More

    ಟೋಲ್‌ಗೇಟ್‌ನಲ್ಲಿ ಆಂಬುಲೆನ್ಸ್ ಪಲ್ಟಿಯಾಗಿ ಮೂವರು ಸಾವು

    ಬೈಂದೂರು: ಶಿರೂರು ಟೋಲ್ ಗೇಟ್ ಬಳಿ ಆಂಬುಲೆನ್ಸ್ ಟೋಲ್‌ಗೇಟ್‌ಗೆ ಗುದ್ದಿ ಪಲ್ಟಿಯಾಗಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮೂವರನ್ನು ಕುಂದಾಪುರ ಆಸ್ಪತ್ರೆಗೆ ಸಾಗಿಸಲಾಗಿದೆ. ಹೊನ್ನಾವರದಿಂದ ಉಡುಪಿ ಆದರ್ಶ ಆಸ್ಪತ್ರೆಗೆ ರೋಗಿಯನ್ನು ಸಾಗಿಸುತ್ತಿರುವ ವೇಳೆ ಘಟನೆ ನಡೆದಿದೆ.

    ರೋಗಿಯೊಂದಿಗೆ 5 ಮಂದಿ ಪ್ರಯಾಣಿಸುತ್ತಿದ್ದರು. ರೋಗಿ ಸೇರಿದಂತೆ ಮೂರು ಮಂದಿ ಸಾವನ್ನಪ್ಪಿದ್ದು, ಬೈಂದೂರು ಆಸ್ಪತ್ರೆಯಲ್ಲಿ ಶವಗಳನ್ನು ಇರಿಸಲಾಗಿದೆ. ಚಾಲಕ ಸಣ್ಣಪುಟ್ಟ ಅಪಾಯದಿಂದ ಪಾರಾಗಿದ್ದಾರೆ. ಟೋಲ್ ಸಿಬ್ಬಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts