More

    ಟಾಂಗಾ ಓಡಿಸುವವರ ಬದುಕಿಗಿಲ್ಲ ಆಧಾರ, ಸಂಕಷ್ಟದ ಸ್ಥಿತಿಯಲ್ಲಿ ಜಟಕಾ ಬಂಡಿ ನಡೆಸುವವರ ಜೀವನ

    ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
    ಲಾಕ್‌ಡೌನ್‌ನಿಂದ ಅನೇಕ ಬಡವರು, ಮಧ್ಯಮ ವರ್ಗದವರು ಸಂಕಷ್ಟಕ್ಕೆ ಒಳಗಾಗಿದ್ದರೆ, ಈ ಮಧ್ಯೆ ಟಾಂಗಾ ಓಡಿಸುವವರು (ಜಟಕಾ ಬಂಡಿ ) ಅಳಿವಿನಂಚಿಗೆ ಬಂದು ನಿಂತಿದ್ದಾರೆ.

    ಸಾಮಾನ್ಯ ದಿನಗಳಲ್ಲಿಯೇ ದಿನಕ್ಕೆ 300 ರಿಂದ 400 ರೂಪಾಯಿ ಸಂಪಾದನೆ ಮಾಡುತ್ತಿದ್ದ ಇವರು ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ಪರದಾಡುವಂತಾಗಿತ್ತು. ಲಾಕ್‌ಡೌನ್ ಸಡಿಲಗೊಂಡಿದ್ದರೂ ಯಾರೂ ಟಾಂಗಾ ಬಳಕೆಗೆ ಮುಂದಾಗುತ್ತಿಲ್ಲ. ಇದರಿಂದ ಜೀವನ ಇನ್ನಷ್ಟು ದುಸ್ಥರವಾಗುತ್ತಿದೆ.

    ಸರ್ಕಾರ ಕಾರ್ಮಿಕರು, ಅಸಂಘಟಿತ ಕಾರ್ಮಿಕರಿಗೂ ರೇಷನ್ ಕಿಟ್ ವಿತರಣೆ ಮಾಡಿತ್ತು. ಆದರೆ ಟಾಂಗಾ ಓಡಿಸುವ ವರ್ಗಕ್ಕೆ ಯಾರೂ ಕೂಡ ನೆರವಿನ ಹಸ್ತ ಚಾಚಿಲ್ಲ.

    ಜೀವನ ಸಾಗಲು ಕುದುರೆ ಮಾರಾಟ: ಕುಟುಂಬ ನಿರ್ವಹಣೆ, ಕರೆಂಟ್ ಬಿಲ್ ಕಟ್ಟಲು ಸಾಧ್ಯವಾಗದೆ ಮುಖ್ಯವಾಗಿ ಕುದುರೆಗೆ ಆಹಾರ ಒದಗಿಸಲಾಗದಂತಹ ಆರ್ಥಿಕ ಸಂಕಷ್ಟಕ್ಕೊಳಗಾದ ಟಾಂಗಾ ಓಡಿಸುವವರು ಜೀವಾನಾಧರವಾಗಿರುವ ಕುದುರೆಯನ್ನೇ ಮಾರಾಟ ಮಾಡಲು ಮುಂದಾಗಿದ್ದಾರೆ.

    ಅಳಿವಿನಂಚಿನಲ್ಲಿರುವ ಟಾಂಗಾ ವರ್ಗ!: ಬ್ರಿಟಿಷ್ ಕಾಲದಿಂದಲೂ ಇರುವ ಸಾರಿಗೆ ವ್ಯವಸ್ಥೆ ಟಾಂಗಾ, ಆಧುನಿಕತೆ ಭರಾಟೆ ಮಧ್ಯೆ ಆಟೋ, ಕಾರು, ಬೈಕ್ ಹೆಚ್ಚಾದಂತೆ ಟಾಂಗಾ ಬಳಕೆ ಕಡಿಮೆಯಾಗಿದೆ. ನಗರದಲ್ಲಿ 30ಕ್ಕೂ ಹೆಚ್ಚು ಕುಟುಂಬಗಳು ಟಾಂಗಾದಲ್ಲೇ ಬದುಕು ಸಾಗಿಸುತ್ತಿವೆ. ಲಾಕ್‌ಡೌನ್ ಸಂಕಷ್ಟದಿಂದ ಇರುವ ಬೆರಳೆಣಿಕೆಯಷ್ಟು ಮಂದಿ ಕೂಡ ವೃತ್ತಿ ತ್ಯಜಿಸಿ ಬೇರೆ ಕೆಲಸದತ್ತ ಮುಖ ಮಾಡುವಂತಾಗಿದೆ.

    ಲಾಕ್‌ಡೌನ್‌ನಿಂದಾಗಿ ಸಿಮೆಂಟ್, ಇಟ್ಟಿಗೆ ಸಾಗಣೆಗೆ ಕುದುರೆ ಟಾಂಗಾ ಬಳಸುತ್ತಿಲ್ಲ. ಉದ್ಯೋಗವಿಲ್ಲದೆ, ಜನಪ್ರತಿನಿಧಿಗಳ ಸಹಾಯವಿಲ್ಲದೆ ಜೀವನ ತೀರಾ ದುಸ್ಥಿತಿಯಲ್ಲಿದೆ.
    ಬಾಬಾಜಾನ್, ಟಾಂಗಾ ಚಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts