More

    ವಿಶ್ವಕ್ಕೆ ಭಾರತದ ಸನಾತನ ಧರ್ಮ ಮಾದರಿ

    ಹಿರೇಬಾಗೇವಾಡಿ: ಮಹಾನ್ ಸಂತರು ಹಾಗೂ ಋಷಿ ಮುನಿಗಳು ನಡೆದಾಡಿರುವ ಈ ಕನ್ನಡನಾಡು ಪುಣ್ಯ ಭೂಮಿಯಾಗಿದೆ ಎಂದು ಉಜ್ಜಯಿನಿಯ ನರ್ಮದಾನಂದ ಸ್ವಾಮೀಜಿ ಹೇಳಿದ್ದಾರೆ.

    ಪಾದಯಾತ್ರೆ ಮೂಲಕ ದ್ವಾದಶ ಜ್ಯೋತಿರ್ಲಿಂಗ ದರ್ಶನಕ್ಕೆ ಹೊರಟಿರುವ ಅವರು ಮಾರ್ಗ ಮಧ್ಯದ ಹಿರೇಬಾಗೇವಾಡಿಯ ಪಡಿಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರ ತಂಗಿದ್ದು, ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಇಡೀ ಜಗತ್ತಿಗೇ ಭಾರತದ ಸನಾತನ ಧರ್ಮ ಮಾದರಿಯಾಗಿದೆ. ವಿದೇಶದಲ್ಲಿ 18 ವರ್ಷದ ನಂತರ ಮಕ್ಕಳ ಮೇಲಿನ ಹಕ್ಕನ್ನು ಪಾಲಕರು ಕಳೆದುಕೊಳ್ಳುತ್ತಾರೆ. ಅವರ ಮಾತನ್ನೂ ಮಕ್ಕಳು ಕೇಳುವುದಿಲ್ಲ. ಆದರೆ, ಭಾರತದಲ್ಲಿ ಕೊನೆವರೆಗೂ ತಂದೆ-ತಾಯಿಗಳು ಮಕ್ಕಳಿಗೆ ಪೂಜನೀಯರಾಗಿರುತ್ತಾರೆ. ಹೆತ್ತವರ ಆಶಯದಂತೆಯೇ ಬಹುತೇಕ ಎಲ್ಲ ಮಕ್ಕಳೂ ಅನುಸರಿಸಿ ನಡೆದುಕೊಳ್ಳುವುದು ನಮ್ಮ ಸನಾತನ ಧರ್ಮದ ಸಾರವಾಗಿದೆ ಎಂದರು.

    ಗೋವು ಸಂರಕ್ಷಣೆ ಮಾಡಿ: ವಿದೇಶಿಗರು ತಮ್ಮ ಜೀವನವನ್ನು ಭೋಗ ವಿಲಾಸಕ್ಕಾಗಿ ಮೀಸಲಿಟ್ಟರೆ, ಭಾರತೀಯರು ಸಂಸ್ಕೃತಿ ಮತ್ತು ಧರ್ಮದ ಉಳಿವಿಗಾಗಿ ಜೀವನ ನಡೆಸುತ್ತಾರೆ. ಎಂಥಹುದೇ ಕಷ್ಟ ಬಂದರೂ ನಮ್ಮನ್ನು ನಮ್ಮ ಸಂಸ್ಕೃತಿ ಕಾಪಾಡಿದೆ. ವನ್ಯ ಸಂಪತ್ತು, ಜಲ ಮತ್ತು ಗೋವು ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ. ಅವುಗಳ ನಾಶವಾದರೆ ಮನುಷ್ಯ ಕುಲದ ಅವನತಿಗೆ ಕಾರಣವಾಗಲಿದೆ. ಅವುಗಳ ಸಂರಕ್ಷಣೆಯಲ್ಲೇ ಮಾನವನ ಭವಿಷ್ಯ ಅಡಗಿದೆ ಎಂದರು.

    ವಿಶ್ವಗುರು ಭಾರತ: ಅರಳೀಕಟ್ಟಿ ತೋಂಟೇಶ್ವರ ವಿರಕ್ತ ಮಠದ ಶಿವಮೂರ್ತಿ ದೇವರು ಮಾತನಾಡಿ, ನಮ್ಮ ದೇಶ ಧಾರ್ಮಿಕವಾಗಿ ಶ್ರೀಮಂತವಾಗಿರಲು ಸಾಧು-ಸಂತರ ಪರಂಪರೆ ಕಾರಣವಾಗಿದೆ. ಭಾರತ ದೇಶವು ಸಂಸ್ಕೃತಿ, ಸಂಸ್ಕಾರಗಳ ನಾಡಾಗಿದೆ. ಆದ್ದರಿಂದಲೇ ಭಾರತ ವಿಶ್ವಗುರು ಎನಿಸಿಕೊಂಡಿದೆ ಎಂದರು.

    ಶಿವಮೂರ್ತಿ ದೇವರು, ಭೂಪಾಲ ಭಾರತೀ ಸ್ವಾಮೀಜಿ, ಜಾಲಿ ಕರೆಮ್ಮದೇವಿ ಮಂದಿರದ ಉಳವಪ್ಪಜ್ಜ, ಕಲ್ಲಯ್ಯಸ್ವಾಮಿ ಉದೇಶಿಮಠ, ವಿಎಚ್‌ಪಿ ಉತ್ತರ ಪ್ರಾಂತ ಸಹ ಕೋಶಾಧ್ಯಕ್ಷ ಕೃಷ್ಣ ಭಟ್, ಬೆಳಗಾವಿ ಗ್ರಾಮೀಣ ಬಿಜೆಪಿ ಮಂಡಲ ಅಧ್ಯಕ್ಷ ಧನಂಜಯ ಜಾಧವ, ಸಿದ್ದಪ್ಪ ಹುಕ್ಕೇರಿ, ಮಂಜುನಾಥ ಧರೆಣ್ಣವರ, ರಘು ಪಾಟೀಲ, ರಾಜು ಕಪರಿ ಹಾಗೂ ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts