More

    ಜಾತಿ, ಆದಾಯ ಪ್ರಮಾಣ ಪತ್ರಕ್ಕೆ ‘ಸಕಾಲ’

    ಹುಬ್ಬಳ್ಳಿ: ‘ಸಕಾಲ’ ಯೋಜನೆ ಅಡಿ 39 ಸೇವೆಗಳು ಲಭ್ಯ. ಆದರೆ, ಇವುಗಳಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕಾಗಿ ಸಲ್ಲಿಸುವ ಅರ್ಜಿಗಳ ಸಂಖ್ಯೆ ದುಪ್ಪಟ್ಟು ಇವೆ. ಹಾಗಾಗಿಯೇ ವರ್ಷದಲ್ಲಿ 1,22,929 ಅರ್ಜಿಗಳು ಸಲ್ಲಿಕೆಯಾಗಿದ್ದು, 1,21,985 ಅರ್ಜಿಗಳು ಜನರಿಗೆ ‘ಸಕಾಲ’ಕ್ಕೆ ತಲುಪಲು ಸಿದ್ಧಗೊಂಡಿವೆ.

    ಇಲ್ಲಿನ ಶಹರ ತಹಸೀಲ್ದಾರ್ ಕಚೇರಿಯಲ್ಲಿ 2020 ಮಾರ್ಚ್ 1ರಿಂದ 2021 ಫೆಬ್ರವರಿ 28ರವರೆಗೆ ‘ಸಕಾಲ’ ಯೋಜನೆ ಅಡಿ 39 ಸೇವೆಗಾಗಿ 2,78,945 ಅರ್ಜಿ ಸಲ್ಲಿಕೆಯಾಗಿವೆ. ಇವುಗಳಲ್ಲಿ 2,75,709 ಪ್ರಮಾಣ ಪತ್ರಗಳು ಜನರ ಕೈ ಸೇರಲು ಸಿದ್ಧಗೊಂಡಿವೆ. ಟಾಪ್ 10 ಸೇವೆಗಳನ್ನು ಗುರುತಿಸಲಾಗಿದ್ದು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯುವವರೆ ಜಾಸ್ತಿ ಇದ್ದಾರೆ. ಉಳಿದಂತೆ ವಾಸಸ್ಥಳ, ವೃದ್ಧಾಪ್ಯ ವೇತನ, ಅಂತ್ಯಸಂಸ್ಕಾರ ಯೋಜನೆ, ನಿವಾಸಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಗೇಣಿರಹಿತ ದೃಢೀಕರಣ, ಮೈತ್ರಿ, ಬೆಳೆ ದೃಢೀಕರಣ ಪತ್ರ ಪಡೆಯುವವರ ಸಂಖ್ಯೆ ಬೆರಳೆಣಿಕೆಯಷ್ಟಿದೆ.

    ಧಾರವಾಡ ಜಿಲ್ಲೆಯಲ್ಲಿ ವಾಟ್ಸ್ ಆಪ್ ಗ್ರುಪ್ ರಚಿಸಲಾಗಿದೆ. ಸಕಾಲ ಯೋಜನೆ ಅಡಿ ಸಲ್ಲಿಕೆಯಾಗುವ ಅರ್ಜಿ ಮತ್ತು ವಿಲೇವಾರಿ ಕುರಿತು ಮಾಹಿತಿ ಅಪ್​ಡೇಟ್​ಗೊಳ್ಳುತ್ತಿರುತ್ತವೆ. ಗ್ರಾಮಲೆಕ್ಕಾಧಿಕಾರಿಯಿಂದ ತಹಸೀಲ್ದಾರ್ ಕಚೇರಿವರೆಗೆ ಮಾಹಿತಿ ತಲುಪಲು 17 ದಿನ ಬೇಕಾಗುತ್ತದೆ. ಬಹಳಷ್ಟು ಅರ್ಜಿಗಳನ್ನು ಕ್ರಮಬದ್ಧಗೊಳಿಸಿ ಅಂತಿಮ ಮುದ್ರೆ ಒತ್ತಲು ಒಟ್ಟಾರೆ 21 ದಿನ ಅಗತ್ಯವಿದೆ. ನಂತರ ಜನರ ಕೈ ಸೇರುತ್ತದೆ. ಕೆಲ ಅರ್ಜಿಗಳಿಗೆ 7 ಮತ್ತು 41 ದಿನಗಳನ್ನು ನಿಗದಿಪಡಿಸಲಾಗಿದೆ.

    ಕಾಗದ ರಹಿತ ಆಡಳಿತಕ್ಕೆ ಒತ್ತು

    ಅರ್ಜಿಗಳ ವಿಲೇವಾರಿ ಸಂಬಂಧ ಕಂದಾಯ ಇಲಾಖೆ ಕಾಗದ ರಹಿತ ಆಡಳಿತ ನಡೆಸಲು ಉತ್ಸುಕವಾಗಿದೆ. ಹಾಗಾಗಿಯೆ ಕೆಲವರಿಗೆ ಪೋರ್ಟಲ್​ನ ಲಾಗಿನ್ ಐಡಿಗಳನ್ನು ನೀಡಲಾಗಿದೆ. ಕುಳಿತಲ್ಲಿಯೇ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ.

    ನಿಗದಿತ ಸಮಯದೊಳಗೆ 39 ಸೇವೆಗಳನ್ನು ಜನರಿಗೆ ತಲುಪಿಸಲು ಕಂದಾಯ ಇಲಾಖೆ ಸಿದ್ಧವಾಗಿದೆ. ವರ್ಷದಲ್ಲಿ ಬಹಳಷ್ಟು ಅರ್ಜಿಗಳು ಬಂದಿದ್ದು, ಜನರ ಕೈ ತಲುಪಲಿವೆ. ಕೆಲವರು ಬೇಗ ಬಂದು ಅರ್ಜಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ಇನ್ನು ಕೆಲವರು ತಮಗೆ ನೆನಪಾದಾಗ ಬಂದು ಹೋಗುತ್ತಾರೆ. ಆದರೂ ಅರ್ಜಿಗಳ ವಿಲೇವಾರಿಯನ್ನು ಫಟಾಫಟ್ ಆಗಿ ಮಾಡಲಾಗುತ್ತಿದೆ.
    / ವಿಜಯಕುಮಾರ ಕಡಕೋಳ, ಅಪರ ತಹಸೀಲ್ದಾರ್ ಹುಬ್ಬಳ್ಳಿ ಶಹರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts