More

    ಇಲ್ಲಿ ಹೊಸ ವರ್ಷದ ಆಚರಣೆ ವಿಶೇಷವಾಗಿರುತ್ತದೆ.. ‘ನ್ಯೂ ​​ಇಯರ್ ಬಾಲ್ ಡ್ರಾಪ್’ ನೋಡಲು ಪ್ರಪಂಚದಾದ್ಯಂತ ಬರುತ್ತಾರೆ ಜನರು!

    ಬೆಂಗಳೂರು: 2024ನೇ ವರ್ಷ ಪ್ರಾರಂಭವಾಗಲು ಕೆಲವೇ ಗಂಟೆಗಳು ಮಾತ್ರ ಉಳಿದಿವೆ. 2023 ನೇ ವರ್ಷಕ್ಕೆ ವಿದಾಯ ಹೇಳಲು ಮತ್ತು ಹೊಸ ವರ್ಷವನ್ನು ಸ್ವಾಗತಿಸಲು ಇಡೀ ಜಗತ್ತು ಸಿದ್ಧವಾಗಿದೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಇದನ್ನು ಆಚರಿಸುವ ಶೈಲಿ ವಿಭಿನ್ನವಾಗಿದೆ. ಇದನ್ನು ನ್ಯೂಯಾರ್ಕ್ ನಲ್ಲಿ ವಿಶೇಷವಾಗಿ ಸೆಲೆಬ್ರೇಟ್​ ಮಾಡುವುದನ್ನು ಕಾಣಬಹುದು. ನ್ಯೂಯಾರ್ಕ್ ನಗರದ ಟೈಮ್ಸ್ ಸ್ಕ್ವೇರ್‌ನಲ್ಲಿ ಡಿಸೆಂಬರ್ 31 ರ ರಾತ್ರಿ ಬಹಳ ವಿಶೇಷವಾಗಿರುತ್ತದೆ. ಇಲ್ಲಿ ನಡೆಯುವ ಬಾಲ್ ಡ್ರಾಪ್ ಮೇಲೆ ಇಡೀ ವಿಶ್ವವೇ ಕಣ್ಣಿಟ್ಟಿರುತ್ತದೆ. ಈ ವರ್ಷ ಇನ್ನಷ್ಟು ಅದ್ಧೂರಿಯಾಗಿ ಮಾಡಲು ಯೋಜನೆ ರೂಪಿಸಲಾಗಿದ್ದು, ನ್ಯೂಯಾರ್ಕ್ ನಗರದಲ್ಲಿ ಹೊಸ ವರ್ಷದ ಮುನ್ನಾದಿನದ ಬಾಲ್ ವೀಕ್ಷಿಸಲು ಪ್ರಪಂಚದಾದ್ಯಂತದ ಜನರು ಸೇರುತ್ತಾರೆ.

    ಈ ಬಾಲ್​​​​ ಏಕೆ ವಿಶೇಷವಾಗಿದೆ?
    ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿರುವ ಟೈಮ್ಸ್ ಸ್ಕ್ವೇರ್ ಕಟ್ಟಡದಲ್ಲಿ ರಾತ್ರಿ 12 ಗಂಟೆಗೆ ಸರಿಯಾಗಿ ಕಟ್ಟಡದ ಸ್ತಂಭದಿಂದ ಹೊಳೆಯುವ ಬಾಲ್​​​ ಇಳಿಯುತ್ತದೆ ಮತ್ತು ಇದರೊಂದಿಗೆ ಹೊಸ ವರ್ಷದ ಆರಂಭದ ಆಚರಣೆಯು ಇಲ್ಲಿ ಪ್ರಾರಂಭವಾಗುತ್ತದೆ. ಹೊಸ ವರ್ಷದ ಮುನ್ನಾದಿನದ ಬಾಲ್ ಅನ್ನು ವಾಟರ್‌ಫೋರ್ಡ್ ಕ್ರಿಸ್ಟಲ್ ಎಂದೂ ಕರೆಯುತ್ತಾರೆ. ಈ ಕಾರ್ಯಕ್ರಮಕ್ಕಾಗಿ ಜನರು ನ್ಯೂಯಾರ್ಕ್‌ನಲ್ಲಿ ಬಹಳ ಸಮಯ ಕಾಯುತ್ತಾರೆ. ‘ನ್ಯೂ ಇಯರ್ ಬಾಲ್ ಡ್ರಾಪ್’ ನ ಇತಿಹಾಸ 100 ವರ್ಷಕ್ಕೂ ಹೆಚ್ಚು ಹಳೆಯದು ಎಂದು ಹೇಳಲಾಗುತ್ತದೆ. ಇದನ್ನು 1904 ರಿಂದ ಆಚರಿಸಲಾಗುತ್ತಿದೆ. ಸದ್ಯ ರಸ್ತೆಗಳಲ್ಲಿ ಹಬ್ಬದ ವಾತಾವರಣವಿದ್ದು, ಪಟಾಕಿ ಸೇರಿದಂತೆ ವಿವಿಧ ರೀತಿಯ ಪ್ರದರ್ಶನಗಳನ್ನು ನಡೆಸಲಾಗುತ್ತದೆ. ಆ ನಂತರ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ.

    ಈ ವರ್ಷ ವಿಭಿನ್ನ ಶೈಲಿಯಲ್ಲಿ ಬಾಲ್ ಡ್ರಾಪ್ ವಿನ್ಯಾಸವನ್ನು ಸಿದ್ಧಪಡಿಸಲಾಗಿದೆ. 31 ಡಿಸೆಂಬರ್, 2023 ರ ರಾತ್ರಿ 12 ಗಂಟೆಗೆ ಹೊಳೆಯುವ ಬಾಲ್​​​​​​ ದೀಪಗಳನ್ನು ಆಫ್ ಮಾಡಲಾಗುತ್ತದೆ. ಅದರ ಮೇಲೆ 2024 ರ ಸಂಖ್ಯೆಗಳನ್ನು ಬರೆಯಲಾಗುತ್ತದೆ. ಸಿಕ್ಕಿರುವ ಮಾಹಿತಿ ಪ್ರಕಾರ, ಬಾಲ್​​​​​ ಮೇಲೆ ಬರೆದಿರುವ ಹೊಸ ವರ್ಷದ ಪ್ರತಿ ಸಂಖ್ಯೆ 7 ಅಡಿ ಎತ್ತರ ಇರಲಿದೆ. ಈ ಸಂಖ್ಯೆಗೆ ಎಲ್ಇಡಿ ಬಲ್ಬ್ಗಳನ್ನು ಅಳವಡಿಸಲಾಗುತ್ತದೆ. ಇದರಲ್ಲಿಯೂ “2” ಸಂಖ್ಯೆಯು ಗರಿಷ್ಠ 145 ಬಲ್ಬ್‌ಗಳನ್ನು ಹೊಂದಿರುತ್ತದೆ. ನಾಲ್ಕು ಅಂಕೆಗಳ ಒಟ್ಟು ತೂಕವು ಸುಮಾರು 1,160 ಪೌಂಡ್ಗಳಷ್ಟಿರುತ್ತದೆ. ಆದರೆ “0” ಸಂಖ್ಯೆಯ ಗರಿಷ್ಠ ತೂಕವು 380 ಪೌಂಡ್‌ಗಳಾಗಿರುತ್ತದೆ.

    ದೇಶದ ಅತ್ಯಂತ ಜನಪ್ರಿಯ ನಾಯಕ ಯಾರು?; ಲೋಕಸಭೆ ಚುನಾವಣೆಗೂ ಮುನ್ನ ಸಮೀಕ್ಷೆ ಮೂಲಕ ಸಾರ್ವಜನಿಕರ ಅಭಿಪ್ರಾಯ ಬಹಿರಂಗ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts