More

    VIDEO: ಟೋಕಿಯೊದಲ್ಲಿ ಕ್ರೀಡಾಹಬ್ಬ ಆರಂಭ ; ಸೂರ್ಯ ಉದಯಿಸುವ ನಾಡಲ್ಲಿ ಒಲಿಂಪಿಕ್ಸ್ ಶುರು

    ಟೋಕಿಯೊ: ಕರೊನಾ ಕಾಲದ ಸವಾಲುಗಳಿಗೆ ದಿಟ್ಟ ಉತ್ತರ ನೀಡುವ ನಿಟ್ಟಿನಲ್ಲಿ ಅಬ್ಬರ, ಆಡಂಬರಗಳಿಲ್ಲದೆ, ಶಿಸ್ತು-ಗಾಂಭೀರ್ಯಗಳಿಂದ ಕೂಡಿದ ಉದ್ಘಾಟನಾ ಸಮಾರಂಭದೊಂದಿಗೆ 32ನೇ ಆವೃತ್ತಿಯ ಟೋಕಿಯೊ ಒಲಿಂಪಿಕ್ಸ್‌ಗೆ ಶುಕ್ರವಾರ ಅಧಿಕೃತ ಚಾಲನೆ ದೊರೆತಿದೆ. ಕಳೆದ ಒಂದೂವರೆ ವರ್ಷದಿಂದ ಕರೊನಾ ವೈರಸ್ ಎಂಬ ಮಹಾಮಾರಿಯಿಂದಾಗಿ ತಲ್ಲಣಗೊಂಡಿದ್ದ ಜಗತ್ತಿಗೆ ಟೋಕಿಯೊ ಒಲಿಂಪಿಕ್ಸ್ ಹೊಸ ಭರವಸೆಯ ಹೆಬ್ಬಾಗಿಲು ತೆರೆದಿದೆ.

    ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಭರ್ಜರಿ ತಾಲೀಮು..,

    ‘ಮುಂದುವರಿಯೋಣ; ಭಾವತ್ಮಾಕ ಒಗ್ಗೂಡುವಿಕೆ’ ಎಂದು ಸಂದೇಶದೊಂದಿಗೆ ಆರಂಭಗೊಂಡ ಸರಳ ಸಮಾರಂಭ ಸಾಕಷ್ಟು ವಿಶೇಷತೆಗಳಿಗೆ ಸಾಕ್ಷಿಯಾಯಿತು. ಜಪಾನ್ ಚಕ್ರವರ್ತಿ ನರುಹಿಟೊ ಕ್ರೀಡಾಕೂಟ ಉದ್ಘಾಟನೆಯನ್ನು ಅಧಿಕೃತವಾಗಿ ೋಷಿಸಿದರು. ಸಮಾರಂಭಕ್ಕೂ ಮುನ್ನ 20 ಸೆಕೆಂಡ್‌ಗಳ ಕಾಲ ‘ಟೋಕಿಯೊ 2020’ರ ಲಾಂಛನದ ಇಂಡಿಗೊ ಹಾಗೂ ಬಿಳಿ ಬಣ್ಣದ ಪಟಾಕಿಗಳನ್ನು ಬಾನೆತ್ತರಕ್ಕೆ ಸಿಡಿಸಲಾಯಿತು. ಜತೆಗೆ ಜಪಾನ್ ಸಂಸ್ಕೃತಿಯ ಭಾಗವಾಗಿರುವ ಬೀಸಣಿಗೆಯ ಆಕಾರ ಹೊಂದಿತ್ತು. ಬಹುತೇಕ ಖಾಲಿಯಾಗಿದ್ದ 68 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಸ್ಟೇಡಿಯಂನಲ್ಲಿ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬಿಡೆನ್ ಸೇರಿದಂತೆ 950 ಗಣ್ಯರಷ್ಟೇ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಆಡಂಬರಕ್ಕೆ ಜಾಗವಿಲ್ಲದಿದ್ದರೂ ಜಪಾನ್‌ನ ಸುಂದರ ಇತಿಹಾಸ ಹಾಗೂ ಸಂಸ್ಕೃತಿಯನ್ನು ಅನಾವರಣಗೊಳಿಸುವ ಸುಂದರ ವೇದಿಕೆ ಸೃಷ್ಟಿಯಾಯಿತು. ಒಟ್ಟಾರೆ ಸುಮಾರು 10 ಸಾವಿರ ಮಂದಿ ಸಮಾರಂಭದ ಭಾಗವಾಗಿದ್ದರು. 2012ರ ಲಂಡನ್ ಒಲಿಂಪಿಕ್ಸ್ ಮತ್ತು 2016ರ ರಿಯೋ ಒಲಿಂಪಿಕ್ಸ್‌ಗೆ ಹೋಲಿಸಿದರೆ, ಇದು ಅತ್ಯಂತ ಸರಳ ಸಮಾರಂಭವೆನಿಸಿದರೂ, ಹಾಲಿ ಸವಾಲಿನ ಸನ್ನಿವೇಶದಲ್ಲಿ ಇದುವೇ ಸೂಕ್ತವೆನಿಸಿತು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts