More

    ಮೈಸೂರು ದಸರಾ ಜಂಬೂ ಸವಾರಿ ವೀಕ್ಷಣೆ ಬಲು ದುಬಾರಿ! ಗ್ಯಾರೆಂಟಿ ಯೋಜನೆಗಳ ಎಫೆಕ್ಟ್​ ಎಂದ ಸಾರ್ವಜನಿಕರು

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯೆಂದರೆ ಅದು ಜಂಬೂ ಸವಾರಿ. ಚಾಮುಂಡೇಶ್ವರಿಯ ವಿಗ್ರಹವುಳ್ಳ ಚಿನ್ನದ ಅಂಬಾರಿಯನ್ನು ಹೊತ್ತು ಗಜಪಡೆ ಗಾಂಭೀರ್ಯದಿಂದ ಸಾಗುವುದನ್ನು ನೋಡಲು ಜನಸಾಗರವೇ ಕಿಕ್ಕಿರಿದು ನಿಂತಿರುತ್ತದೆ. ಅರಮನೆ ಆವರಣದಲ್ಲಿ ಜಂಬೂ ಸವಾರಿಯನ್ನು ಆರಾಮಾಗಿ ವೀಕ್ಷಣೆ ಮಾಡಲು ಸರ್ಕಾರ ಪ್ರತಿವರ್ಷ ದರ ನಿಗದಿ ಮಾಡುತ್ತದೆ.

    ಆದರೆ, ಈ ಬಾರಿ ಜಂಬೂ ಸವಾರಿ ವೀಕ್ಷಣೆ ಟಿಕೆಟ್​ ಬಲು ದುಬಾರಿಯಾಗಿದೆ. ಅರಮನೆ ಆವರಣದಲ್ಲಿ ದಸರಾ ವೀಕ್ಷಣೆ ಮಾಡಲು ಪ್ರತಿ ಟಿಕೆಟ್​ಗೆ 2 ರಿಂದ 3 ಸಾವಿರ ರೂಪಾಯಿ ನಿಗದಿ ಮಾಡಲಾಗಿದೆ. ಸರಳ ಹಾಗೂ ಸಂಪ್ರದಾಯಕ ದಸರಾ ಹೆಸರಿನಲ್ಲಿ ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಹಣ ಹೊಂದಿಸಲು ನಾನಾ ಕಸರತ್ತು ಮಾಡುತ್ತಿದ್ದು, ಅದರಲ್ಲಿ ಜಂಬೂ ಸವಾರಿ ವೀಕ್ಷಣೆ ಟಿಕೆಟ್​ ದರವೂ ಒಂದು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

    ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಸಿಗದ ಸ್ಕಾಲರ್​ಶಿಪ್: 3 ವರ್ಷದಿಂದ ಬಿಡುಗಡೆಯಾಗದ ಮೆಟ್ರಿಕ್​ಪೂರ್ವ ವಿದ್ಯಾರ್ಥಿವೇತನ

    ಆನ್​ಲೈನ್ ಮೂಲಕ ಟಿಕೆಟ್ ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಇಂದು ಬೆಳಗ್ಗೆ 10ಗಂಟೆಗೆ mysoredasara.gov.in ವೆಬ್​​ಸೈಟ್ ಮೂಲಕ ಟಿಕೆಟ್ ಖರೀದಿ ಮಾಡಬಹುದಾಗಿದೆ. ಈ ಹಿಂದೆ ಪ್ರತಿ ಟಿಕೆಟ್​​ ದರ 1 ಸಾವಿರ ರೂ. ಇತ್ತು. ಇದೀಗ ಯಾವುದೇ ಸೂಚನೆ ನೀಡದೆ ಏಕಾಏಕಿ ಟಿಕೆಟ್ ಬೆಲೆಯನ್ನು ದುಪ್ಪಟ್ಟು ಮಾಡಲಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಸರ್ಕಾರ ಗುರಿಯಾಗಿದೆ. ಸರಳ ದಸರಾ ಎಂದು ಹೇಳಿ ಜನಸಾಮಾನ್ಯರ ಬಳಿ ಹಣ ಸುಲಿಗೆ ಮಾಡುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

    ಗೋಲ್ಡ್ ಕಾರ್ಡ್​ಗೆ 6 ಸಾವಿರ ರೂಪಾಯಿ ದರ ನಿಗದಿಯಾಗಿದ್ದರೆ, ಜಂಬೂ ಸವಾರಿ ಹೋಗಿ ತಲುಪುವ ಬನ್ನಿಮಂಟಪದಲ್ಲಿ ರಾತ್ರಿ ನಡೆಯಲಿರುವ ಪಂಜಿನ‌ ಕವಾಯತು ವೀಕ್ಷಣೆಗೆ 500 ರೂಪಾಯಿ ದರವನ್ನು ನಿಗದಿ ಮಾಡಲಾಗಿದೆ.

    ಸಾಂಸ್ಕೃತಿಕ ಮೈಸೂರಿನಲ್ಲಿ ಈಗಾಗಲೇ ದಸರಾ ಹಬ್ಬ ಕಳೆಗಟ್ಟಿದೆ. ಅರಮನೆ ನಗರಿಯ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್​ ದೀಪಾಲಾಂಕರಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಪ್ರವಾಸಿ ತಾಣಗಳು ಕೈಚಾಚಿ ಕರೆಯುತ್ತಿವೆ. ಪ್ರತಿನಿತ್ಯ ಮೈಸೂರಿಗೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಹಣದ ವಹಿವಾಟುವಿನೊಂದಿಗೆ ಉದ್ಯಮ ವಲಯಕ್ಕೂ ಭಾರೀ ಖುಷಿ ತಂದಿದೆ.

    ಗಾಜಾದ ಆಸ್ಪತ್ರೆಯ ಮೇಲೆ ಭೀಕರ ಬಾಂಬ್​ ದಾಳಿ: 200 ಮಂದಿ ಸಾವು, ಹಮಾಸ್​ ಆರೋಪಕ್ಕೆ ಇಸ್ರೇಲ್​ ತಿರುಗೇಟು

    ವಿದ್ಯಾರ್ಥಿಗಳಿಗೆ ಸಿಗದ ಸ್ಕಾಲರ್​ಶಿಪ್: 3 ವರ್ಷದಿಂದ ಬಿಡುಗಡೆಯಾಗದ ಮೆಟ್ರಿಕ್​ಪೂರ್ವ ವಿದ್ಯಾರ್ಥಿವೇತನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts