More

    ಒಮಿಕ್ರಾನ್ ಸೋಂಕಿತರ​ ಸಂಪರ್ಕಿತ ಐವರಲ್ಲಿ ಕೋವಿಡ್​ ಸೋಂಕು!; ನಗರದಲ್ಲಿ ಮತ್ತಷ್ಟು ಜನರಲ್ಲಿ ಒಮಿಕ್ರಾನ್​ ಸೋಂಕಿರುವ ಶಂಕೆ…

    ಬೆಂಗಳೂರು: ದೇಶದಲ್ಲೇ ಮೊದಲ ಸಲ ಕರ್ನಾಟಕದಲ್ಲಿ ಎರಡು ಒಮಿಕ್ರಾನ್​ ಸೋಂಕು ಪ್ರಕರಣ ಪತ್ತೆಯಾಗಿದ್ದು, ರಾಜ್ಯದಲ್ಲಿ ಆತಂಕ ಮೂಡಿಸಿದೆ. ಇದೀಗ ಸೋಂಕಿತರಿಬ್ಬರ ಸಂಪರ್ಕದಲ್ಲಿದ್ದ ಐವರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿರುವುದರಿಂದ ಆತಂಕ ಮತ್ತಷ್ಟು ಹೆಚ್ಚಾಗಿದೆ.

    66 ಹಾಗೂ 46 ವರ್ಷದ ಇಬ್ಬರಲ್ಲಿ ಒಮಿಕ್ರಾನ್​ ರೂಪಾಂತರಿ ವೈರಸ್ ದೃಢಪಟ್ಟಿದ್ದು, ಅದರಲ್ಲಿ 66 ವರ್ಷದ ವ್ಯಕ್ತಿ ದಕ್ಷಿಣ ಆಫ್ರಿಕದಿಂದ ಇತ್ತೀಚೆಗೆ ಮರಳಿದ್ದರು. ಈ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿ 24 ಹಾಗೂ ದ್ವಿತೀಯ ಸಂಪರ್ಕದಲ್ಲಿ 240 ಮಂದಿ ಇದ್ದು, ಎಲ್ಲರ ಕೋವಿಡ್​ ಪರೀಕ್ಷೆ ವರದಿ ನೆಗೆಟಿವ್ ಎಂದು ಬಂದಿದೆ.

    ಇದನ್ನೂ ಓದಿ: ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ!

    ಆದರೆ 46 ವರ್ಷದ ವ್ಯಕ್ತಿಗೆ ಯಾವುದೇ ಟ್ರಾವೆಲ್​ ಹಿಸ್ಟರಿ ಇಲ್ಲದಿದ್ದರೂ ಒಮಿಕ್ರಾನ್ ಬಂದಿದೆ. ಮಾತ್ರವಲ್ಲ ಇವರೊಂದಿಗೆ 13 ಮಂದಿ ಪ್ರಾಥಮಿಕ ಹಾಗೂ 205 ಮಂದಿ ದ್ವಿತೀಯ ಸಂಪರ್ಕದಲ್ಲಿದ್ದರು. ಆ ಪೈಕಿ ಪ್ರಾಥಮಿಕ ಸಂಪರ್ಕದಲ್ಲಿದ್ದ ಮೂವರಲ್ಲಿ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಇಬ್ಬರಲ್ಲಿ ಕೋವಿಡ್​ ಸೋಂಕಿರುವುದು ದೃಢಪಟ್ಟಿದೆ. ಈ ಐವರಲ್ಲಿರನ ಸೋಂಕು ಒಮಿಕ್ರಾನ್​ ಹೌದೋ ಅಲ್ಲವೋ ಎಂಬುದು ಇನ್ನಷ್ಟೇ ದೃಢಪಡಬೇಕಿದೆ.

    ಇದನ್ನೂ ಓದಿ: ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ

    ‘ಯಾವುದೇ ಪ್ರಯಾಣ ಇತಿಹಾಸವಿಲ್ಲದ 46 ವರ್ಷದ ಸ್ಥಳೀಯ ವ್ಯಕ್ತಿಗೆ ಶೀತಜ್ವರ, ಕೆಮ್ಮು ರೋಗಲಕ್ಷಣ ಕಂಡುಬಂದಿದ್ದರಿಂದ ನ.22ರಂದು ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಿಸಿಕೊಂಡಿದ್ದರು. ನ.24 ರಂದು ಕೋವಿಡ್ ಸೋಂಕು ದೃಢಪಟ್ಟಿತ್ತು. ಪ್ರತಿನಿತ್ಯ ಪಾಲಿಕೆಯಿಂದ ರ‌್ಯಾಂಡಮ್ ಆಗಿ ಈ ಸೋಂಕಿತ ವ್ಯಕ್ತಿಯ ಮಾದರಿಯನ್ನೂ ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳಿಸಲಾಗಿತ್ತು. ಆದರೆ, ವಿಭಿನ್ನ ಮಾದರಿಯ ಸೋಂಕು ಪತ್ತೆಯಾಗಿದ್ದರಿಂದ ಪುಣೆಯ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಈಗ ಒಮಿಕ್ರಾನ್ ರೋಪಾಂತರಿ ಸೋಂಕು ಪತ್ತೆಯಾಗಿದೆ. ಆದರೆ, ಸ್ಥಳೀಯ ವ್ಯಕ್ತಿಗೆ ಸೋಂಕು ಹೇಗೆ ಬಂತೆಂಬುದು ಪತ್ತೆಯಾಗಿಲ್ಲ. ಹೀಗಾಗಿ, ನಗರದ ಇನ್ನೂ ಹಲವು ಜನರಲ್ಲಿ ಒಮಿಕ್ರಾನ್ ಸೋಂಕು ಇರುವ ಸಾಧ್ಯತೆಯಿದೆ’ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ಗುಪ್ತ ತಿಳಿಸಿದ್ದಾರೆ.

    ಒಮಿಕ್ರಾನ್​ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಹೊರಬಿತ್ತು ಅದು ಜಾಗತಿಕವಾಗಿ ಅಪಾಯಕಾರಿ ಎನ್ನುವ ವಿಷಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts