More

    ಬಾಗ್ದಾದ್​ನ ಯುನೈಟೆಡ್ ಸ್ಟೇಟ್ಸ್ ರಾಯಭಾರ ಕಚೇರಿ ಬಳಿ ಮೂರು ರಾಕೆಟ್​ ದಾಳಿ: ಅಮೆರಿಕ ಖಂಡನೆ

    ಬಾಗ್ದಾದ್​: ಇರಾಕ್​ ಬಾಗ್ದಾದ್​ನ ಯುನೈಟೆಡ್ ಸ್ಟೇಟ್ಸ್ ರಾಯಭಾರ ಕಚೇರಿ ಬಳಿ ಬೆಳಗಿನ ಜಾವ 3.30ರ ಅಂದಾಜಿಗೆ ಮೂರು ರಾಕೆಟ್​ ದಾಳಿ ನಡೆದಿದೆ.

    ರಾಕೆಟ್​ ದಾಳಿ ನಡೆದ ಸ್ಥಳವು ಗ್ರೀನ್​ ಜೋನ್​ ಆಗಿದ್ದು, ಅಲ್ಲಿ ಹೆಚ್ಚಿನ ಭದ್ರತೆ ಇರುತ್ತದೆ. ಆದರೆ ಯಾವುದೇ ಹಾನಿಯಾದ ವರದಿಗಳಾಗಿಲ್ಲ. ರಾಕೆಟ್​ ದಾಳಿಯಾದ ಕ್ಷಣದಲ್ಲಿ ಭದ್ರತೆಯ ಸೈರನ್​ಗಳು ಕೂಗಿದವು.

    ಹಸಿರು ವಲಯದ ಮೇಲೆ ದಾಳಿ ನಡೆಸಿದ ಬಗ್ಗೆ ಅಮೆರಿಕ ಕಿಡಿ ಕಾರಿದೆ. ಕಳೆದ ಕೆಲ ತಿಂಗಳುಗಳಲ್ಲಿ ಇರಾನ್ ಬೆಂಬಲಿತ ಅರೆಸೈನಿಕ ಗುಂಪುಗಳು ಈ ರೀತಿ ದಾಳಿ ನಡೆಸುತ್ತಿವೆ ಎಂದಿದೆ. ಆದರೆ ದಾಳಿಯ ಹೊಣೆಯನ್ನು ಯಾರು ಈವರೆಗೆ ಒಪ್ಪಿಕೊಂಡಿಲ್ಲ.

    ಕಳೆದ ಕೆಲ ದಿನಗಳ ಹಿಂದೆಯಷ್ಟೇ ಅಮೆರಿಕ ನೆಲೆಗಳ ಮೇಲೆ ರಾಕೆಟ್​ ದಾಳಿ ನಡೆದಿತ್ತು. ಇದಕ್ಕೆ ಅಮೆರಿಕ ಪ್ರತ್ಯುತ್ತರ ನೀಡಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts