More

    ಕೇರಳದಲ್ಲಿ ಇಂದು, ನಾಳೆ ಸಂಪೂರ್ಣ ಲಾಕ್​ಡೌನ್

    ತಿರುವನಂತಪುರಂ : ದೇಶಾದ್ಯಂತ ಕರೊನಾ ಸೋಂಕಿನ ಸಂಖ್ಯೆ ಇಳಿಮುಖವಾಗಿರುವಾಗ, ಅತಿ ಹೆಚ್ಚು ನಿತ್ಯ ಪ್ರಕರಣಗಳನ್ನು ದಾಖಲಿಸುತ್ತಿರುವ ಕೇರಳ ರಾಜ್ಯದಲ್ಲಿ, ಇಂದು, ನಾಳೆ ಸಂಪೂರ್ಣ ಲಾಕ್​ಡೌನ್​ ಘೋಷಣೆಯಾಗಿದೆ. ಕಳೆದ ವಾರಾಂತ್ಯದಂತೆಯೇ ಈ ಶನಿವಾರ, ಭಾನುವಾರವೂ, ಕಠಿಣ ಮಾರ್ಗಸೂಚಿಗಳೊಂದಿಗೆ ಲಾಕ್​ಡೌನ್ ಜಾರಿಯಲ್ಲಿರುವುದು ಎಂದು ಕೇರಳ ಸರ್ಕಾರ ಆದೇಶ ಹೊರಡಿಸಿದೆ.

    ಆದರೆ, ಜುಲೈ 20 ಅಥವಾ 21 ರಂದು ಸಲ್ಲುವ ಬಕ್ರೀದ್​ ಹಬ್ಬದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿನ ಲಾಕ್​ಡೌನ್ ನಿರ್ಬಂಧಗಳನ್ನು ಜುಲೈ 18 ರಿಂದ 20 ರವರೆಗೆ ಸಡಿಲಗೊಳಿಸಲಾಗುವುದು. ಆ ದಿನಗಳಲ್ಲಿ ಅಗತ್ಯ ವಸ್ತುಗಳ ಮಳಿಗೆಗಳೊಂದಿಗೆ, ಬಟ್ಟೆ ಅಂಗಡಿ, ಪಾದರಕ್ಷೆ, ಒಡವೆ, ಎಲೆಕ್ಟ್ರಾನಿಕ್ಸ್​ ಮಳಿಗೆಗಳಿಗೆ ರಾತ್ರಿ 8 ರವರೆಗೆ ತೆರೆಯುವ ಅವಕಾಶ ನೀಡಲಾಗುವುದು ಎನ್ನಲಾಗಿದೆ.

    ಇದನ್ನೂ ಓದಿ: ಆ ಪ್ರಾಪರ್ಟಿ ದೊಡ್ಡಮನೆಯವರದ್ದು, ಹಾಗಾಗಿ ದರ್ಶನ್​ಗೆ ಆಸ್ತಿ ಕೊಡಲ್ಲ ಅಂದೆ…

    ಶುಕ್ರವಾರದಂದು ಕೇರಳದಲ್ಲಿ 13,750 ಹೊಸ ಕರೊನಾ ಪ್ರಕರಣಗಳು ದಾಖಲಾಗಿದ್ದು, 130 ಕರೊನಾ ಸಂಬಂಧಿತ ಸಾವುಗಳು ಸಂಭವಿಸಿವೆ. “ರಾಜ್ಯದಲ್ಲಿ ಪಾಸಿಟಿವಿ ರೇಟ್​ ಶೇ. 30 ರಷ್ಟಿದ್ದದ್ದು ಈಗ ಶೇ. 10.4 ಕ್ಕೆ ಇಳಿದಿದೆ. ಕೇರಳದಲ್ಲಿ ಎರಡನೇ ಅಲೆಯು ನಿಧಾನವಾಗಿ ಆರಂಭವಾಗಿ, ನಿಧಾನವಾಗಿ ಅಂತ್ಯಗೊಳ್ಳುತ್ತಿದೆ” ಎಂದು ನಿನ್ನೆಯ ದಿನ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್​ನಲ್ಲಿ ಸಿಎಂ ಪಿಣರಾಯಿ ವಿಜಯನ್​ ತಿಳಿಸಿದ್ದರು ಎನ್ನಲಾಗಿದೆ.

    ರಾಜ್ಯದಲ್ಲಿ ಲಸಿಕಾ ಅಭಿಯಾನಕ್ಕೆ ವೇಗ ನೀಡಲು ಜುಲೈ ಮತ್ತು ಆಗಸ್ಟ್​ನಲ್ಲಿ 60 ಲಕ್ಷ ಡೋಸ್ ಕರೊನಾ ಲಸಿಕೆ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ರಾಜ್ಯದಲ್ಲಿ ಈವರೆಗೆ 1.17 ಕೋಟಿ ಜನರಿಗೆ ಕರೊನಾ ಲಸಿಕೆಯ ಮೊದಲನೇ ಡೋಸ್​ ನೀಡಲಾಗಿದ್ದು, 44.18 ಲಕ್ಷ ಜನರು ಎರಡೂ ಡೋಸ್​ಗಳನ್ನು ಪಡೆದಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಿವಿಮಾತು

    ‘ತೂಫಾನ್’ ಚಿತ್ರಕ್ಕೆ ಭರಪೂರ ಪ್ರಶಂಸೆ ನೀಡಿದ ಶಾರೂಖ್ ಖಾನ್​

    ಮೇಕೆದಾಟು ಯೋಜನೆ ಅನುಷ್ಠಾನ ಶತಸ್ಸಿದ್ಧ : ದೆಹಲಿಯಲ್ಲಿ ಬಿಎಸ್​ವೈ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts