More

    ಮುಂದಿನ ಬಾರಿಗೆ ಜನರು ಅಧಿಕಾರ ನೀಡಿದರೆ ದೆಹಲಿ ವಾಯು ಮಾಲಿನ್ಯ ನಿಯಂತ್ರಿಸುತ್ತೇವೆ: ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್​

    ನವದೆಹಲಿ: ಮೊದಲ ಅವಧಿಯ ಆಡಳಿತದಲ್ಲಿ ಶಿಕ್ಷಣ, ಆರೋಗ್ಯ ಹಾಗೂ ರಕ್ಷಣೆಗೆ ಆದ್ಯತೆ ನೀಡಿದ ನಮ್ಮ ಸರ್ಕಾರ ಮುಂದಿನ ಅವಧಿಯಲ್ಲಿ ಅಧಿಕಾರಕ್ಕೆ ಬಂದರೆ ಸ್ವಚ್ಛತೆ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಮುಂದಾಗುತ್ತೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಹೇಳಿದ್ದಾರೆ.
    ನಮ್ಮ ಪಕ್ಷ ಅಭಿವೃದ್ಧಿ ವಿಚಾರಗಳನ್ನು ಪ್ರಸ್ತಾಪಿಸಿ ಪ್ರಚಾರ ಮಾಡುತ್ತಿದ್ದರೆ. ಬಿಜೆಪಿ ನಿಂದನೆ ಹಾಗೂ ಹಿಂಸಾಚಾರದ ವಿಚಾರದ ಮೂಲಕ ಮತ ಯಾಚಿಸುತ್ತಿದೆ ಎಂದು ಅವರು ಅಕ್ರೋಶ ವ್ಯಕ್ತಪಡಿಸಿದರು.
    ಬಿಜೆಪಿಗೆ ಅಭಿವೃದ್ಧಿ ಬೇಕಿಲ್ಲ. ಅವರಿಗೆ ಹಿಂದು ಹಾಗೂ ಮುಸ್ಲಿಮರ ಬಗ್ಗೆ ಮಾತ್ರ ಮಾತನಾಡುತ್ತಾರೆ. ನಾನು ದೆಹಲಿಯಲ್ಲಿ ಹೆಚ್ಚು ಸರ್ಕಾರಿ ಶಾಲೆ ಹಾಗೂ ಆಸ್ಪತ್ರೆ ಆರಂಭಿಸಬೇಕು. ನಿರಂತರ ವಿದ್ಯುತ್​ ಪೂರೈಕೆ ಮಾಡಬೇಕು, ಎಂದರೆ ಬಿಜೆಪಿ ಶಹೀನ್​ಬಾಗ್​ನಲ್ಲಿ ನಡೆಯುತ್ತಿರುವ ಪ್ರತಿಭಟನೆ ವಿಚಾರ ಮಾತ್ರ ಮಾತನಾಡುತ್ತಾರೆ. ದೆಹಲಿಯಲ್ಲಿ ಶಹೀನ್​ಬಾಗ್​ ಪ್ರತಿಭಟನೆ ಬಿಟ್ಟರೇ ಬೇರೆ ಸಮಸ್ಯೆಗಳು ಬಿಜೆಪಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.
    ಕೇಂದ್ರ ಗೃಹ ಸಚಿವರು ಶಹೀನ್​ಬಾಗ್​​ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಅಂತ್ಯಗೊಳಿಸಲು ಮುಂದಾಗುತ್ತಿಲ್ಲ. ಬದಲಿಗೆ ಮತದಾರರನ್ನು ಧ್ರುವೀಕರಿಸಲು ಪ್ರಯತ್ನಿಸುತ್ತಿದ್ದಾರೆ. ಮತದಾರರು ಧ್ರುವೀಕರಣವಾಗಿದ್ದಾರೆಯೇ ಎಂಬುದು ಫೆ.11ರಂದು ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts