More

    ಮೂರು ದಿನ ಯೆಲ್ಲೋ ಅಲರ್ಟ್

    ಮಂಗಳೂರು: ದ.ಕ ಜಿಲ್ಲೆಯ ವಿವಿಧೆಡೆ ಮಂಗಳವಾರ ಸಾಧಾರಣದಿಂದ ಉತ್ತಮ ಮಳೆ ಸುರಿದಿದೆ. ಉಳಿದಂತೆ ಮೋಡ ಕವಿದ ಬಿಸಿಲಿನ ವಾತಾವರಣವಿತ್ತು. ಕಾಣಿಯೂರಿನಲ್ಲಿ ಅತ್ಯಧಿಕ 39 ಮಿ.ಮೀ. ಮತ್ತು ನೂಜಿಬಾಳ್ತಿಲದಲ್ಲಿ 28 ಮಿ.ಮೀ. ಮಳೆಯಾಗಿದೆ.

    ಇನ್ನೂ ಮೂರು ದಿನ ಯೆಲ್ಲೋ ಅಲರ್ಟ್ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಿನದ ಗರಿಷ್ಠ ತಾಪಮಾನ 31ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 24.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅರಬ್ಬಿ ಸಮುದ್ರ ಪ್ರಕ್ಷುಬ್ಧವಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ.

    ಉಡುಪಿ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ, ಮಂಗಳವಾರ ಸಾಯಂಕಾಲ ಸಣ್ಣ ಪ್ರಮಾಣದಲ್ಲಿ ಮಳೆ ಸುರಿದಿದೆ. ಉಡುಪಿ, ಬ್ರಹ್ಮಾವರ ಕಾರ್ಕಳ ಸೇರಿದಂತೆ ಕೆಲವೆಡೆ ರಾತ್ರಿ 7 ಗಂಟೆ ಬಳಿಕ ಕೆಲಕಾಲ ಮಳೆ ಸುರಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts