More

    ಮಂಗಳೂರು ಬಾಲಕಿ ಗೀತಾಂಜಲಿಗೆ ಟೈಮ್ ಗೌರವ; ವೈಜ್ಞಾನಿಕ ಸಂಶೋಧನೆಗೆ ಮನ್ನಣೆ

    ಮಂಗಳೂರು: ಅಂತಾರಾಷ್ಟ್ರೀಯ ಮ್ಯಾಗಜಿನ್ ‘ಟೈಮ್ ಇದೇ ಮೊದಲ ಬಾರಿ ಆರಂಭಿಸಿರುವ ‘ಕಿಡ್ ಆಫ್ ದಿ ಈಯರ್’ ಗೌರವಕ್ಕೆ ಭಾರತೀಯ ಮೂಲದ 15 ವರ್ಷದ ಯುವ ವಿಜ್ಞಾನಿ ಗೀತಾಂಜಲಿ ರಾವ್ ಆಯ್ಕೆಯಾಗಿದ್ದಾರೆ. ಅಮೆರಿಕದ ಕೊಲೊರಾಡೊ ರಾಜ್ಯದ ಡೆನೆವರ್ ನಗರದಲ್ಲಿ ನೆಲೆಸಿರುವ ಗೀತಾಂಜಲಿ ರಾವ್ ಮಂಗಳೂರು ಮೂಲದ ರಾಮ ರಾವ್ – ಭಾರತಿ ದಂಪತಿ ಪುತ್ರಿ. ನಾಮನಿರ್ದೇಶನಗೊಂಡಿದ್ದ 5 ಸಾವಿರಕ್ಕೂ ಅಧಿಕ ಮಂದಿ ಅಮೆರಿಕನ್ನರ ಪೈಕಿ ಗೀತಾಂಜಲಿ ರಾವ್ ಸಂಶೋಧನೆಗಳು ಮೇಲುಗೈ ಸಾಧಿಸಿವೆ.

    ಟೈಮ್ ಮ್ಯಾಗಜಿನ್​ಗಾಗಿ ಈಕೆಯನ್ನು ಹಾಲಿವುಡ್ ಜನಪ್ರಿಯ ನಟಿ ಏಂಜೆಲಿನಾ ಜೂಲಿ ಸಂದರ್ಶನ ನಡೆಸಿದ್ದಾರೆ. ವಿಷಪೂರಿತ ಕಲುಷಿತ ನೀರನ್ನು ಗುರುತಿಸುವುದು ಹಾಗೂ ಆನ್​ಲೈನ್​ನಲ್ಲಿ ಅವಾಚ್ಯ ನಿಂದನೆ ಅಥವಾ ಮಾನಹಾನಿಕರ ರೀತಿಯ ಅಭಿವ್ಯಕ್ತಿ (ಸೈಬರ್ ಬುಲ್ಲಿಯಿಂಗ್) ಪತ್ತೆಗೆ ಕೃತಕ ಬುದ್ಧಿಮತ್ತೆ ಆಧರಿತ ತಂತ್ರಜ್ಞಾನವನ್ನು ಗೀತಾಂಜಲಿ ಆವಿಷ್ಕರಿಸಿದ್ದರು. ತಂತ್ರಜ್ಞಾನಕ್ಕೆ ‘ಕೈಂಡ್ಲಿ’ ಎಂದು ಹೆಸರಿಟ್ಟಿದ್ದು, ಆರಂಭಿಕ ಮಾತುಕತೆ ವೇಳೆಯೇ ಜಾಲತಾಣಗಳಲ್ಲಿನ ಸೈಬರ್ ಬುಲ್ಲಿಯಿಂಗ್ ಪತ್ತೆ ಮಾಡುವ ಸಾಮರ್ಥ್ಯ ಹೊಂದಿದೆ. ಇಂಥ ಅನೇಕ ಆವಿಷ್ಕಾರಗಳತ್ತ ಗೀತಾಂಜಲಿ ಒಲವು ತೋರಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts