More

    ಕಾಲಮಿತಿಯೊಳಗೆ ದೂರು, ಸಮಸ್ಯೆಗಳ ಪರಿಹಾರಿಸುವುದಾಗಿ ಭರವಸೆ ನೀಡಿದ ಜೆಸ್ಕಾಂ ಇಇ

    ಗಂಗಾವತಿ: ಗ್ರಾಹಕರ ದೂರು ಮತ್ತು ಸಮಸ್ಯೆಗಳನ್ನು ಸಕಾಲದಲ್ಲಿ ಪರಿಹರಿಸಲಾಗುತ್ತಿದ್ದು, ಕಾಲಮಿತಿಯೊಳಗೆ ಸ್ಪಂದಿಸಲಾಗುವುದು ಎಂದು ಜೆಸ್ಕಾಂ ಇಇ ಎಚ್.ಎಂ.ನಟರಾಜ್ ಹೇಳಿದರು.

    ನಗರದ ಜೆಸ್ಕಾಂ ಆವರಣದಲ್ಲಿ ಸಕಾಲ ಸೇವೆಗಳ ಸಪ್ತಾಹದ ಜಾಗೃತಿ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಜೆಸ್ಕಾಂ ಸೇವೆಗಳನ್ನು ಸಕಾಲ ಯೋಜನೆಗೊಳಪಡಿಸಿದ್ದರಿಂದ ಆನ್‌ಲೈನ್ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯ. 9 ಸೇವೆಗಳನ್ನು ಸಕಾಲಕ್ಕೆ ಒಳಪಡಿಸಲಾಗಿದ್ದು, ನಿರ್ದಿಷ್ಟ ಅಧಿಕಾರಿಗಳಿಗೆ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ. ತ್ವರಿತಗತಿಯಲ್ಲಿ ಇತ್ಯರ್ಥಕ್ಕೆ ಸಕಾಲ ಪರಿಣಾಮಕಾರಿಯಾಗಿದ್ದು, ಡಿ.14ರಿಂದ 19ರವರಿಗೆ ಚಾಲನೆಯಲ್ಲಿದೆ. ವಿದ್ಯುತ್ ತಂತಿ ತುಂಡಾದರೆ, ವಿತರಣೆ ಪರಿವರ್ತಕಗಳ ವಿಲತೆ, ಮಾಪಕ ದೂರು, ಹೊಸಸಂಪರ್ಕ, ಹೆಚ್ಚುವರಿ ಲೋಡ್, ಮಾಲೀಕತ್ವದ ವರ್ಗಾವಣೆ, ಜಕಾತಿ ಬದಲಾವಣೆ, ಗ್ರಾಹಕರ ಬಿಲ್‌ಗಳ ಇತ್ಯರ್ಥ, ಪ್ರಮಾಣಪತ್ರ ನೀಡಿದೆ, ಠೇವಣಿ ಮರುಪಾವತಿ ಇತರ ದೂರುಗಳಿಗೆ ಅವಕಾಶವಿದೆ.

    ಮಾಹಿತಿ ನೀಡಿ ಸಹಕರಿಸಿ
    ಇಂಧನ ಇಲಾಖೆಯ ಸೌಲಭ್ಯಕ್ಕಾಗಿ ಆಧಾರ್ ನಂಬರ್ ಜೋಡಣೆಗೆ ಜೆಸ್ಕಾಂ ಚಾಲನೆ ನೀಡಿದ್ದು, ವಿದ್ಯುತ್ ಗ್ರಾಹಕರು ಆಧಾರ್ ಮತ್ತು ಪಡಿತರ ಚೀಟಿ ಸಂಖ್ಯೆಯನ್ನು ಸ್ಥಾವರ ಸಂಖ್ಯೆಗೆ ಜೋಡಣೆ ಮಾಡಲಾಗುತ್ತಿದೆ. ಮನೆಗೆ ಬರುವ ಮಾಪಕ ಓದುಗರಿಗೆ(ಮೀಟರ್ ರೀಡರ್) ಮಾಹಿತಿ ನೀಡಿ ಸಹಕರಿಸುವಂತೆ ಜೆಸ್ಕಾಂ ಎಇಇ ಎ.ಆರ್.ಸಲೀಂ ಮನವಿ ಮಾಡಿದರು.

    ತಾಪಂ ಇಒ ಡಾ.ಮೋಹನ್ ಮಾತನಾಡಿ, ಸಕಾಲದನ್ವಯ ನೀಡಿದ ದೂರುಗಳನ್ನು ನಿರ್ದಿಷ್ಟ ಅವಧಿಯಲ್ಲಿ ಇತ್ಯರ್ಥಪಡಿಸಬೇಕಿದ್ದು, ವಿಳಂಬವಾದರೆ ಅಧಿಕಾರಿಗಳಿಗೆ ದಂಡ ಹಾಕುವ ಸಾಧ್ಯತೆಗಳಿವೆ ಎಂದರು. ಸಕಾಲ ಯೋಜನೆ ಕುರಿತು ಜೆಸ್ಕಾಂ ಎಇಇ ಎ.ಆರ್.ಸಲೀಂ ಮಾತನಾಡಿದರು. ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ, ಜೆಸ್ಕಾಂ ಎಇ ಅಲ್ಲಾಭಕ್ಷಾ, ಯೂನಿಯನ್ ಪ್ರತಿನಿಧಿ ಜಗನ್ನಾಥ ರಾಠೋಡ, ಗುತ್ತಿಗೆದಾರರ ಪ್ರತಿನಿಧಿ ಅನಿಲ್ ದೇಸಾಯಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts