More

    ಭೂಮಿಯಲ್ಲಿ ನಡೆಯುವ ಸಹಜ ಪ್ರಕ್ರಿಯೆ

    ವಿಜಯಪುರ: ಜಿಲ್ಲೆಯಲ್ಲಿ ಭೂಕಂಪನ ಆಗುವ ಯಾವುದೇ ಸಂಭವಗಳು ಇಲ್ಲ ಎಂದು ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದ ವಿಜ್ಞಾನಿ ಜಗದೀಶ ಹೇಳಿದರು.
    ತಿಕೋಟಾ ತಾಲೂಕಿನ ಸೋಮದೇವರಹಟ್ಟಿ, ಹುಬನೂರ ಮತ್ತು ಸಿದ್ದಾಪುರ .ಕೆ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿದ ನಂತರ ಮಾತನಾಡಿ, ಜಿಲ್ಲೆಯ ಕೊಲ್ಹಾರ ತಾಲೂಕಿನ ಮಲಘಾಣ, ಮಸೂತಿ ಬಬಲೇಶ್ವರ ತಾಲೂಕಿನ ಅಡವಿ ಸಂಗಾಪುರ ಮತ್ತು ತಿಕೋಟಾ ತಾಲೂಕಿನ ಸೋಮದೇವರ ಹಟ್ಟಿ, ಮಲಕನದೇವರಹಟ್ಟಿ, ಹುಬನೂರ ಹಳ್ಳಿಗಳ ವ್ಯಾಪ್ತಿಯಲ್ಲಿ ಭೂಮಿಯೊಳಗೆ ಭಾರಿ ಸ್ಫೋಟದ ಶಬ್ದಗಳು ಕೇಳಿ ಬರುತ್ತಿರುವ ಬಗ್ಗೆ ಜಿಲ್ಲಾಡಳಿತ ಮತ್ತು ಗ್ರಾಮಸ್ಥರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದರು.

    ವಿಜಯಪುರ ಜಿಲ್ಲೆ ಅತಿ ಕಡಿಮೆ ಭೂಕಂಪನದ ವಲಯದಲ್ಲಿ ಬರುವುದರಿಂದ ಇಲ್ಲಿ ಯಾವುದೇ ಭೂಕಂಪನದ ಸಾಧ್ಯತೆ ಇರುವುದಿಲ್ಲ. ಗ್ರಾಮಸ್ಥರ ಮಾಹಿತಿಯನುಸಾರ ಭೂಮಿಯಲ್ಲಿ ಈ ಶಬ್ದವು ಮಳೆಗಾಲದಲ್ಲಿ ಮಾತ್ರ ಬರುತ್ತಿರುವುದರಿಂದ ಮಳೆ ನೀರು, ಅಂತರ್ಜಲ ತಲುಪುವ ಸಂದರ್ಭದಲ್ಲಿ ರಾಸಾಯನಿಕಗಳ ಸಮೀಕರಣದಿಂದ ಮತ್ತು ಭೂಮಿ ಪದರುಗಳಲ್ಲಿ ನೀರಿನ ಒತ್ತಡದಿಂದಾಗಿ ಇಂತಹ ಶಬ್ದಗಳು ಬರುವ ಸಾಧ್ಯತೆ ಇದೆ ಎಂದು ಹೇಳಿದರು.

    ಆಲಮಟ್ಟಿ ವ್ಯಾಪ್ತಿಯಲ್ಲಿ ಭೂಕಂಪನ ಮಾಪನ ಉಪಕರಣವನ್ನು ಅಳವಡಿಸಲಾಗಿದ್ದು, 200 ಕಿ.ಮೀ. ವ್ಯಾಪ್ತಿಯಲ್ಲಿ ಭೂಕಂಪನದ ವರದಿ ದಾಖಲಾಗುತ್ತದೆ. ಅದರಂತೆ ರಾಜ್ಯದಲ್ಲಿ ಒಟ್ಟು 14 ಇಂತಹ ಭೂ ಕಂಪನ ಮಾಪನಾ ಕೇಂದ್ರಗಳು ಸಹ ಉಪಗ್ರಹ ಆಧಾರಿತ ಮಾಹಿತಿ ನೀಡುತ್ತಿದ್ದು, ಜಿಲ್ಲೆಯ ಈ ಭಾಗಗಳಲ್ಲಿ ಆದ ಭೂಕಂಪನದ ಬಗ್ಗೆ ಯಾವುದೇ ವರದಿ ದಾಖಲಾಗಿರುವುದಿಲ್ಲ. ಹಾಗಾಗಿ ಜಿಲ್ಲೆಯ ಜನತೆ ಸಂಬಂಧಪಟ್ಟ ಗ್ರಾಮಸ್ಥರು, ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಭೂ ಕಂಪನ ಮಾಪನಾ ಕೇಂದ್ರ ಸ್ಥಾಪನೆ ಕುರಿತು ಜಿಲ್ಲಾಡಳಿತ ಶಿಾರಸು ಮಾಡಿದ್ದು, ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

    ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಕಿರಿಯ ವಿಜ್ಞಾನಿ ರಮೇಶ ದಿಕ್ಪಾಲ್, ಕೆ.ಕೆ. ಅಭಿನಯ ಹಾಗೂ ಗಣಿ ಮತ್ತು ವಿಜ್ಞಾನ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts