More

    ಇಂದು ಪಾಲಕೆ ಬಜೆಟ್ ಮಂಡನೆ; ಚುನಾವಣಾ ಹಿನ್ನೆಲೆ ಜನಪರ ಯೋಜನೆ ತೆರಿಗೆ ಹೊರೆಯಿಲ್ಲ

    ವಿಶೇಷ ವರದಿ ತುಮಕೂರು: ವಿಧಾನಸಭಾ ಚುನಾವಣೆ ದಿನಗಣನೆ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಬಜೆಟ್‌ನಲ್ಲಿ ತುಮಕೂರಿಗರ ಹೆಗಲಿಗೆ ತೆರಿಗೆ ಹೊರೆ ಬೀಳುವ ಸಾಧ್ಯತೆ ಇಲ್ಲ. ಈ ಬಾರಿ ಮೇಯರ್ ಎಂ.ಪ್ರಭಾವತಿ ಮಂಡಿಸುವ ಇ-ಬಜೆಟ್ ಸಹ ಉಳಿತಾಯ ಆಯವ್ಯಯ ಆಗಿರಲಿದೆ.

    ಬುಧವಾರ ಮಹಾನಗರ ಪಾಲಿಕೆಯ 2023-24ನೇ ಸಾಲಿನ ಬಜೆಟ್‌ನತ್ತ ನಗರದ ಜನರ ಚಿತ್ತ ಹರಿದಿದ್ದು, ಸರ್ಕಾರದ ಅನುದಾನದ ಪಾಲನ್ನು ಆಧರಿಸಿ ಬಜೆಟ್ ರೂಪಿಸಲು ಸಾಕಷ್ಟು ಕಸರತ್ತು ನಡೆಸಲಾಗಿದ್ದು, ಚುನಾವಣೆ ದೃಷ್ಟಿಯನ್ನಿಟ್ಟುಕೊಂಡು ಜನಪರ ಬಜೆಟ್ ಕೊಡುವ ನಿರೀಕ್ಷೆಗಳು ಹೆಚ್ಚಿವೆ.

    ಇಂದು ಪಾಲಕೆ ಬಜೆಟ್ ಮಂಡನೆ; ಚುನಾವಣಾ ಹಿನ್ನೆಲೆ ಜನಪರ ಯೋಜನೆ ತೆರಿಗೆ ಹೊರೆಯಿಲ್ಲ
    
    ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಫೀಲುಗಳ ಸ್ಥಾಯಿಸಮಿತಿ ಅಧ್ಯಕ್ಷರ ಬದಲು ಮೇಯರ್ ಪ್ರಭಾವತಿ ಅವರೇ ಬಜೆಟ್ ಮಂಡಿಸುತ್ತಿರುವುದು ವಿಶೇಷ ಎನಿಸಿದೆ. ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಬಿಜೆಪಿಯ ನಳಿನಾಇಂದ್ರಕುಮಾರ್ ಕಳೆದ ಎರಡು ಅವಧಿಯ ಬಜೆಟ್ ಮಂಡಿಸಿದ್ದು ವಿಶೇಷ.

    ಈ ಬಾರಿ ಹಣಕಾಸು, ತೆರಿಗೆ ಸ್ಥಾಯಿಸಮಿತಿಯನ್ನು ಆಡಳಿತರೂಢ ಕಾಂಗ್ರೆಸ್ ತನ್ನಲ್ಲೇ ಇಟ್ಟುಕೊಂಡಿದ್ದು, ನಾಸೀರಾಬಾನುಗೆ ಬಜೆಟ್ ಮಂಡಿಸುವ ಅವಕಾಶ ಸಿಕ್ಕಿತ್ತು. ಅನಾರೋಗ್ಯದಿಂದಾಗಿ ನಾಸೀರಾ ಬದಲು ಮೇಯರ್‌ಗೆ ಆಯವ್ಯಯ ಮಂಡಿಸುವ ಸುಯೋಗ ಒದಗಿಬಂದಿದೆ.

    ಜೆ.ಕುಮಾರ್, ಮಾಜಿ ಮೇಯರ್ ಫರಿದಾಬೇಗ್ ಕೂಡ ಬಜೆಟ್ ಮಂಡಿಸಲು ಆಸಕ್ತಿ ತೋರಿದ್ದರಾದರೂ ಮಾಜಿ ಶಾಸಕ ಎಸ್.ರಫೀಕ್ ಅಹ್ಮದ್ ನಿರ್ದೇಶನದಂತೆ ಮಹಾಪೌರರೇ ಬಜೆಟ್ ಮಂಡಿಸಲಿದ್ದಾರೆ ಎನ್ನಲಾಗಿದೆ.

    ಈ ಚುನಾಯಿತ ಮಂಡಳಿಯ ಆಡಳಿತಾವಧಿ ಕೊನೆಯ ಬಜೆಟ್ ಇದಾಗಿದ್ದು ಪಾಲಿಕೆಯ ಈ ಬಜೆಟ್ ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆಯೇ ಎಂಬ ನಿರೀಕ್ಷೆಗಳನ್ನು ಸಹಜವಾಗಿ ಗರಿಗೆದರಿಸಿದೆ.

    ಹರಿದುಬಂದ ದೇಣಿಗೆ: ಪಾಲಿಕೆಯ ಸಂಪ್ರದಾಯದಂತೆ ಬಜೆಟ್ ವಿಶೇಷ ಸಭೆ ಸಂದರ್ಭದಲ್ಲಿ ಕಾರ್ಪೋರೇಟರ್‌ಗಳಿಗೆ ‘ಗಿಫ್ಟ್ ’ ಕೊಡಲು ವಿವಿಧ ಶಾಖೆಗಳಿಂದ ದೇಣಿಗೆ ಸಂಗ್ರಹಿಸಲಾಗುತ್ತದೆ. ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ದೇಣಿಗೆ ಹರಿದುಬಂದಿದೆ. ಲೆಕ್ಕಶಾಖೆ -1 ಲಕ್ಷ , ಆರೋಗ್ಯ ಶಾಖೆ- 1 ಲಕ್ಷ, ಕಂದಾಯ ಶಾಖೆ- 2 ಲಕ್ಷ ಹಾಗೂ ಇಂಜಿನಿಯರಿಂಗ್ ಸೆಕ್ಷನ್ ನಿಂದ 2 ಲಕ್ಷ ರೂ., ಒಟ್ಟು 6 ಲಕ್ಷ ರೂ., ಸಂಗ್ರಹವಾಗಿದ್ದು ಬಜೆಟ್ ಹಬ್ಬದ ಸಂಭ್ರಮ ಹೆಚ್ಚಿಸಿದೆ ಎನ್ನಲಾಗಿದೆ.

    ಮೆನು ಕಿರಿಕ್, ನಾನ್‌ವೆಜ್‌ಗೆ ಕೊಕ್ !: ಬಜೆಟ್ ಅಂದರೆ ಪಾಲಿಕೆಯಲ್ಲಿ ಹಬ್ಬದ ಸಂಭ್ರಮ. ಪ್ರತ್ಯೇಕವಾಗಿ ಸಸ್ಯಹಾರಿಗಳಿಗೆ ಒಬ್ಬಟ್ಟಿನ ಊಟ, ನಾನ್‌ವೆಜ್ ಪ್ರಿಯರಿಗೆ ಬಾಡೂಟ ಏರ್ಪಡಿಸುವುದು ವಾಡಿಕೆ. ಈ ಬಾರಿ ಮೆನು ಕಿರಿಕ್‌ನಿಂದಾಗಿ ನಾನ್‌ವೆಜ್ ಕೈಬಿಡಲಾಗಿದೆ. ಸ್ಥಾಯಿಸಮಿತಿ ಅಧ್ಯಕ್ಷೆಯ ಪತಿರಾಯ, ಹಿರಿಯ ಕಾರ್ಪೋರೇಟರ್ ಈ ಬಾರಿ ‘ಬಜೆಟ್’ ಹಬ್ಬದ ಉಸ್ತುವಾರಿ ಹೊತ್ತುಕೊಂಡಿದ್ದು, ಮೇಯರ್ ಹಸ್ತಕ್ಷೇಪವೇನೂ ಇದರಲ್ಲಿ ಇಲ್ಲ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts