More

    ನೀವು ಬಫೆ ಊಟ ಮಾಡುತ್ತಿದ್ದೀರಾ? ಅಪಾಯ ಎನ್ನುತ್ತಾರೆ ಆರೋಗ್ಯ ತಜ್ಞರು

    ಬೆಂಗಳೂರು: ಆರೋಗ್ಯವೇ ಭಾಗ್ಯ. ನಾವು ಪೌಷ್ಟಿಕವಾದ ಹಾಗೂ ರುಚಿಯಾದ, ಶುಚಿಯಾದ ಆಹರವನ್ನು ಸೇವಿಸಬೇಕು. ಹೆಚ್ಚಿನವರು ತಾವು ಸೇವಿಸುವ ಆಹಾರದ ಕುರಿತಾಗಿ ಹೆಚ್ಚಿನ ಕಾಳಜಿಯನ್ನು ವಹಿಸಿರುತ್ತಾರೆ. ಆದರೆ ಒಂದು ದಿನ ನಾಲಿಗೆ ಹೋಟೆಲ್​ ಊಟವನ್ನು ಮಾಡಬೇಕು ಎಂದು ಬಯಸುತ್ತದೆ. ಹೋಟೆಲ್​​ಗಳಲ್ಲಿ ಸರ್ವಿಂಗ್​, ಹಾಗೂ ನಾವೇ ಸರ್ವ್​​ ಮಾಡಿಕೊಳ್ಳುವ ಬಫೆ ಸಿಸ್ಟಮ್​ ಕೂಡಾ ಇರುತ್ತದೆ.

    ಪ್ರಸ್ತುತ, ಬಫೆ ಊಟದ ಟ್ರೆಂಡ್ ಚಾಲನೆಯಲ್ಲಿದೆ. ಇಂತಹ ಊಟ ಮಾಡಲು ಹೆಚ್ಚು ಜನರು ಆಸಕ್ತಿ ತೋರಿಸುತ್ತಿದ್ದಾರೆ. ಅನಿಯಮಿತ ಆಹಾರದ ಜೊತೆಗೆ ವೈವಿಧ್ಯಮಯ ಆಹಾರ ಪದಾರ್ಥಗಳು ಆಹಾರ ಪ್ರಿಯರನ್ನು ಆಕರ್ಷಿಸುತ್ತವೆ. ಆದರೆ ಬಫೆ ಲಂಚ್ ಅಥವಾ ಡಿನ್ನರ್ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ.? ಆರೋಗ್ಯ ತಜ್ಞರು ಅದನ್ನೇ ಒತ್ತಿ ಹೇಳುತ್ತಾರೆ.

    ಬಫೆ ಊಟಕ್ಕೂ ಆರೋಗ್ಯಕ್ಕೂ ಇರುವ ಸಂಬಂಧ ತಿಳಿಯಬೇಕಾ?:
    1) ಬಫೆ ಉಪಾಹಾರಗಳು ಒಂದಕ್ಕಿಂತ ಹೆಚ್ಚು ವಿಧಗಳು ಇರುವುದರಿಂದ, ಅವುಗಳು ಹೆಚ್ಚು ವೆಚ್ಚವಾಗುತ್ತವೆ. ಬಫೆಗಳು ಸಾಮಾನ್ಯ ಊಟಕ್ಕಿಂತ ಮೂರು ಪಟ್ಟು ಹೆಚ್ಚು ದುಬಾರಿಯಾಗಿದೆ. ಹೆಚ್ಚು ಹಣ ನೀಡುತ್ತಿರುವುದರಿಂದ ಜನರು ಅಗತ್ಯಕ್ಕಿಂತ ಹೆಚ್ಚು ತಿನ್ನುತ್ತಿದ್ದಾರೆ. ಕೊಡುವ ಮೊತ್ತಕ್ಕೆ ಲಾಭ ಮಾಡಿಕೊಳ್ಳಲು ಅಗತ್ಯಕ್ಕಿಂತ ಹೆಚ್ಚು ಸೇವಿಸುತ್ತಾರೆ.

    2) ಬಫೆ ಉಪಾಹಾರಗಳಲ್ಲಿರುವ ಹೋಟೆಲ್​​ನಲ್ಲಿ ಕೆಲವು ಕಡೆ ಸಮಯವನ್ನು ನಿಗಧಿ ಮಾಡಲಾಗಿರುತ್ತದೆ. ಎಲ್ಲಾ ರುಚಿಯನ್ನು ಸವಿಯಲು ಬಯಸುವ ಗ್ರಾಹಕ  ತರಾತುರಿಯಲ್ಲಿ ತಿನ್ನುತ್ತಾನೆ. ಇದರಿಂದ ದೇಹದ ಮೇಲೆ ಪರಿಣಾಮ ಬೀರುತ್ತದೆ.

    3) ಕೆಲವು ಬಫೆ ಊಟದ ತಯಾರಿಕೆಯಲ್ಲಿ ಬಳಸುವ ವಸ್ತುಗಳ ಗುಣಮಟ್ಟದ ಬಗ್ಗೆ ತಜ್ಞರು ಕಾಳಜಿ ವಹಿಸುತ್ತಾರೆ. ಕಡಿಮೆ ಗುಣಮಟ್ಟದ ತೈಲಗಳನ್ನು ಸಹ ಬಳಸಲಾಗುತ್ತದೆ.

    4) ಹೋಟೆಲ್‌ಗಳಲ್ಲಿ ಅಡುಗೆಗೆ ಬಳಸುವ ವಸ್ತುಗಳು ದೀರ್ಘಕಾಲದವರೆಗೆ ರೆಫ್ರಿಜರೇಟರ್‌ಗಳಲ್ಲಿ ಸಂಗ್ರಹಿಸಲ್ಪಡಲಾಗುತ್ತದೆ. ಇದರಿಂದ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

    5) ಬಫೆ ಊಟದ ತಯಾರಿಕೆಯಲ್ಲಿ ಹೆಚ್ಚಿನ ಕ್ಯಾಲೋರಿ ಆಹಾರ ಪದಾರ್ಥಗಳ ಬಳಕೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಗಮನಸೆಳೆದಿದ್ದಾರೆ.

    6) ತಿಂಗಳಿಗೊಮ್ಮೆ ಹೀಗೆ ಬಫೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ತಿನ್ನುವುದು ತೂಕ ಹೆಚ್ಚಾಗಲು ಕಾರಣ. ಅದಕ್ಕಾಗಿಯೇ ತಜ್ಞರು ಬಫೆ ಊಟವನ್ನು ಸಾಧ್ಯವಾದಷ್ಟು ದೂರವಿಡಲು ಸಲಹೆ ನೀಡುತ್ತಾರೆ.

    ಗಮನಿಸಿ: ಈ ಮಾಹಿತಿಯನ್ನು ತಜ್ಞರು ಮತ್ತು ಅಧ್ಯಯನಗಳಿಂದ ಸಂಗ್ರಹಿಸಲಾಗಿದೆ. ಈ ಲೇಖನವು ಜಾಗೃತಿಗಾಗಿ ಮಾತ್ರ. ಯಾವುದೇ ಸಣ್ಣ ಆರೋಗ್ಯ ಸಮಸ್ಯೆಗಳಿಗೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

    ಆಹಾರ ಸೇವಿಸುವಾಗ ಮಕ್ಕಳು ಫೋನ್ ನೋಡುತ್ತಿದ್ದಾರೆಯೇ? ಎಚ್ಚರಿಕೆ ಇರಲಿ…

    ಸ್ನಾನ ಮಾಡುವಾಗ ಈ ತಪ್ಪುಗಳನ್ನು ಮಾಡುತ್ತೀರಾ? ಎಚ್ಚರಿಕೆ ಅಗತ್ಯ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts