More

    ಇಂದು ವಿಶ್ವ ಹುಲಿ ದಿನ: ಗಿನ್ನೆಸ್​ ದಾಖಲೆಗೆ ಸೇರ್ಪಡೆಯಾಗಿದೆ 2018ರ ಹುಲಿ ಗಣತಿ; ಏನಿದರ ವೈಶಿಷ್ಟ್ಯ?

    ನವದೆಹಲಿ: ಇಂದು ವಿಶ್ವ ಹುಲಿ ದಿನ. ಪ್ರತಿ ವರ್ಷ ಭಾರತದಲ್ಲಿ ಜುಲೈ 29ರ ದಿನವನ್ನು ಹುಲಿ ದಿನವಾಗಿ ಆಚರಿಸಲಾಗುತ್ತದೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ದೇಶದಲ್ಲಿ ಹುಲಿಗಣತಿ ನಡೆಸಲಾಗುತ್ತದೆ. ಅದರಂತೆ ಈ ಹಿಂದೆ ಅಂದರೆ 2018ರಲ್ಲಿ ನಡೆಸಿದ ಹುಲಿ ಗಣತಿ ಗಿನ್ನೆಸ್​ ದಾಖಲೆಗೆ ಸೇರ್ಪಡೆಯಾಗಿದೆ.

    ಭಾರತದಲ್ಲಿ 2018-19ರಲ್ಲಿ ನಡೆಸಿದ ನಾಲ್ಕನೇ ಆವೃತ್ತಿಯ ಮಾಹಿತಿ ಹಾಗೂ ಅದನ್ನು ಕಲೆ ಹಾಕಲು ಬಳಸಿದ ಸಂಪನ್ಮೂಲಗಳ ಆಧಾರದಲ್ಲಿ ಅತ್ಯಂತ ಸಮಗ್ರ ಹುಲಿ ಗಣತಿ ಇದಾಗಿತ್ತು ಎಂದು ಗಿನ್ನೆಸ್​ ದಾಖಲೆ ತಂಡ ತಿಳಿಸಿದೆ. ವನ್ಯಜೀವಿ ಗಣತಿಗಾಗಿ ಅತಿ ದೊಡ್ಡ ಪ್ರಮಾಣದಲ್ಲಿ ಕ್ಯಾಮರಾ ಟ್ರ್ಯಾಪ್​ ತಾಂತ್ರಿಕತೆ ಬಳಸಿದ ಹೆಗ್ಗಳಿಕೆ ಇದರದ್ದಾಗಿದೆ.

    ಹುಲಿ ಗಣತಿಯನ್ನು 1,21,337 ಕಿ.ಮೀ ವ್ಯಾಪ್ತಿಯಲ್ಲಿ ನಡೆಸಲಾಗಿದ್ದು, ಇದಕ್ಕಾಗಿ 141 ಬೇರೆ ಸ್ಥಳಗಳಲ್ಲಿ 26,838 ಕ್ಯಾಮರಾ ಟ್ರ್ಯಾಪ್​ ಅಳವಡಿಸಲಾಗಿತ್ತು. ಈ ಕ್ಯಾಮರಾ ಟ್ರ್ಯಾಪ್​ಗಳು 34.85 ಲಕ್ಷ ಛಾಯಾಚಿತ್ರಗಳನ್ನು ಸೆರೆಹಿಡಿದಿದ್ದವು. ಇದರಲ್ಲಿ 76,651 ಹುಲಿ ಚಿತ್ರಗಳೇ ಆಗಿದ್ದವು. ಇದರಲ್ಲಿ 2,461 ವಯಸ್ಕ ಹುಲಿಗಳಾಗಿದ್ದವು. ಹುಲಿಗಳ ಮೇಲಿನ ಪಟ್ಟೆಗಳನ್ನು ಆಧರಿಸಿ ಅವುಗಳನ್ನು ಗುರುತಿಸಲಾಗಿತ್ತು.

    ಇದಲ್ಲದೇ, ಈ ಛಾಯಾಚಿತ್ರಗಳಲ್ಲಿ 51,777 ಚಿರತೆಗಳಾಗಿದ್ದರೆ, ಉಳಿದವು ಸ್ಥಳೀಯ ವನ್ಯಜೀವಿಗಳಾದಿದ್ದವು ಎಂದು ಗಣತಿದಾರರು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ; ದೇಶೀಯ ಸ್ಟಿವ್​ ಇರ್ವಿನ್​…! ಮೊಸಳೆ ಬಾಯಿಂದ ಪಾರಾಗಿ ಬಂದ 

    ಕ್ಯಾಮರಾಗಳ ಬಳಕೆ ಹೊರತಾಗಿ ಕಾಲ್ನಡಿಗೆಯಲ್ಲಿಯೂ ಸಮೀಕ್ಷೆ ಮಾಡಲಾಗಿತ್ತು. ಇದರಲ್ಲಿ 3,17958 ಆವಾಸ ಸ್ಥಾನಗಳಲ್ಲಿ ಹೆಜ್ಜೆ ಗುರುತು ಹಾಗೂ ಅವುಗಳ ಮಲದ ಮಾದರಿ ಸಂಗ್ರಹಿಸಲಾಗಿತ್ತು. ಇದರ ಮಾನವ ದಿನಗಳನ್ನು ಲೆಕ್ಕ ಹಾಕಿದರೆ, 6.20 ಲಕ್ಷ ದಿನಗಳಾಗಿತ್ತು.

    ಅಂತಿಮವಾಗಿ ತಿಳಿದು ಬಂದ ಫಲಿತಾಂಶವೆಂದರೆ, 2014ರಲ್ಲಿ 2,226 ಇದ್ದ ಹುಲಿಗಳ ಸಂಖ್ಯೆ 2018ರಲ್ಲಿ 2,967ಕ್ಕೆ ತಲುಪಿತ್ತು. ದೇಶದ 20 ರಾಜ್ಯಗಳ ಕಾಡುಗಳಲ್ಲಿ ಹುಲಿಗಳಿವೆ. ಅದರಲ್ಲೂ ಮಧ್ಯಪ್ರದೇಶ, ಕರ್ನಾಟಕ ಹಾಗೂ ಉತ್ತರಾಖಂಡಗಳಲ್ಲಿ ಹುಲಿಗಳ ಸಿಂಹ ಪಾಲಿದೆ. ಅಂದರೆ 1,492 ಹುಲಿಗಳು ಈ ಮೂರು ರಾಜ್ಯಗಳಲ್ಲಿವೆ.

    ಇಂದು ವಿಶ್ವ ಹುಲಿ ದಿನ; ನಾಗರಹೊಳೆ, ಬಂಡಿಪುರದಲ್ಲಿ ಎಷ್ಟಿವೆ? ಒಂದೂ ಇಲ್ಲದ ಅಭಯಾರಣ್ಯಗಳು ಯಾವವು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts