More

    ಬಶೀರಾ, ಪ್ರೇಮಾ, ಶಹೀದಾಗೆ ಚಿನ್ನ

    ವಿಜಯವಾಣಿ ಸುದ್ದಿಜಾಲ ಧಾರವಾಡ

    ಕರ್ನಾಟಕ ಕುಸ್ತಿ ಹಬ್ಬದ 3ನೇ ದಿನವಾದ ಸೋಮವಾರ ಗದಗ ಬಾಲಕಿಯರು ಪಾರಮ್ಯ ಮೆರೆದರು.

    47-50 ಕೆಜಿ ಮಹಿಳೆಯರ ವಿಭಾಗದಲ್ಲಿ ಗದಗನ ಬಶೀರಾ ಯಾಕರದ ಅವರು ಗದಗದ ಸೋನಿಯಾ ಜಾಧವ ಅವರನ್ನು ಚಿತ್ ಮಾಡುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡರು.

    ಇದೇ ವಿಭಾಗದಲ್ಲಿ ಗದಗನ ಸಂಗೀತಾ ಹಾಗೂ ಬೆಳಗಾವಿಯ ಮಮತಾ ಕೇಲೋಜಿ ಕಂಚಿನ ಪದಕಕ್ಕೆ ಸಮಾಧಾನಪಟ್ಟರು.

    53 ಕೆಜಿ ವಿಭಾಗದಲ್ಲಿ ಗದಗನ ಪ್ರೇಮಾ ಹುಚ್ಚನ್ನವರ ಅವರು ಬೆಳಗಾವಿಯ ಐಶ್ವರ್ಯ ಕರಿಗಾರ ಅವರನ್ನು ಚಿತ್ ಮಾಡುವ ಮೂಲಕ ಚಿನ್ನದ ಪದಕ ಗೆದ್ದರು. ಇದೇ ವಿಭಾಗದಲ್ಲಿ ಅನಕಾ ಸಿದ್ದಿ ಹಾಗೂ ರಾಮನಗರದ ಕಾವ್ಯಾ ಕಂಚಿನ ಪದಕ ಪಡೆದರು. 55 ಕೆಜಿ ವಿಭಾಗದಲ್ಲಿ ಗದಗನ ಶಹೀದಾ ಬೇಗಂ ಅವರು ಹಳಿಯಾಳದ ಅಪರ್ಣಾ ಸಿದ್ದಿ ಅವರನ್ನು ಚಿತ್ ಮಾಡುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡರು. ವನಿತಾ ಹಾಗೂ ಭಾರತಿ ಇಬ್ಬರೂ ಕಂಚಿನ ಪದಕ ಪಡೆದರು.

    ಧಾರವಾಡದ ಕುಸ್ತಿ ಪಟುಗಳಿಗೆ ಕಂಚು: 17 ವರ್ಷದೊಳಗಿನ ಬಾಲಕರ 41 ಕೆಜಿ ವಿಭಾಗದ ಕುಸ್ತಿ ಪಂದ್ಯದಲ್ಲಿ ಹಳಿಯಾಳದ ಸೂರಜ್ ಎಸ್.ಜಿ. ಚಿನ್ನ ಪಡೆದರೆ, ಬಾಗಲಕೋಟೆಯ ಆರ್.ಆರ್. ಲಿಂಗರಾಜ ಬೆಳ್ಳಿ ಹಾಗೂ ಬಾಗಲಕೋಟೆಯ ಪ್ರಶಾಂತ ಎಸ್.ಸಿ. ಮತ್ತು ಧಾರವಾಡದ ಪ್ರವೀಣ ಎಸ್.ಬಿ. ಕಂಚಿನ ಪದಕಕ್ಕೆ ಸಮಾಧಾನಪಟ್ಟುಕೊಂಡರು. 48 ಕೆಜಿ ವಿಭಾಗದಲ್ಲಿ ಉತ್ತರ ಕನ್ನಡದ ರೋಹನ್ ದೊಡ್ಡಮನಿ ಚಿನ್ನ, ಧಾರವಾಡದ ಮಲ್ಲಿಕಾರ್ಜುನ ತೋಳಮಟ್ಟಿ ಬೆಳ್ಳಿ ಹಾಗೂ ಕಾರ್ತಿಕ ಟಿ., ದರ್ಶನ ಡಿ.ಎ. ತೃತೀಯ ಸ್ಥಾನದೊಂದಿಗೆ ಇಬ್ಬರೂ ಕಂಚಿನ ಪದಕ ಪಡೆದರು. 17 ವರ್ಷದೊಳಗಿನ 51 ಕೆಜಿ ವಿಭಾಗದಲ್ಲಿ ಬಾಗಲಕೋಟೆಯ ಲೋಹಿತ್ ಕುಮಾರ್ ಎಸ್.ಎಂ. ಚಿನ್ನ, ಬಾಗಲಕೋಟೆಯ ಮಂಜುನಾಥ ಎಸ್. ಚೌಧರಿ ಬೆಳ್ಳಿ, ವಿರೂಪಾಕ್ಷ ಐ. ಹಾಗೂ ಈರಣ್ಣ ಗದಗ ಕಂಚಿನ ಪದಕ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts