More

    ಟೊಮ್ಯಾಟೊ, ಮಾವಿಗೆ ಬೆಂಬಲ ಬೆಲೆ ನೀಡಿ: ರಾಷ್ಟ್ರೀಯ ಹೆದ್ದಾರಿಗೆ ಟೊಮ್ಯಾಟೊ ಸುರಿದು ರೈತರ ಪ್ರತಿಭಟನೆ

    ಮುಳಬಾಗಿಲು : ಪ್ರತಿ ಕೆಜಿಗೆ ಟೊಮ್ಯಾಟೊ, ಮಾವಿಗೆ ಸರ್ಕಾರ ತಕ್ಷಣ 10 ರೂ. ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿ ಮಾಡಬೇಕೆಂದು ರೈತ ಸಂಘ, ಎನ್.ವಡ್ಡಹಳ್ಳಿ ಮಂಡಿ ಮಾಲೀಕರ ಸಂಘ, ಎಪಿಎಂಸಿ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ರೈತರೊಂದಿಗೆ ರಾಷ್ಟ್ರೀಯ ಹೆದ್ದಾರಿ 75ರ ಎನ್.ವಡ್ಡಹಳ್ಳಿ ಬಳಿ ರಸ್ತೆಗೆ ಟೊಮ್ಯಾಟೊ ಸುರಿದು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

    ಎಪಿಎಂಸಿ ಅಧ್ಯಕ್ಷ ಗೊಲ್ಲಹಳ್ಳಿ ಪಿ.ವೆಂಕಟೇಶಪ್ಪ ಮಾತನಾಡಿ, ಕರೊನಾದಿಂದ ಟೊಮ್ಯಾಟೊ, ಮಾವು ಬೆಳೆಗಾರರ ಬದುಕು ಬೀದಿಗೆ ಬಿದ್ದಿದೆ. ಸರ್ಕಾರ ಟೊಮ್ಯಾಟೊ, ಮಾವಿಗೆ ಬೆಂಬಲ ಬೆಲೆ ಘೋಷಣೆ ಮಾಡದಿದ್ದರೆ ಟೊಮ್ಯಾಟೊವನ್ನು ಟ್ರ್ಯಾಕ್ಟರ್‌ಗಳಲ್ಲಿ ತುಂಬಿಕೊಂಡು ಬೆಂಗಳೂರಿನ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ಹಸಿರು ಸೇನೆ ತಾಲೂಕು ಅಧ್ಯಕ್ಷ ಯಲುವಹಳ್ಳಿ ಪ್ರಭಾಕರ್ ಮಾತನಾಡಿ, ಹಲವು ಸಂಕಷ್ಟದ ನಡುವೆ ಲಕ್ಷಾಂತರ ರೂ. ಬಂಡವಾಳ ಹಾಕಿ ಬೆಳೆದಿರುವ ಟೊಮ್ಯಾಟೊ, ಮಾವು ಬೆಳೆ ಸಮೃದ್ಧವಾಗಿ ಬಂದಿದ್ದರೂ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲದೆ ರಸ್ತೆಗೆ ಸುರಿಯುವಂತಾಗಿದೆ. ಸೌಜನ್ಯಕ್ಕೂ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ರೈತರ ಸಮಸ್ಯೆ ಕೇಳದೆ ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಎಪಿಎಂಸಿ ನಿರ್ದೇಶಕ ನಗವಾರ ಎನ್.ಆರ್.ಸತ್ಯಣ್ಣ ಮಾತನಾಡಿ, ಸತತ 15 ವರ್ಷಗಳಿಂದ ಎನ್.ವಡ್ಡಹಳ್ಳಿ ಟೊಮ್ಯಾಟೊ ಮಾರುಕಟ್ಟೆಯಲ್ಲಿ ತಾಲೂಕಿನ ರೈತರ ಟೊಮ್ಯಾಟೊ ಖರೀದಿಸಿ ದೂರದ ಪ್ರದೇಶಗಳಿಗೆ ಮಾರಾಟ ಮಾಡುತ್ತಿದ್ದು ಈಗ ಮಾರುಕಟ್ಟೆ ಇಲ್ಲದೆ ರೈತರು ತೊಂದರೆಗೆ ಒಳಗಾಗಿದ್ದಾರೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಉಪತಹಸೀಲ್ದಾರ್ ಕೆ.ಟಿ.ವೆಂಕಟೇಶಯ್ಯಗೆ ಮನವಿ ಸಲ್ಲಿಸಿದರು.

    ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ತಾಲೂಕು ಅಧ್ಯಕ್ಷ ಾರುಕ್‌ಪಾಷಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೇಲಾಗಾಣಿ ವಿಜಯ್‌ಪಾಲ್, ಹಸಿರು ಸೇನೆ ಜಿಲ್ಲಾಧ್ಯಕ್ಷ ಕಿರಣ್, ಕೋಲಾರ ಅಧ್ಯಕ್ಷ ಮಂಜುನಾಥ್, ಎನ್.ವಡ್ಡಹಳ್ಳಿ ಮಂಡಿ ಮಾಲೀಕರ ಸಂಘದ ಅಧ್ಯಕ್ಷ ಟಿವಿಎಸ್ ವೆಂಕಟರಮಣಪ್ಪ, ಕಾರ್ಯದರ್ಶಿ ಕೆ.ಎಸ್.ಪ್ರಭಾಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts