More

    ಸಕಾಲಕ್ಕೆ ಕಾಮಗಾರಿಗಳ ಪೂರ್ಣಗೊಳಿಸಿ: ಡಿಸಿ

    ಸೊರಬ: ಕಾಮಗಾರಿಗಳನ್ನು ಸಕಾಲಕ್ಕೆ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಅವಕಾಶ ಮಾಡಿಕೊಡಿ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಇಂಜಿನಿಯರ್‌ಗಳಿಗೆ ಸೂಚಿಸಿದರು.

    ತಾಲೂಕಿನ ಆನವಟ್ಟಿ ಪಪಂ ಹಾಗೂ ಸೊರಬ ಪುರಸಭೆ ವ್ಯಾಪ್ತಿಯಲ್ಲಿ 2023-24ನೇ ಸಾಲಿನ ನಗರೋತ್ಥಾನ ಯೋಜನೆಯಡಿ 2.20 ಕೋಟಿ ರೂ. ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಶುಕ್ರವಾರ ಪರಿಶೀಲನೆ ನಡೆಸಿ ಮಾತನಾಡಿ, ಆನವಟ್ಟಿ- ಸೊರಬ ರಸ್ತೆಯು ಆನವಟ್ಟಿ ಪಟ್ಟಣದಲ್ಲಿ ಅತ್ಯಂತ ಜನಸಂದಣಿಯ ಮಾರ್ಗವಾಗಿದೆ. ಸಾರ್ವಜನಿಕರು ಕಾಮಾಗರಿ ವಿಳಂಬವಾಗಿದೆ ಎಂದು ದೂರು ನೀಡಿದ್ದಾರೆ. ಗುಣಮಟ್ಟದ ಜತೆಗೆ ಕಾಮಗಾರಿಯನ್ನು ಸಕಾಲದಲ್ಲಿ ಪೂರ್ಣಗೊಳಿಸಿ. ಸಮನವಳ್ಳಿಯಲ್ಲಿ ನಡೆಯುತ್ತಿರುವ ಬಾಕ್ಸ್ ಚರಂಡಿಗಳಲ್ಲಿ ನೀರು ಸಾರಗವಾಗಿ ಹೋಗುವಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
    ಸೊರಬ-ಜಂಗಿನಕೊಪ್ಪ ಮಾರ್ಗವಾಗಿ ಆನವಟ್ಟಿ ರಸ್ತೆಗೆ ಸಂಪರ್ಕ ಕಲ್ಪಿಸುವ ಡಾಂಬರ ರಸ್ತೆ ಹಾಗೂ ರಾಜು ನಗರದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿ, ಕಾಮಗರಿಯ ಬಗ್ಗೆ ಸ್ಥಳೀಯರಿಂದ ಅಭಿಪ್ರಾಯವನ್ನು ಸಂಗ್ರಹಿಸಿದರು.
    ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮನೋಹರ್, ಕಾರ್ಯಪಾಲಕ ಇಂಜಿನಿಯರ್‌ಗಳಾದ ವಾಹಿದ ನದಾಫ್, ನಿಂಗರಾಜ್, ಪುರಸಭ ಮುಖ್ಯಾಧಿಕಾರಿ ಬಾಲಚಂದ್ರ, ಇಂಜಿನಿಯರ್‌ಗಳಾದ ಕಿರಣ್, ಹರೀಶ್, ಚಂದನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts