More

    ಸಾಲುಮರದ ತಿಮ್ಮಕ್ಕ ಹೃದಯಕ್ಕೆಸ್ಟಂಟ್ ಅಳವಡಿಕೆ: ಆರೋಗ್ಯ ಸ್ಥಿರ

    ಬೆಂಗಳೂರು:
    ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರಿಗೆ ಹೃದಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಸ್ಟಂಟ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ.
    ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಜಯನಗರದ ಅಪಲೋ ಆಸ್ಪತ್ರೆಗೆ ದಾಖಲಾಗಿರುವ ಅವರಿಗೆ ಹೃದಯ ರಕ್ತನಾಳದಲ್ಲಿ ಸಹಜ ರಕ್ತ ಚಲನೆಗೆ ಅಡಚಣೆ ಕಾಣಿಸಿಕೊಂಡಿತ್ತು.
    ಡಾ.ಅಭಿಜಿತ್ ಕುಲಕರ್ಣಿ ಅವರ ನೇತೃತ್ವದ ವೈದ್ಯರ ತಂಡ ಬುಧವಾರ ರಾತ್ರಿ ಸ್ಟಂಟ್ ಅಳವಡಿಕೆಗೆ ನಿರ್ಧರಿಸಿ, ಗುರುವಾರ ಬೆಳಿಗ್ಗೆ ಚಿಕಿತ್ಸೆ ನಡೆಸಿದೆ.
    ಸ್ಟಂಟ್ ಅಳವಡಿಕೆ ಬಳಿಕ ತೀವ್ರ ನಿಗಾ ಘಟಕ(ಐಸಿಯು)ದಲ್ಲಿ ಇರಿಸಲಾಗಿದೆ. ಇನ್ನೆರಡು ದಿನ ಐಸಿಯುನಲ್ಲಿಯೇ ಚಿಕಿತ್ಸೆ ಮುಂದುವರಿಯಲಿದೆ. ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
    ಉಸಿರಾಟದ ಸಮಸ್ಯೆಯೂ ಕ್ರಮೇಣ ಸುಧಾರಿಸುತ್ತಿದೆ ಎಂದು ಅವರ ದತ್ತು ಪುತ್ರ ಬಳ್ಳೂರು ಉಮೇಶ್ ವಿಜಯವಾಣಿಗೆ ತಿಳಿಸಿದ್ದಾರೆ.

    ಸುಳ್ಳು ಸುದ್ದಿಗೆ ಸ್ಪಷ್ಟನೆ:
    ಸಾಲುಮರದ ತಿಮ್ಮಕ್ಕ ಅವರ ಜೀವಕ್ಕೆ ಏನೂ ಆಗಿಲ್ಲ. ಚಿಕಿತ್ಸೆ ಮೂಲಕ ಅವರ ಆರೋಗ್ಯ ಸುಧಾರಿಸಿಕೊಳ್ಳುತ್ತಿದೆ ಎಂದಿರುವ ಉಮೇಶ್, ಅನಗತ್ಯವಾಗಿ ಅವರ ಸಾವಿನ ಬಗ್ಗೆ ಸುಳ್ಳು ಸುದ್ದಿಯನ್ನು ಹರಿಯಬಿಡದಂತೆ ವಿನಂತಿಸಿಕೊಂಡಿದ್ದಾರೆ. ಅಲ್ಲದೆ, ಈ ಬಗ್ಗೆ ವಿಡಿಯೋ ಒಂದನ್ನು ಮಾಡಿ ಮಾಡಿಯೂ ಸ್ಪಷ್ಟನೆಯನ್ನು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts