More

    ಮೂವರು ಶಿಕ್ಷಕರ ಅಮಾನತು

    ಮಧುಗಿರಿ: 2012-13 ಮತ್ತು 2014-15ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಗ್ರೇಡ್-2 ಸಹ ಶಿಕ್ಷಕರ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸದೆ ನೇಮಕಾತಿ ಹೊಂದಿರುವ ಆರೋಪದಡಿ ಶೈಕ್ಷಣಿಕ ಜಿಲ್ಲೆಯ ಮೂವರು ಶಿಕ್ಷಕರನ್ನು ಸಿಐಡಿ ಅಧಿಕಾರಿಗಳು ಶಾಲೆಗಳಿಗೆ ತೆರಳಿ ಫೆ.9ರಂದು ದಸ್ತಗಿರಿ ಮಾಡಿದ್ದಾರೆ.

    ಹೀಗಾಗಿ ಮೂವರನ್ನೂ ಇಲಾಖಾ ವಿಚಾರಣೆ ಕಾಯ್ದಿರಿಸಿ ಡಿಡಿಪಿಐ ಕೆ.ಜಿ.ರಂಗಯ್ಯ ಅಮಾನತು ಮಾಡಿ ಆದೇಶಿಸಿದ್ದಾರೆ.

    ಕೊರಟಗೆರೆ ತಾಲೂಕಿನ ಬುಕ್ಕಪಟ್ಟಣ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕಿ ಜಿ.ಎನ್.ದೀಪಾರಾಣಿ, ಪಾವಗಡ ತಾಲೂಕಿನ ನಾಗಲಮಡಿಕೆ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ ಜಿ.ಕೆ.ಮೋಹನ್‌ಕುಮಾರ್, ಪಾವಗಡ ತಾಲೂಕಿನ ವಳ್ಳೂರು ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಮಂಜುನಾಥ ಅಮಾನತುಗೊಂಡವರು.

    ಸಿಐಡಿ ಅಧಿಕಾರಿಗಳು ಶಾಲೆಗಳಿಂದ ಶಿಕ್ಷಕರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿರುವುದು ಇಲಾಖೆಯ ಗಮನಕ್ಕೆ ಬಂದಿದ್ದು, ಮೂವರೂ ಶಿಕ್ಷಕರು ಫೆ.9ರಿಂದ ಈವರೆಗೂ ಕರ್ತವ್ಯಕ್ಕೆ ಗೈರಾಗಿದ್ದಾರೆ.

    ಅಪರಾಧ ಕೃತ್ಯದಲ್ಲಿ ಭಾಗಿಯಾಗಿ, ಶಿಕ್ಷಣ ಇಲಾಖೆಯನ್ನು ವಂಚಿಸಿ, ನೇಮಕಾತಿ ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಪ್ರಕರಣದ ಬಗ್ಗೆ ವಿಜಯವಾಣಿ ಫೆ.11ರಂದು ಅಕ್ರಮ ನೇಮಕಾತಿ, 8 ಪ್ರೌಢಶಾಲಾ ಶಿಕ್ಷಕರ ಬಂಧನ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts