More

    ಪ್ರತಾಪ್​ಸಿಂಹ-ಶ್ರೀವತ್ಸಗೆ ರಾಮದಾಸ್​ ಅಭಿಮಾನಿಗಳ ತಡೆ; ಅರ್ಧ ಗಂಟೆಯಿಂದ ಭೇಟಿಗಾಗಿ ಕಾಯುತ್ತಿರುವ ಸಂಸದ-ಅಭ್ಯರ್ಥಿ

    ಮೈಸೂರು: ಪ್ರಸಕ್ತ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯ ಮೂರನೇ ಪಟ್ಟಿಯ ಬಿಡುಗಡೆ ಸಂದರ್ಭದಲ್ಲೂ ಟಿಕೆಟ್​ ವಂಚಿತರ ಅಸಮಾಧಾನ ಭುಗಿಲೆದ್ದಿದ್ದು, ಆ ಪೈಕಿ ಶಾಸಕ, ಮಾಜಿ ಸಚಿವ ಎಸ್​.ಎ. ರಾಮದಾಸ್ ಅವರ ಪ್ರಕರಣ ಬಿಜೆಪಿಗೆ ಗಂಭೀರವಾಗಿ ಪರಿಣಮಿಸಿದಂತಿದೆ.

    ಕೃಷ್ಣರಾಜ ಕ್ಷೇತ್ರದಿಂದ ಸ್ಪರ್ಧಿಸಲು ಎಸ್.ಎ.ರಾಮದಾಸ್ ಆಕಾಂಕ್ಷಿಯಾಗಿದ್ದು, ಮೊದಲೆರಡು ಪಟ್ಟಿಯಲ್ಲಿ ಆ ಕ್ಷೇತ್ರಕ್ಕೆ ಅಭ್ಯರ್ಥಿಯ ಪ್ರಕಟಣೆ ಆಗಿರಲಿಲ್ಲ. ಹೀಗಾಗಿ ರಾಮದಾಸ್​ಗೆ ಟಿಕೆಟ್ ತಪ್ಪಲಿದೆ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದ್ದು, ಒಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದೂ ನಡೆದಿತ್ತು. ಅದಾಗ್ಯೂ ಮೂರನೇ ಪಟ್ಟಿಯಲ್ಲಾದರೂ ತಮ್ಮ ಹೆಸರು ಇರುತ್ತದೆ ಎಂದು ರಾಮದಾಸ್ ಆಶಾಭಾವನೆ ಇರಿಸಿಕೊಂಡಿದ್ದರು.

    ಇದನ್ನೂ ಓದಿ: ತಾನೂ ಕೋಟ್ಯಧಿಪತಿ, ಮಕ್ಕಳಿಬ್ಬರೂ ಕೋಟ್ಯಧಿಪತಿ, ಹೆಂಡತಿಯೂ ಕೋಟಿ ರೂ. ಮೌಲ್ಯದ ಚಿನ್ನಾಭರಣದ ಒಡತಿ, ಆದ್ರೆ ಸ್ವಂತ ಕಾರಿಲ್ಲ!

    ಆದರೆ ಇಂದು ಪ್ರಕಟವಾದ ಬಿಜೆಪಿಯ ಮೂರನೇ ಪಟ್ಟಿಯಲ್ಲಿ ಅವರ ಬದಲಿಗೆ ಮೈಸೂರು‌ ನಗರ ಬಿಜೆಪಿ ಅಧ್ಯಕ್ಷ ಶ್ರೀವತ್ಸ ಅವರಿಗೆ ಟಿಕೆಟ್ ಸಿಕ್ಕಿರುವುದು ಖಚಿತವಾಗಿದೆ. ಇದರ ಬೆನ್ನಿಗೇ ರಾಮದಾಸ್ ಬೇಸರಗೊಂಡಿದ್ದು, ಅವರ ಅಭಿಮಾನಿಗಳು ಕೂಡ ಅಸಮಾಧಾನಗೊಂಡಿದ್ದಾರೆ.

    ಇದನ್ನೂ ಓದಿ: ಸತ್ತ ಮೇಲೂ ಏಳು ರೋಗಿಗಳ ಜೀವ ಉಳಿಸಲು ಕಾರಣನಾದ ಬಾಲಕ!

    ಈ ನಡುವೆ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಅವರು ಈ ಚುನಾವಣೆಯಲ್ಲಿ ಸಹಕಾರ ನೀಡುವಂತೆ ರಾಮದಾಸ್ ಅವರ ಸಹಾಯ ಕೋರಲು ಸಂಸದ ಪ್ರತಾಪ್​ಸಿಂಹ ಅವರೊಂದಿಗೆ ರಾಮದಾಸ್ ಅವರ ವಿದ್ಯಾರಣ್ಯಪುರದ ನಿವಾಸಕ್ಕೆ ಆಗಮಿಸಿದ್ದಾರೆ. ಆದರೆ ತಮ್ಮ ನಾಯಕನನ್ನು ಭೇಟಿಯಾಗದಂತೆ ರಾಮದಾಸ್ ಅಭಿಮಾನಿಗಳು ಪ್ರತಾಪ್​ಸಿಂಹ ಮತ್ತು ಶ್ರೀವತ್ಸಗೆ ತಡೆಯೊಡ್ಡಿದ್ದಾರೆ.

    ಇದನ್ನೂ ಓದಿ: ಪಕ್ಷಕ್ಕಾಗಿ ದುಡಿದಿದ್ದಾನಂತೆ ಸೈಲೆಂಟ್ ಸುನೀಲ್; ಆತ ಪಕ್ಷದ ಸದಸ್ಯನೇ ಅಲ್ಲ ಎಂದ ಕಟೀಲ್

    ಸಂಸದ-ಅಭ್ಯರ್ಥಿಯನ್ನು ಅಡ್ಡಗಟ್ಟಿರುವ ರಾಮದಾಸ್ ಅಭಿಮಾನಿಗಳು ಸುಮಾರು ಅರ್ಧಗಂಟೆಯಿಂದ ಕಾಯುವಂತೆ ಮಾಡಿದ್ದು, ಅವರ ಮುಂದೆ ತಮ್ಮ ಅಸಮಾಧಾನ ಬಹಿರಂಗಪಡಿಸಿದ್ದಾರೆ. ಮಾತ್ರವಲ್ಲ, ಕೆಲವರು ರಾಮದಾಸ್​ಗೆ ಟಿಕೆಟ್ ಸಿಗದ್ದಕ್ಕೆ ಅತ್ತು ತೀವ್ರ ಬೇಸರ ತೋರ್ಪಡಿಸಿದ್ದಾರೆ.

    ಸದ್ಯದಲ್ಲೇ ಬಿಜೆಪಿಯ ಮತ್ತೊಂದು ವಿಕೆಟ್ ಪತನ; ಮೂರನೇ ಪಟ್ಟಿ ಬಿಡುಗಡೆ ಬೆನ್ನಿಗೇ ಆಕಾಂಕ್ಷಿಯ ಅಸಮಾಧಾನ

    ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ; ಮಾಜಿ ಪ್ರಧಾನಿ ಮೊಮ್ಮಗನ ವಾರ್ಷಿಕ ಆದಾಯ ಇಷ್ಟು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts