More

    ಬ್ಯಾಂಕ್ ಶಾಖೆ ಕಡಿತಕ್ಕೆ ಚಿಂತನೆ

    ನಗರ ಪ್ರದೇಶಗಳಲ್ಲಿರುವ ಕೆಲ ಬ್ಯಾಂಕ್ ಶಾಖೆಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಚಿಂತನೆ ನಡೆಸಲಾಗುತ್ತಿದೆ. ಕರೊನಾ ವೈರಸ್ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿ ಆರೋಗ್ಯದ ದೃಷ್ಟಿಯಿಂದಾಗಿ ಈ ಕ್ರಮ ತೆಗೆದುಕೊಳ್ಳಲಾಗುವುದು ಎನ್ನಲಾಗಿದೆ.

    ದೇಶದಲ್ಲಿ 21 ದಿನಗಳ ಲಾಕ್​ಡೌನ್ ಘೊಷಣೆ ಮಾಡಲಾಗಿದ್ದರೂ ಬ್ಯಾಂಕ್​ಗಳು ತೆರೆದಿದ್ದವು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪ್ಯಾಕೇಜ್ ಘೋಷಣೆ ಮಾಡಿದ್ದು, ಹಣ ನೇರವಾಗಿ ಬಡವರ ಖಾತೆಗೆ ಜಮಾ ಆಗಲಿದೆ. ಹಳ್ಳಿಗಳಲ್ಲಿನ ಜನರು ನಗದು ವಹಿವಾಟನ್ನು ನಂಬಿದ್ದಾರೆ. ಹೀಗಾಗಿ ಹಳ್ಳಿಗಳಲ್ಲಿ ಬ್ಯಾಂಕ್ ಮುಚ್ಚುವುದು ಕಷ್ಟವಾಗುತ್ತದೆ. ನಗರ ಪ್ರದೇಶಗಳಲ್ಲಿ ಹೆಚ್ಚಿನ ಜನ ಡಿಜಿಟಲ್ ಪೇಮೆಂಟ್ ನೆಚ್ಚಿಕೊಂಡಿರುವ ಕಾರಣ ಐದು ಕಿ.ಮೀ ವ್ಯಾಪ್ತಿಗೆ ಬ್ಯಾಂಕ್​ನ ಒಂದು ಶಾಖೆ ತೆರೆಯುವಂತೆ ಯೋಜನೆ ಹಾಕಲಾಗುತ್ತಿದೆ.

    ಇದರ ಜತೆಯಲ್ಲಿ ಒಂದು ದಿನ ಬಿಟ್ಟು ಒಂದು ದಿನ ಬ್ಯಾಂಕ್ ತೆರೆಯುವ ಯೋಜನೆಯೂ ಇದೆ. ಬ್ಯಾಂಕ್​ಗಳಲ್ಲಿ ಜನಸಂದಣಿಯನ್ನು ತಡೆಯುವ ಸಲುವಾಗಿ ಬ್ಯಾಂಕಿಂಗ್ ಅಸೋಸಿಯೇಷನ್ ಅದರ 255 ಸದಸ್ಯರಿಗೆ ತುರ್ತು ಅಗತ್ಯವಲ್ಲದ ಸೇವೆಗಳನ್ನು ಸ್ಥಗಿತಗೊಳಿಸುವಂತೆ ತಿಳಿಸಿದೆ. ಹಲವು ಬ್ಯಾಂಕ್​ಗಳು ಬ್ಯಾಂಕಿಂಗ್ ಸೇವೆಯ ಸಮಯ ಕಡಿತಗೊಳಿಸಿವೆ. ಆದಷ್ಟು ಆನ್​ಲೈನ್ ವ್ಯವಹಾರ ನಡೆಸಿ ಎಂದು ಕೇಳಿಕೊಂಡಿವೆ. ಬ್ಯಾಂಕ್ ಬ್ರಾ್ಯಂಚ್​ಗಳ ಮುಚ್ಚುವ ವಿಚಾರ ಕುರಿತಾಗಿ ಆರ್​ಬಿಐ ಯಾವುದೇ ಮಾಹಿತಿ ಕೊಟ್ಟಿಲ್ಲ.

    ಕಿಲ್ಲರ್​ ಕರೊನಾದಿಂದ ಕುಗ್ಗಿರುವ ಜಾಗತಿಕ ಆರ್ಥಿಕತೆ ಮೇಲೆತ್ತಲು 5 ಟ್ರಿಲಿಯನ್​ ಡಾಲರ್​: ಜಿ20 ರಾಷ್ಟ್ರಗಳ ವಾಗ್ದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts