More

    ಬೆಂಗಳೂರು, ಚೆನ್ನೈ, ಹೈದರಾಬಾದ್​ಗಳಲ್ಲಿ ಶೀಘ್ರವೇ ಸಿಗಲಿದೆ ತಿರುಪತಿ ಲಡ್ಡು

    ತಿರುಪತಿ: ಕೋವಿಡ್ 19 ಲಾಕ್​ಡೌನ್ ಇದ್ದಾಗ್ಯೂ, ತಿರುಮಲ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದ ಬೆಂಗಳೂರು, ಚೆನ್ನೈ, ಹೈದರಾಬಾದ್​ ಮತ್ತು ಆಂಧ್ರ ಪ್ರದೇಶದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಶ್ರೀ ವೆಂಕಟೇಶ್ವರನ ಭಕ್ತರಿಗೆ ಶೀಘ್ರವೇ ಸಬ್ಸಿಡಿ ದರದಲ್ಲಿ ಲಭ್ಯವಾಗಲಿದೆ ಎಂದು ಟಿಟಿಡಿ ಮಂಡಳಿಯ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ಬುಧವಾರ ತಿಳಿಸಿದ್ದಾರೆ.

    ಇದನ್ನೂ ಓದಿ: ರೈತ ಮಹಿಳೆಗೆ ಅವಾಜ್ ಹಾಕಿದ ಸಚಿವ ಮಾಧುಸ್ವಾಮಿ!

    ಕರೊನಾ ಸೋಂಕಿನ ಕಾರಣಕ್ಕೆ ಮಾರ್ಚ್ 20ರಿಂದ ತಿಮ್ಮಪ್ಪನ ದರ್ಶನ ಸಿಗದ ಭಕ್ತರಿಂದ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿರಿಸಿಕೊಂಡು ಮಂಡಳಿ ಈ ತೀರ್ಮಾನ ತೆಗೆದುಕೊಂಡಿದೆ. ನಿಗದಿತ ಸ್ಥಳಗಳಲ್ಲಿ ಲಡ್ಡು ಯಾವಾಗ ಲಭ್ಯವಾಗಲಿದೆ ಎಂಬ ಮಾಹಿತಿಯನ್ನು ಮೂರು ದಿನಗಳ ಒಳಗಾಗಿ ತಿಳಿಸಲಾಗುತ್ತದೆ. ಯಾರಾದರೂ ಭಕ್ತರು ಹೆಚ್ಚಿನ ಲಡ್ಡು ಪ್ರಸಾದ ಖರೀದಿಸಿ ಉಚಿತವಾಗಿ ಹಂಚುವುದಾದರೆ ಅದಕ್ಕೂ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಟಿಟಿಡಿಯ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಲಡ್ಡು ಪ್ರಸಾದಕ್ಕೆ 50 ರೂಪಾಯಿ ಇದ್ದರೂ, ಲಾಕ್​ಡೌನ್ ಎಂಬ ಕಾರಣಕ್ಕೆ ಸಬ್ಸಿಡಿ ದರದಲ್ಲಿ ಅಂದರೆ 25 ರೂಪಾಯಿಗೆ ಭಕ್ತರಿಗೆ ವಿತರಿಸಲಾಗುತ್ತಿದೆ ಎಂದು ರೆಡ್ಡಿ ತಿಳಿಸಿದ್ದಾರೆ.

    ಇದನ್ನೂ ಓದಿ: ಪ್ರಧಾನಮಂತ್ರಿ ವಯವಂದನಾ ಯೋಜನೆ ವಿಸ್ತರಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಒಪ್ಪಿಗೆ

    ನಿಗದಿತ ಸ್ಥಳಗಳಲ್ಲಿ ಇರುವ ಟಿಟಿಡಿ ಮಾಹಿತಿ ಕೇಂದ್ರಗಳು, ಟಿಟಿಡಿ ಕಲ್ಯಾಣ ಮಂಟಪಗಳಲ್ಲಿ ಲಡ್ಡುಗಳು ಲಭ್ಯ ಇರಲಿವೆ. ಕಳೆದ ತಿಂಗಳು ಇ-ಹುಂಡಿ ಮೂಲಕ ಟಿಟಿಡಿಗೆ ಭಕ್ತರು 1.97 ಕೋಟಿ ರೂಪಾಯಿ ಕಾಣಿಕೆ/ದೇಣಿಗೆ ನೀಡಿದ್ದಾರೆ. ಕಳೆದ ವರ್ಷ ಇದೇ ತಿಂಗಳು 1.79 ಕೋಟಿ ರೂಪಾಯ ಇದ್ದದ್ದು, ಈ ವರ್ಷ 18 ಲಕ್ಷ ರೂಪಾಯಿ ಏರಿಕೆ ಕಂಡಿದೆ ಎಂದು ಸುಬ್ಬಾ ರೆಡ್ಡಿ ತಿಳಿಸಿದ್ದಾರೆ. (ಏಜೆನ್ಸೀಸ್)

    ನೇಪಾಳದ ಅಧಿಕೃತ ಭೂಪಟದಲ್ಲಿ ಭಾರತದ ಭೂಭಾಗ!: ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts