More

    ಮುಂಬೈಗೆ ಹ್ಯಾಟ್ರಿಕ್ ಗೆಲುವಿನ ಹಂಬಲ, ಹಾಲಿ ಚಾಂಪಿಯನ್ಸ್‌ಗೆ ಇಂದು ರಾಜಸ್ಥಾನ ರಾಯಲ್ಸ್ ಎದುರಾಳಿ

    ಅಬುಧಾಬಿ: ಸತತ ಎರಡು ಗೆಲುವು ದಾಖಲಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್-13ರ ತನ್ನ 6ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮಂಗಳವಾರ ಎದುರಿಸಲಿದೆ. ಭಾನುವಾರ ಸನ್‌ರೈಸರ್ಸ್‌ ಎದುರು ಭರ್ಜರಿ ಜಯ ದಾಖಲಿಸಿರುವ ಮುಂಬೈ ತಂಡ ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ, ಸತತ ಎರಡು ಸೋಲನುಭವಿಸಿರುವ ರಾಜಸ್ಥಾನ ರಾಯಲ್ಸ್ ಗೆಲುವಿನ ಹಳಿ ಏರುವ ತವಕದಲ್ಲಿದೆ.
    ಆರ್‌ಸಿಬಿ ವಿರುದ್ಧ ಸೂಪರ್ ಓವರ್‌ನಲ್ಲಿ ಸೋತ ಬಳಿಕ ಪಂಜಾಬ್ ಎದುರು 48 ರನ್ ಹಾಗೂ ಸನ್‌ರೈಸರ್ಸ್‌ ಎದುರು 34 ರನ್‌ಗಳಿಂದ ಜಯ ದಾಖಲಿಸಿದ ಮುಂಬೈ ಇಂಡಿಯನ್ಸ್ ತಂಡ ಉತ್ತಮ ಲಯದಲ್ಲಿದೆ. ಆರಂಭಿಕ ಕ್ವಿಂಟನ್ ಡಿಕಾಕ್ ಕೂಡ ಾರ್ಮ್‌ಗೆ ಮರಳಿರುವುದು ತಂಡದ ವಿಶ್ವಾಸ ಹೆಚ್ಚಿಸಿದೆ. ಇಶಾನ್ ಕಿಶನ್, ಪಾಂಡ್ಯ ಬ್ರದರ್ಸ್‌, ಕೈರಾನ್ ಪೊಲ್ಲಾರ್ಡ್ ಒಳಗೊಂಡ ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ. ಜೇಮ್ಸ್ ಪ್ಯಾಟಿನ್‌ಸನ್, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್ ಬುಮ್ರಾ ಒಳಗೊಂಡ ವೇಗಿಗಳ ಬಳಗ ಮತ್ತೊಂದು ಮಾರಕ ದಾಳಿಗೆ ಸಜ್ಜಾಗಿದೆ.
    ಗೆಲುವಿನ ತವಕದಲ್ಲಿ ರಾಯಲ್ಸ್: ಆರಂಭಿಕ ಎರಡೂ ಪಂದ್ಯಗಳಲ್ಲಿ ಗೆದ್ದು ಬಳಿಕ ಸತತ 2 ಸೋಲನುಭವಿಸಿರುವ ರಾಜಸ್ಥಾನ ರಾಯಲ್ಸ್ ತಂಡ ಗೆಲುವಿನ ಹಾದಿಗೆ ಮರಳುವ ತವಕದಲ್ಲಿದೆ. ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಯುಎಇಗೆ ತಲುಪಿದರೂ ಕ್ವಾರಂಟೈನ್‌ನಲ್ಲಿರುವುದರಿಂದ ಅ.11ರವರೆಗೂ ತಂಡಕ್ಕೆ ಅಲಭ್ಯರಾಗಿದ್ದಾರೆ. ಅನುಭವಿ ಜೋಸ್ ಬಟ್ಲರ್, ಸ್ಟೀವನ್ ಸ್ಮಿತ್ ನಿರೀಕ್ಷಿತ ಮಟ್ಟದಲ್ಲಿ ಸಿಡಿಯುತ್ತಿಲ್ಲ. ಅನುಭವಿ ಜೈದೇವ್ ಉನಾದ್ಕತ್ ಕೂಡ ವಿಲರಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಪರಾಸ್ ಪರಾಗ್ ಅಥವಾ ರಾಬಿನ್ ಉತ್ತಪ್ಪ ಅವರನ್ನು ಕೈಬಿಟ್ಟು ಯಶಸ್ವಿ ಜೈಸ್ವಾಲ್‌ಗೆ ಅವಕಾಶ ನೀಡುವ ಸಾಧ್ಯತೆಗಳಿವೆ. ಜೈಸ್ವಾಲ್ ಹಾಗೂ ಬಟ್ಲರ್ ಇನಿಂಗ್ಸ್ ಆರಂಭಿಸಿದರೆ ಸ್ಮಿತ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯಬಹುದು.  ಆರ್ಚರ್, ಟಾಮ್ ಕರ‌್ರನ್ ಮಿಂಚುತ್ತಿದ್ದಾರೆ. ಪವರ್ ಪ್ಲೇ ಅಥವಾ ಡೆತ್ ಓವರ್‌ಗಳ ಆಯ್ಕೆಯೇ ಉನಾದ್ಕತ್‌ಗೆ ಗೊಂದಲವಾಗಿದೆ.

    * ಟೀಮ್ ನ್ಯೂಸ್: 

    ಮುಂಬೈ ಇಂಡಿಯನ್ಸ್: ಗೆಲುವಿನ ಲಯದಲ್ಲಿರುವುದರಿಂದ ಹಿಂದಿನ ಪಂದ್ಯದಲ್ಲಿ ಆಡಿದ ತಂಡವನ್ನೇ ಬಹುತೇಕ ಕಣಕ್ಕಿಳಿಸಲಿದೆ. ರೋಹಿತ್ ಬಳಗಕ್ಕೆ ಸದ್ಯಕ್ಕೆ ಬದಲಾವಣೆಯೂ ಅನಿವಾರ್ಯವಿಲ್ಲ. ಒಂದು ವೇಳೆ ಮುಂಬೈ ತಂಡ ಬದಲಾವಣೆ ಕಾಣದಿದ್ದರೆ ಸತತ 4ನೇ ಪಂದ್ಯದಲ್ಲಿ ಒಂದೇ ತಂಡ ಆಡಿದಂತಾಗುತ್ತದೆ.
    ಕಳೆದ ಪಂದ್ಯ: ಸನ್‌ರೈಸರ್ಸ್‌ ಎದುರು 34 ರನ್ ಜಯ.

    ಸಂಭಾವ್ಯ ತಂಡ: ಕ್ವಿಂಟನ್ ಡಿಕಾಕ್ (ವಿಕೀ), ರೋಹಿತ್ ಶರ್ಮ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ,ಕೈರಾನ್ ಪೊಲ್ಲಾರ್ಡ್, ಕೃನಾಲ್ ಪಾಂಡ್ಯ, ರಾಹುಲ್ ಚಹರ್, ಜೇಮ್ಸ್ ಪ್ಯಾಟಿನ್‌ಸನ್, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್ ಬುಮ್ರಾ.

    ರಾಜಸ್ಥಾನ ರಾಯಲ್ಸ್: ಕನಿಷ್ಠ ಎರಡು ಬದಲಾವಣೆ ತಂಡಕ್ಕೆ ಅನಿವಾರ್ಯ. ಅನುಭವಿಗಳಾದ ರಾಬಿನ್ ಉತ್ತಪ್ಪ ಹಾಗೂ ವೇಗಿ ಜೈದೇವ್ ಉನಾದ್ಕತ್ ಸತತವಾಗಿ ವಿಫಲರಾಗುತ್ತಿದ್ದಾರೆ. ರಾಬಿನ್ ಉತ್ತಪ್ಪ ಬದಲಿಗೆ ಆರಂಭಿಕ ಯಶಸ್ವಿ ಜೈಸ್ವಾಲ್ ಹಾಗೂ ಉನಾದ್ಕತ್ ಬದಲಿಗೆ ಕಾರ್ತಿಕ್ ತ್ಯಾಗಿ ಅಥವಾ ವರುಣ್ ಆರನ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ. ಒಂದು ವೇಳೆ ಅನುಭವಿ ಉತ್ತಪ್ಪಗೆ ಮತ್ತೊಂದು ಅವಕಾಶ ನೀಡಿದರೆ ರಿಯಾನ್ ಪರಾಗ್‌ಗೆ ಕೊಕ್ ನೀಡಬಹುದು.
    ಕಳೆದ ಪಂದ್ಯ: ಆರ್‌ಸಿಬಿ ವಿರುದ್ಧ 8 ವಿಕೆಟ್ ಸೋಲು.

    ಸಂಭಾವ್ಯ ತಂಡ: ಯಶಸ್ವಿ ಜೈಸ್ವಾಲ್/ರಾಬಿನ್ ಉತ್ತಪ್ಪ, ಜೋಶ್ ಬಟ್ಲರ್ (ವಿಕೀ), ಸ್ಟೀವನ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ಮಹಿಪಾಲ್ ಲೊಮ್ರೊರ್, ರಾಹುಲ್ ತೆವಾಟಿಯಾ, ಟಾಮ್ ಕರ‌್ರನ್, ಶ್ರೇಯಸ್ ಗೋಪಾಲ್, ಆರ್ಚರ್, ಜೈದೇವ್ ಉನಾದ್ಕತ್/ಕಾರ್ತಿಕ್ ತ್ಯಾಗಿ.

    ಪಂದ್ಯ ಆರಂಭ: ರಾತ್ರಿ : 7.30ಕ್ಕೆ
    ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್  
    ಮುಖಾಮುಖಿ: 20, ಮುಂಬೈ ಇಂಡಿಯನ್ಸ್: 10, ರಾಜಸ್ಥಾನ ರಾಯಲ್ಸ್: 10.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts