More

    ಆಸ್ಟ್ರೇಲಿಯಾದ ಟಿ20 ವಿಶ್ವಕಪ್ ಗೆಲುವಿನ ಗುಟ್ಟು ಬಿಚ್ಚಿಟ್ಟ ಆರನ್ ಫಿಂಚ್

    ದುಬೈ: ಅರಬ್ ನಾಡಿನಲ್ಲಿ ನಡೆದ ಟಿ20 ವಿಶ್ವಕಪ್ 7ನೇ ಆವೃತ್ತಿಯಲ್ಲಿ ಟಾಸ್ ಗೆದ್ದ ತಂಡಗಳೇ ಬಹುತೇಕ ಪಂದ್ಯಗಳಲ್ಲಿ ಗೆಲುವು ಸಾಧಿಸಿದವು. ಭಾರತದಂಥ ಬಲಿಷ್ಠ ತಂಡಗಳು ಟೂರ್ನಿಯ ನಾಕೌಟ್ ಹಂತಕ್ಕೇರಲು ಶಕ್ತವಾಗದಿರುವುದನ್ನೂ ಟಾಸ್ ಸೋಲೇ ಪ್ರಮುಖ ಕಾರಣವಾಯಿತು. ಇದಲ್ಲದೆ ಆಸ್ಟ್ರೇಲಿಯಾ ತಂಡ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಚೊಚ್ಚಲ ವಿಶ್ವಕಪ್ ಜಯಿಸುವಲ್ಲೂ ಟಾಸ್ ಮಹತ್ವದ ಪಾತ್ರ ನಿರ್ವಹಿಸಿತು. ಆಸೀಸ್ ತಂಡದ ನಾಯಕ ಆರನ್ ಫಿಂಚ್ ಕೂಡ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಗೆಲುವಿನ ಬಳಿಕ ಇದನ್ನು ಒಪ್ಪಿಕೊಂಡಿದ್ದಾರೆ.

    ಟೂರ್ನಿಯಲ್ಲಿ ಆಸೀಸ್ ಆಡಿದ 7 ಪಂದ್ಯಗಳಲ್ಲಿ 6ರಲ್ಲಿ ಟಾಸ್ ಜಯಿಸಿತ್ತು. ಇಂಗ್ಲೆಂಡ್ ವಿರುದ್ಧ ಟಾಸ್ ಸೋತ ಏಕೈಕ ಪಂದ್ಯದಲ್ಲಿ ಆಸೀಸ್ ಸೋಲು ಕಂಡಿತ್ತು. ಅದರಲ್ಲೂ ದುಬೈನಲ್ಲಿ ನಡೆದ ಟೂರ್ನಿಯ ಬಹುತೇಕ ಎಲ್ಲ ಪಂದ್ಯಗಳಲ್ಲೂ ಚೇಸಿಂಗ್ ಮಾಡಿದ ತಂಡಗಳೇ ಗೆದ್ದವು. ಆಸೀಸ್ ತಂಡ ಟೂರ್ನಿಯಲ್ಲಿ ಎಲ್ಲ ಗೆಲುವನ್ನು ಚೇಸಿಂಗ್ ಮೂಲಕವೆ ಕಂಡಿತು. 2016ರಲ್ಲಿ ವಿಂಡೀಸ್ ಕೂಡ ಚೇಸಿಂಗ್ ಮೂಲಕವೇ ಎಲ್ಲ ಪಂದ್ಯ ಗೆದ್ದು ಟಿ20 ವಿಶ್ವಕಪ್ ವಶಪಡಿಸಿಕೊಂಡಿತ್ತು.

    ‘ಟಾಸ್ ಮಹತ್ವದ ಪಾತ್ರ ವಹಿಸಿತು ಎಂಬುದನ್ನು ಒಪ್ಪಿಕೊಳ್ಳುವೆ. ಹಿಂದೆ ನಾನಿದನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದೆ. ಯಾಕೆಂದರೆ ಟೂರ್ನಿ ನಾವೂ ಕೂಡ ಕೆಲ ಪಂದ್ಯಗಳಲ್ಲಿ ಟಾಸ್ ಸೋಲು ಸಾಧ್ಯತೆ ಇತ್ತು. ಟಿ20 ಕ್ರಿಕೆಟ್‌ನಲ್ಲಿ ಅದೃಷ್ಟವೂ ಮುಖ್ಯವಾಗುತ್ತದೆ. ಆದರೆ ನಾವು ಉತ್ತಮ ಕ್ರಿಕೆಟ್ ಆಡಿದೆವು ಎಂಬುದು ಕೂಡ ಸತ್ಯ. ನಮ್ಮ ಆಕ್ರಮಣಕಾರಿ ಆಟವೂ ಗೆಲುವಿಗೆ ಕಾರಣವಾಯಿತು’ ಎಂದು ಫಿಂಚ್ ಹೇಳಿದ್ದಾರೆ. ಫಿಂಚ್ ಕಳೆದ 22 ಟಿ20 ಪಂದ್ಯಗಳಲ್ಲಿ 18ರಲ್ಲಿ ಟಾಸ್ ಜಯಿಸಿದ್ದಾರೆ.

    ಇದೇ ವೇಳೆ, ಪಂದ್ಯದ ಫಲಿತಾಂಶ ನಿರ್ಣಯಿಸುವಲ್ಲಿ ಟಾಸ್ ನಿರ್ಣಾಯಕ ಪಾತ್ರ ವಹಿಸುವುದನ್ನು ಐಸಿಸಿ ತಪ್ಪಿಸಬೇಕು. ಈ ಮೂಲಕ ಉಭಯ ತಂಡಗಳಿಗೂ ಸಮಾನ ಅವಕಾಶವನ್ನು ಕಲ್ಪಿಸಬೇಕು ಎಂದು ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಹೇಳಿದ್ದಾರೆ.

    ಆಸ್ಟ್ರೇಲಿಯಾದ ಈ ಗಂಡ-ಹೆಂಡತಿ ಈಗ ಟಿ20 ವಿಶ್ವ ಚಾಂಪಿಯನ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts