More

    ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಪ್ರವಾಸಿಗರನ್ನು ಸೆಳೆಯಲು ಶೀಘ್ರ ಯೋಜನೆ: ಮನೋಜ ಕುಮಾರ

    ಗದಗ: ಜಿಲ್ಲೆಯ ಪ್ರವಾಸೋದ್ಯಮದಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸಲು ಪ್ರಮುಖ ಸ್ಥಳಗಳನ್ನು ಗುರುತಿಸಿ ಪ್ರವಾಸಿಗರನ್ನು ಸೆಳೆಯುವದು ಹಾಗೂ ಆಗಮಿಸಿದ ಪ್ರವಾಸಿಗರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವ ಮೂಲಕ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಶೀಘ್ರವೇ ಕ್ರಿಯಾಯೋಜನೆಯನ್ನು ರೂಪಿಸಲಾಗುವದು ಎಂದು ಅರಣ್ಯ,ವಸತಿ ಹಾಗೂ ವಿಹಾರಧಾಮ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಆಗಿರುವ ಪ್ರವಾಸೋದ್ಯಮ ಸಮಗ್ರ ಅಭಿವೃದ್ಧಿ ಸಮನ್ವಯ ಸಮಿತಿ ಅಧ್ಯಕ್ಷ ಮನೋಜ ಕುಮಾರ ಹೇಳಿದರು.

    ನಗರದ ರೈತಭವನದಲ್ಲಿ ಬುಧವಾರ ಜರುಗಿದ ಜಿಲ್ಲಾ ಪ್ರವಾಸೋದ್ಯಮ ಸಮಗ್ರ ಅಭಿವೃದ್ಧಿ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರವಾಸೋದ್ಯಮ ಸ್ಥಳ ಹಾಗೂ ಅವುಗಳ ವಿಶೇಷಣಗಳನ್ನು ಪ್ರವಾಸಿಗರಿಗೆ ಮುದ್ರಣ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಸಿಕೊಡುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಬೇಕು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ವಾತಾವರಣ ಲಭ್ಯವಿದ್ದು ಅದನ್ನು ಸರಿಯಾಗಿ ಬಳಸಬೇಕಿದೆ.

    ಔಷಧಿ ಸಸ್ಯಗಳ ಆಗರ, ಸಸ್ಯಕಾಶಿ ಕಪ್ಪತಗುಡ್ಡ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿ ಇನ್ನೂ ಹೆಚ್ಚಿನ ಮೂಲಭೂತ ಸೌಲಭ್ಯಗಳನ್ನು ಹಾಗೂ ಸಂಚಾರಿ ವವ್ಯವಸ್ಥೆಗಳನ್ನು ಕಲ್ಪಿಸುವ ಮೂಲಕ ಹೊರ ಜಿಲ್ಲೆ, ರಾಜ್ಯ ಹಾಗೂ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ. ಅದರಂತೆ ಲಕ್ಕುಂಡಿ ರಾಷ್ಟ್ರ ಹೆದ್ದಾರಿ ಪಕ್ಕದಲ್ಲಿದ್ದು ವಿದೇಶಿ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವ ಹಂಪಿಗೆ ಹಾದು ಹೊಗುವ ಮಾರ್ಗ ಮಧ್ಯೆ ಬರುವ ಲಕ್ಕುಂಡಿಯ ಪರಂಪರೆ ಹಾಗೂ ಇತಿಹಾಸ, ವಾಸ್ತುಶಿಲ್ಪಗಳ ಬಗ್ಗೆ ಸರಿಯಾಗಿ ಮಾರ್ಗದರ್ಶನ ಮಾಡಲು ನುರಿತ ಗೈಡಗಳನ್ನು ನಿಯೋಜಿಸಬೇಕು.

    ಅದರಂತೆ ವಿದೇಶಿ ಪಕ್ಷಿಗಳು ವಲಸೆ ಬರುವಂತಹ ಪ್ರಸಿದ್ಧ ಮಾಗಡಿ ಕೆರೆ ಇನ್ನಷ್ಟೂ ಪ್ರವಾಸಿಗರನ್ನು ಆಕ್ಷಿರ್ಷಿಸುವಂತೆ ರೂಪ ರೇಷೆಗಳನ್ನು ಸಿದ್ದಪಡಿಸುವದು ಹಾಗೂ ಹಿಂದೂ ಮುಸ್ಲಿಂ ಭಾವೈಕ್ಯತಾ ಕೇಂದ್ರವಾದ ಶಿರಹಟ್ಟಿ ಫಕೀರೆಶ್ವರ ಮಠಕ್ಕೆ ಸಾರಿಗೆ ಸಂಪರ್ಕ ಕಲ್ಪಿಸುವದು. ಗಜೇಂದ್ರಗಡದ ಕಾಲಕಾಲೇಶ್ವರ ಗುಡ್ಡ, ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ, ಪ್ರಾಣಿ ಸಂಗ್ರಹಾಲಯ, ನಗರದ ತ್ರಿಕೂಟೇಶ್ವರ, ವೀರನಾರಾಯಣ, ಭೀಷ್ಮ ಕೆರೆಯ ಬಸವೇಶ್ವರ ಪುತ್ಥಳಿ, ಡಂಬಳದ ವಿಕ್ಟೋರಿಯಾ ಕೆರೆ, ದೊಡ್ಡ ಬಸವಣ್ಣ ದೇವಸ್ಥಾನ ಈ ಎಲ್ಲ ಸ್ಥಳಗಳ ಮಹತ್ವವನ್ನು ಪ್ರವಾಸಿಗರಿಗೆ ಪರಿಚಯಿಸಲು ನುರಿತ ಟ್ರಾವಲ್ ಏಜೆನ್ಸಿಗಳಿಗೆ ತಿಳಿಸುವದರ ಜೊತೆಗೆ ಸ್ಥಳ ಭೇಟಿಗೆ ವ್ಯವಸ್ಥೆ ಮಾಡುವದರ ಕುರಿತು ಕ್ರಿಯಾ ಯೋಜನೆ ರೂಪಿಸಬೇಕಿದೆ ಎಂದರು.

    ಸಮಿತಿ ಸದಸ್ಯರಾದ ಆರ್.ಆರ್.ಓದುಗೌಡರ ಮಾತನಾಡಿ ಕಪ್ಪತಗುಡ್ಡ ವೀಕ್ಷಿಸಲು ಆಗಮಿಸುವ ಪ್ರವಾಸಿಗರಿಗೆ ಸಾಯಂಕಾಲ ಹಾಗೂ ಮುಂಜಾನೆಯ ಸೂರ್ಯಾಸ್ತ ಹಾಗೂ ಸೂರ್ಯೋದಯ ವೀಕ್ಷಿಸಲು ಸೂಕ್ತ ಸ್ಥಳಗಳನ್ನು ನಿರ್ಮಿಸಬೇಕು. ಹಂಪಿ ಹಾಗೂ ಬಾದಾಮಿ ಪ್ರವಾಸಿಗರನ್ನು ಸೆಳೆಯಲು ಜಿಲ್ಲೆಯ ಒಂದು ದಿನದ ಪ್ರವಾಸಿ ಸ್ಥಳಗಳ ಪರಿಚಯಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು. ಜೊತೆಗೆ ಜಿಲ್ಲೆಯಲ್ಲಿನ ಕೆರೆ, ಗುಡ್ಡಗಳನ್ನು ಬಳಸಿಕೊಂಡು ಸಾಹಸ ಕ್ರೀಡೆ ಹಾಗೂ ಮನರಂಜನಾ ಕ್ರೀಡೆಗಳಿಗೆ ಉತ್ತೇಜನ ನೀಡಬೇಕೆಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

    ಸಮಿತಿ ಸದಸ್ಯರಾದ ಸಿ.ಜಿ.ಬೆಟಸೂರಮಠ ಮಾತನಾಡಿ ಜಿಲ್ಲೆಯು ಪ್ರವಾಸೋದ್ಯಮಕ್ಕೆ ನೂರು ಪ್ರತಿಶತದಷ್ಟು ಹೇಳಿ ಮಾಡಿಸಿದಂತಹ ಸ್ಥಳವಾಗಿದೆ. ಲಕ್ಕುಂಡಿಯ ಕುರಿತು ಸಮಗ್ರ ಅಧ್ಯಯನವಾಗಬೇಕು. ಜಿಲ್ಲೆಯ ಪ್ರಮುಖ ಸ್ಥಳಗಳು ವಿಶ್ವ ಪಾರಂಪರಿಕ ಸ್ಥಳಗಳಲ್ಲಿ ಗುರುತಿಸುವಂತಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ತಮ್ಮ ಸಲಹೆ ನೀಡಿದರು.

    ಸಮಿತಿಯ ಸದಸ್ಯರುಗಳಾದ ಜೆ.ಕೆ.ಜಮಾದಾರ ಹಾಗೂ ಅಬ್ದುಲ ಕಟ್ಟಿಮನಿ ಮಾತನಾಡಿ ಜಿಲ್ಲೆಯಲ್ಲಿ ಐತಿಹಾಸಿಕ, ಪಾರಂಪರಿಕ, ಸಾಹಿತ್ಯಿಕ, ಔದ್ಯೋಗಿಕ ಪ್ರವಾಸೋದ್ಯಮದ ಜೊತೆಗೆ ಶೈಕ್ಷಣಿಕ ಪ್ರವಾಸೋದ್ಯಮಕ್ಕೂ ಮನ್ನಣೆ ದೊರಕಬೇಕು. ಜಿಲ್ಲೆಯಲ್ಲಿ ರಾಜ್ಯ ಸಂರಕ್ಷಿತ ಇಪತ್ತೆರೆಡು ಸ್ಮಾರಕಗಳಿವೆ ಅವುಗಳನ್ನು ಮುನ್ನೆಲೆಗೆ ತರುವ ಮೂಲಕ ಪ್ರವಾಸಿಗರಿಗೆ ಪರಿಚಯಿಸುವ ಕಾರ್ಯವಾಗಬೇಕಿದೆ ಎಂದರು.

    ಸಮಿತಿಯ ಸದಸ್ಯರುಗಳಾದ ವಿವೇಕಾನಂದ ಪಾಟೀಲ ಹಾಗೂ ಎಫ್.ಎನ್. ಹುಡೇದ ಮಾತನಾಡಿ ಜಿಲ್ಲೆಯು ಮಹಾನ ಕವಿಗಳ ಜನ್ಮ ಸ್ಥಳವಾಗಿವೆ ಅಲ್ಲದೇ ವೈಶಿಷ್ಟ್ಯಗಳನ್ನು ಹೊಂದಿದ ವಾಸ್ತುಶಿಲ್ಪಿ ಶೈಲಿಯ ಸಣ್ಣ ಪುಟ್ಟ ದೇವಾಲಯ, ಸ್ಮಾರಕ, ಕಲ್ಯಾಣಿಗಳನ್ನು ಹೊಂದಿದ್ದು ಅವುಗಳನ್ನು ಪುನರುಜ್ಜೀವನಗೊಳಿಸಿ ಮುನ್ನೆಲೆಗೆ ತಂದು ಈ ಕುರಿತು ಪ್ರಚಾರ ಕೈಗೊಳ್ಳುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಲು ಅತಮ್ಮ ಅನಿಸಿಕೆ ಹಂಚಿಕೊಂಡರು.

    ಸಭೆಯಲ್ಲಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಗದೀಶ ಜಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ದಿಪೀಕಾ ಬಾಜಪೇಯಿ, ಸಾಮಾಜಿಕ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂಗಮೇಶ ಪ್ರಭಾಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಗದಗ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೆಶ ವಿಭೂತಿ, ಕೊಪ್ಪಳ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಡಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಮಾಜಿ. ಜಿ.ಪಂ. ಅಧ್ಯಕ್ಷ ಸಿದ್ದು ಪಾಟೀಲ ಹಾಜರಿದ್ದರು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts