More

    ಸ್ಮಶಾನಕ್ಕೆ ಭೂಮಿ ಮಂಜೂರು ಮಾಡಿ

    ಬೆಳಗಾವಿ: ಸ್ಮಶಾನ ಭೂಮಿ ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿ ಶುಕ್ರವಾರ ಬೆಳಗಾವಿ ತಾಲೂಕಿನ ಬೋಡಕೆನಟ್ಟಿ ಗ್ರಾಮಸ್ಥರು ಹಾಗೂ ಸ್ಮಶಾನಕ್ಕೆ ಭೂಮಿ ಮಂಜೂರು ಮಾಡುವಂತೆ ನಿಲಜಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.

    ನೂರಾರು ವರ್ಷಗಳಿಂದ ಬೋಡಕೆನಟ್ಟಿ ಗ್ರಾಮದ ಸರ್ವೇ ನಂ. 18ರಲ್ಲಿ ಮರಾಠಿ ಸಮುದಾಯದವರು ಸ್ಮಶಾನ ಭೂಮಿ ಬಳಕೆ ಮಾಡುತ್ತಿದ್ದಾರೆ. ಈಚೆಗೆ ಗ್ರಾಮದ ಶಿವಲಿಂಗ ಹುದ್ದಾರ, ಸತೀಶ ಹುದ್ದಾರ, ಪ್ರಮೋದ ಹುದ್ದಾರ ಇತರರು ಸ್ಮಶಾನ ಭೂಮಿಯಲ್ಲಿ ಜೆಸಿಬಿ ಮೂಲಕ ಸ್ಮಶಾನ ನಾಶಪಡಿಸಿದ್ದಾರೆ. ಇದರಿಂದಾಗಿ ಧಾರ್ಮಿಕ ಭಾವನೆ ಧಕ್ಕೆ ಉಂಟಾಗುತ್ತಿದೆ.

    ಅವರನ್ನು ಕೇಳಿದರೆ ಧಮಕಿ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಚಾರವಾಗಿ ಗ್ರಾಮದಲ್ಲಿ ಗಲಭೆ ಉಂಟಾಗುವ ಸಾಧ್ಯತೆ ಇದ್ದು, ಕೂಡಲೇ ಗ್ರಾಮದ ಮರಾಠ ಸಮುದಾಯದ ಸ್ಮಶಾನ ಭೂಮಿ ಒತ್ತುವರಿ ತೆರವುಗೊಳಿಸಬೇಕು ಎಂದು ಮನವಿ ನೀಡಿದರು. ಪ್ರತಿಭಟನೆಯಲ್ಲಿ ಸುರೇಶ ಜಾಧವ್, ಮನೀಷಾ ತವನೋಜಿ, ನಾಗೇಶ ನಾಯಕ, ಜಯವಂತಾ ತವನೋಜಿ, ಮಾಲು ತವನೋಜಿ, ಜ್ಯೋತಿಭಾ ತವನೋಜಿ, ಮಾರುತಿ ತವನೋಜಿ ಇತರರಿದ್ದರು.

    ನಿಲಜಿ ಗ್ರಾಮಸ್ಥರ ಮನವಿ: ನಿಲಜಿ ಗ್ರಾಮದ ಪರಿಶಿಷ್ಟ ಜಾತಿ ಜನರಿಗೆ ಸ್ಮಶಾನವಿಲ್ಲದೆ ಸಮಸ್ಯೆಯಾಗುತ್ತಿದೆ. ಗ್ರಾಮದಲ್ಲಿ ಸರ್ಕಾರಿ ಸ್ಮಶಾನ ಭೂಮಿ ಇದೆ. ಬೇರೊಂದು ಸಮುದಾಯದ ಜನರು ಪರಿಶಿಷ್ಟ ಜಾತಿಯ ಜನರ ಬಳಕೆಗೆ ಸ್ಮಶಾನದಲ್ಲಿ ಅವಕಾಶ ನೀಡುತ್ತಿಲ್ಲ. ಇದುವರೆಗೆ ರೈತರ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತಿತ್ತು. ಆದರೆ, ಈಗ ರೈತರು ಕೂಡ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡುತ್ತಿಲ್ಲ. ಹಾಗಾಗಿ ಕೂಡಲೇ ಗ್ರಾಮದ ಸರ್ವೇ ನಂ. 415/ಬ ಸರ್ಕಾರಿ 10 ಗುಂಟೆ ಜಮೀನು ಇದೆ. ಅದನ್ನು ಪರಿಶಿಷ್ಟ ಜಾತಿ ಸ್ಮಶಾನಕ್ಕೆ ಒದಗಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಎಂ.ಎಸ್. ಕೋಲಕಾರ, ಗಂಗಾರಾಮ ನೀಲಜಗಿ, ಚಂದ್ರಕಾಂತ ಎಸ್.ಕೆ., ಮೋಹನ ಕಾಂಬಳೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts