More

    ಇಂದು ಅಂಗವಿಕಲ ಮಕ್ಕಳಿಗಾಗಿ ಕಿಡ್ಸ್ ಫಿಯೆಸ್ಟಾ

    ಶಿವಮೊಗ್ಗ: ರೌಂಡ್ ಟೇಬಲ್-166 ಹಾಗೂ ಸರ್ಜಿ ಫೌಂಡೇಷನ್ ಸಹಯೋಗದಲ್ಲಿ ನ.18ರ ಬೆಳಗ್ಗೆ 11ಕ್ಕೆ ಬಿಎಚ್ ರಸ್ತೆ ಸ್ಕೌಟ್ ಭವನದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಾಧವ ನೆಲೆ ಹಾಗೂ ಅಂಗವಿಕಲ ಮಕ್ಕಳಿಗಾಗಿ ಕಿಡ್ಸ್ ಫಿಯೆಸ್ಟಾ-2023 ಆಯೋಜಿಸಲಾಗಿದೆ ಎಂದು ರೌಂಟ್ ಟೇಬಲ್‌ನ ಅಧ್ಯಕ್ಷ ವಿಶ್ವಾಸ್ ಬಿ.ಕಾಮತ್ ತಿಳಿಸಿದ್ದಾರೆ.

    ಮಾಧವ ನೆಲೆ, ಶಾರದಾ ದೇವಿ ಅಂಧರ ವಿಕಾಸ ಶಾಲೆ, ತರಂಗ ಕಿವುಡು ಮಕ್ಕಳ ಶಾಲೆ, ಸರ್ಜಿ ಫೌಂಡೇಷನ್, ತಾಯಿ ಮನೆ ಹಾಗೂ ಹ್ಯಾಪಿ ಹೋಂನ ಸುಮಾರು 200 ಮಕ್ಕಳು ಇದರಲ್ಲಿ ಭಾಗವಹಿಸಲಿದ್ದಾರೆ. ಮಕ್ಕಳಿಗೆ ವಿವಿಧ ಸ್ಪರ್ಧೆ, ಆಟೋಟಗಳನ್ನು ಆಯೋಜಿಸುವ ಮೂಲಕ ಅವರಲ್ಲಿನ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಒದಗಿಸಲಾಗುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಈ ಮಕ್ಕಳು ಒಂದಿಡೀ ದಿನವನ್ನು ಸಂತೋಷವಾಗಿ ಕಳೆಯಲು ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ. ವಿವಿಧ ಬಗೆಯ ತಿಂಡಿ ತಿನಿಸುಗಳನ್ನೂ ಒದಗಿಸಲಾಗುತ್ತದೆ. ಮಕ್ಕಳಿಗೆ ಟ್ಯಾಟೂ ಹಾಕಲಾಗುತ್ತದೆ. ಮನರಂಜನೆಯ ಆಟಗಳನ್ನು ಆಡಿಸಲಾಗುತ್ತದೆ ಎಂದರು.
    ಚೀನಾದಲ್ಲಿ ಜರುಗಿದ ಪ್ಯಾರಾಒಲಿಂಪಿಕ್‌ನಲ್ಲಿ ಕಂಚಿನ ಪದಕ ಗೆದ್ದ ಶಿವಮೊಗ್ಗದ ವೃತ್ತಿ ಜೈನ್ ಹಾಗೂ ಕಿಶನ್ ಗಂಗೊಳ್ಳಿ ಅವರನ್ನು ಸನ್ಮಾನಿಸಲಾಗುತ್ತದೆ. ಸರ್ಜಿ ಫೌಂಡೇಷನ್‌ನ ಮುಖ್ಯಸ್ಥ ಡಾ. ಧನಂಜಯ ಸರ್ಜಿ, ವ್ಯಾಲ್ಯೂ ಪ್ರಾಡಕ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
    ಡಾ. ಧನಂಜಯ ಸರ್ಜಿ ಮಾತನಾಡಿ, ಅಂಗವಿಕಲ ಮಕ್ಕಳ ಪಾಲನೆಗೆ ಒಂದಿಡೀ ಕುಟುಂಬ ತ್ಯಾಗ ಮಾಡಬೇಕಾಗುತ್ತದೆ. ಅವರ ಆರೈಕೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಅದರಲ್ಲೂ ತಾಯಂದಿರ ಮೇಲಿನ ಹೆಚ್ಚಿನ ಜವಾಬ್ದಾರಿಯಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸಮಾಜ ಕೂಡ ಅಂಗವಿಕಲರಿಗಾಗಿ ಮಿಡಿಯುತ್ತಿದೆ. ಇಂತಹ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕೆಂದರು.
    ಶಿವಮೊಗ್ಗ ರೌಂಡ್ ಟೇಬಲ್-166ರ ಕಾರ್ಯದರ್ಶಿ ಈಶ್ವರ್ ಸರ್ಜಿ, ಖಜಾಂಚಿ ಗುರು, ಪ್ರಮುಖರಾದ ಸಿದ್ಧಾರ್ಥ್, ಕಮಲೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts