನೀಡುವುದರಲ್ಲಿ ಸಂಶಯವೇ ಇಲ್ಲ. ಅದರಲ್ಲೂ ಅಂತಹ ಸ್ಥಳಗಳಲ್ಲಿ ಒಂದು ಫೋಟೋ ತೆಗೆದುಕೊಳ್ಳುವುದನ್ನು ಯಾರು ಮಿಸ್​ ಮಾಡಿಕೊಳ್ಳುವುದೇ ಇಲ್ಲ. ಕಷ್ಟವಾದರೂ ಸರಿಯೇ ಒಂದು ಫೋಟೋ ತೆಗೆದೇ ಬಿಡಬೇಕೆಂಬ ಹುಚ್ಚು ಧೈರ್ಯ ಕೆಲವೊಮ್ಮೆ ಅನಾಹುತಕ್ಕೆ ಎಡೆಮಾಡಿಕೊಟ್ಟಿರುವ ಉದಾಹರಣೆಗಳು ನಮ್ಮ ಮುಂದಿವೆ.

    ಅಂದಹಾಗೆ ಬ್ರೆಜಿಲ್​ನ ರಿಯೊಡಿ ಜನೈರೋದಲ್ಲಿ ಪ್ರವಾಸಿಗರೊಬ್ಬರು ಒಂದು ಒಳ್ಳೆಯ ಪೋಟೋಗಾಗಿ ಎದೆ ಝಲ್​ ಎನಿಸುವ ಪ್ರದೇಶದಲ್ಲಿ ಸಾಹಸಕ್ಕೆ ಕೈಹಾಕಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಏದುಸಿರು ಬಿಡುವಂತೆ ಮಾಡಿದೆ.

    ಅನೇಕ ಟ್ವಿಟರ್​ ಬಳಕೆದಾರರು ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಅನಾಮಿಕ ಮಹಿಳೆಯೊಬ್ಬಳು ರಿಯಾಡಿ ಜನೈರೋ ಸಮೀಪದ ತಿಜುಕಾ ಅರಣ್ಯ ವ್ಯಾಪ್ತಿಯಲ್ಲಿ ಬರುವ ಸುಮಾರು 3 ಸಾವಿರ ಅಡಿ ಎತ್ತರದ ಪೆದ್ರಾ ಡಾ ಗಾವಿಯಾ ಪರ್ವತದಲ್ಲಿ ಫೋಟೋಗಾಗಿ ಪೋಸ್​ ನೀಡಿದ ಭಯಾನಕ ದೃಶ್ಯವಿದೆ. ಹೃದಯ ದುರ್ಬಲ ಇರುವವರಂತೂ ವಿಡಿಯೋ ನೋಡದಿರುವುದೇ ಒಳಿತು ಎನ್ನವಷ್ಟು ಭಯಾನಕವಾಗಿದೆ.

    ಪವರ್ತದ ತುತ್ತ ತುದಿಯಲ್ಲಿ ಅನೇಕ ಬಾರಿ ನುಣುಪಾದ ಬಂಡೆಯ ಕೆಳಗೆ ಜಾರಿ ಫೋಟೋಗೆ ಫೋಸ್​ ನೀಡಿರುವುದು ಎದೆ ಝಲ್​ ಎನಿಸುವಂತಿದೆ. ಅಲ್ಲಿಂದ ಕೆಳಗೆ ನೋಡಿದರೆ, ಸುಂದರವಾದ ಸರೋವರ ಜತೆಗೆ ಪಟ್ಟಣವೊಂದು ಅಂಗೈನಲ್ಲಿ ಹಿಡಿಯಬಹುದಾದಷ್ಟು ಚಿಕ್ಕದಾಗಿ ಕಾಣುವಷ್ಟು ಪವರ್ತ ಎತ್ತರವಾಗಿದೆ. ಹಾಗೇ ಅಪಾಯಕಾರಿಯಾಗಿದೆ. ಸ್ವಲ್ಪ ಎಚ್ಚರ ತಪ್ಪಿ ಕೆಳಗೆ ಬಿದ್ದರೂ ಮೂಳೆಗಳು ಪುಡಿಯಾಗುವುದಂತೂ ಗ್ಯಾರೆಂಟಿ ಎನ್ನುವಷ್ಟು ಆಳವಿದೆ.

    ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ ದಿನದಿಂದ ಈವರೆಗೂ 2 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್​ ಮಾಡಿದ್ದು, 13.2 ಮಿಲಿಯನ್​ ಮಂದಿ ವೀಕ್ಷಣೆ ಮಾಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರಲ್ಲಿ ಅನೇಕರು ತಮ್ಮದೇ ರೀತಿಯಲ್ಲಿ ಕಮೆಂಟ್​ ಮಾಡಿದ್ದು, ಆ ಮಹಿಳೆಯ ತುದಿಯಲ್ಲಿ ಇರುವುದನ್ನು ನೋಡಿದರೆ ನಮ್ಮ ಕಾಲಿಗೆ ಚಾಕು ತೆಗೆದುಕೊಂಡು ತಿವಿದಂಗೆ ಆಗುತ್ತಿದೆ ಎಂದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts