More

  ಕಾರ್ ಕಳಿಸ್ತೀನಿ ಪ್ಲೀಸ್ ಬನ್ನಿ: ಮುಳ್ಳಿನಬೇಲಿ ಹಾಕಿದ್ದವರಿಂದಲೇ ಸ್ವಾಗತ | ಮತಕ್ಕಾಗಿ ಡಿಮಾಂಡ್

  | ಜಗನ್ನಾಥ್ ಕಾಳೇನಹಳ್ಳಿ ತುಮಕೂರು

  ಕರೊನಾ ಕಾರಣಕ್ಕೆ ಲಾಕ್​ಡೌನ್ ಹೇರಿದ್ದ ಸಂದರ್ಭ ಮುಳ್ಳಿನಬೇಲಿ ಹಾಕಿ ಹಳ್ಳಿಗಳಿಗೆ ನಿರ್ಬಂಧ ಹೇರಿದ್ದ ಜನರೇ ಈಗ ಹೂವಿನಹಾರ ಹಿಡಿದು ಸ್ವಾಗತಿಸಲು ಸಜ್ಜಾಗಿದ್ದಾರೆ! ಗ್ರಾಮಪಂಚಾಯಿತಿ ಫೈಟ್ ಆಖೈರಾಗಿದ್ದು ಎರಡೂ ಹಂತದ ಚುನಾವಣೆಗೆ ಅಖಾಡ ಸಿದ್ಧಗೊಂಡಿದೆ. ಡಿ.22, 27ರಂದು ನಡೆಯಲಿರುವ ಮತದಾನಕ್ಕೆ ಈಗ ಹಳ್ಳಿಗಳಿಂದ ದೂರದೂರುಗಳಲ್ಲಿರುವ ಮತದಾರರಿಗೆ ಎಲ್ಲಿಲ್ಲದ ಡಿಮಾಂಡ್. ರಿಪೋರ್ಟ್ ಇದ್ದರಷ್ಟೇ ಗ್ರಾಮಕ್ಕೆ ಪ್ರವೇಶ: 9 ತಿಂಗಳ ಹಿಂದೆಯಷ್ಟೇ ಕರೊನಾ ಅಟ್ಟಹಾಸಕ್ಕೆ ಹೆದರಿ ಬೆಂಗಳೂರು ಸೇರಿ ಹೊರ ಜಿಲ್ಲೆಗಳಿಂದ ಊರಿಗೆ ಬರುವವರು ಕರೊನಾ ಪರೀಕ್ಷೆ ಮಾಡಿಸಿಕೊಂಡು ವರದಿ ತನ್ನಿ ಅಥವಾ ಊರ ಹೊರಗೆ 14 ದಿನ ಕಳೆದು ಬನ್ನಿ ಅಂತ ನಿರ್ಬಂಧ ಹೇರಿದ್ದ ಜನರೇ ಈಗ ಕಾರುಗಳ ವ್ಯವಸ್ಥೆ, ಸಾರಿಗೆ ವೆಚ್ಚ ಭರಿಸುವ ಭರವಸೆ ನೀಡಿ ಗ್ರಾಮದಲ್ಲಿ ಮತ ಹಕ್ಕು ಹೊಂದಿರುವರನ್ನು ಕರೆಸಿಕೊಳ್ಳಲು ನಿರಂತರ ಸಂಪರ್ಕ ಸಾಧಿಸಿದ್ದಾರೆ. ಹಣ, ಮದ್ಯ, ಗಿಫ್ಟ್​ಗಳ ಆಮಿಷವೊಡ್ಡಿ ಪರಿಚಯಸ್ಥರ ಮತ ಕೈತಪ್ಪಿ ಹೋಗದಂತೆ ಬೆಂಗಳೂರು ಸೇರಿ ದೂರದ ಊರುಗಳಲ್ಲಿರುವವರನ್ನು ಕರೆಸಿಕೊಳ್ಳಲು ದುಂಬಾಲು ಬಿದ್ದಿದ್ದಾರೆ.

  ಸಖತ್ ಟ್ರೋಲ್

  ಕರೊನಾ ಇದ್ದಾಗ ಬೆಂಗಳೂರಿನಲ್ಲಿರೋ ಹುಡುಗರನ್ನು ಊರಿನ ಒಳಗೆ ಬರಬೇಡ ಅಂತ ಹೇಳಿದ್ದ ಜನ ಇವತ್ತು ಫೋನ್ ಮಾಡಿ ಒಂದು ಒಂದು ವೋಟ್ ಹಾಕು ಅಂತ ಹೇಳ್ತಾ ಇದ್ದಾರೆ… ಅನ್ನುವುದು ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೋಲ್ ಆಗುತ್ತಿದೆ. ಬಹುತೇಕ ಎಲ್ಲರ ವಾಟ್ಸ್ ಆಪ್ ಸ್ಟೇಟಸ್​ನಲ್ಲೂ ಇದು ರಾರಾಜಿಸುತ್ತಿದೆೆ.

  ಕರೊನಾ ಕಾಲದಲ್ಲಿ ಬಹುತೇಕ ಹಳ್ಳಿಗಳಲ್ಲಿ ಬೆಂಗಳೂರು ಸೇರಿ ಹೊರಗಡೆಯಿಂದ ಜನರು ಊರಿಗೆ ಬರದಂತೆ ಮನವಿ ಮಾಡುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಗ್ರಾಪಂ ಚುನಾವಣೆ ತಪ್ಪಿಸಿಕೊಳ್ಳದಂತೆ ಅಭ್ಯರ್ಥಿಗಳು ದುಂಬಾಲು ಬೀಳುತ್ತಿದ್ದಾರೆ.

  See also  ಬರ ಸಂಕಷ್ಟದ ನಡುವೆ ಸಚಿವರಿಗೆ ರೂ.9.5 Cr ವೆಚ್ಚದಲ್ಲಿ ಹೊಸ ಕಾರು

  | ಕಾಳಿಪ್ರಸಾದ್ ಹೊಸ್ಕೆರೆ ಚಿಕ್ಕನಾಯಕನಹಳ್ಳಿ

  ಗ್ರಾಪಂ ಬೇಬಾಕಿ ಭರ್ಜರಿ ಸಂಗ್ರಹ

  ಕಾರ್ ಕಳಿಸ್ತೀನಿ ಪ್ಲೀಸ್ ಬನ್ನಿ: ಮುಳ್ಳಿನಬೇಲಿ ಹಾಕಿದ್ದವರಿಂದಲೇ ಸ್ವಾಗತ | ಮತಕ್ಕಾಗಿ ಡಿಮಾಂಡ್

  ಗ್ರಾಪಂ ಸಿಬ್ಬಂದಿ ಮನೆ ಮನೆ ತಿರುಗಿ ಕರ ಪಾವತಿಸುವಂತೆ ದುಂಬಾಲು ಬಿದ್ದರೂ ಕ್ಯಾರೆ ಎನ್ನದ ವರೀಗ ಚುನಾವಣೆ ಕಣಕ್ಕಿಳಿಯಲು ತಮ್ಮದಷ್ಟೇ ಅಲ್ಲ, ಸೂಚಕರದ್ದೂ ಸೇರಿಸಿ ಬಾಕಿ ಚುಕ್ತಾ ಮಾಡಿದ್ದಾರೆ.

  ಸ್ತ್ರೀಶಕ್ತಿ ಗುಂಪಿಗೆ ನೀತಿಸಂಹಿತೆ

  ಚಿತ್ರದುರ್ಗ: ಗ್ರಾಪಂ ಚುನಾವಣೆ ಸಂಬಂಧ ಸ್ತ್ರೀ ಶಕ್ತಿ ಗುಂಪು/ಸಂಘಗಳ ಸದಸ್ಯರ ಮೇಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾದರಿ ನೀತಿ ಸಂಹಿತೆ ನಿರ್ಬಂಧ ವಿಧಿಸಿದೆ. ರಾಜ್ಯದಲ್ಲಿ ಇಲಾಖೆಯ ಸಾವಿರಾರು ಸ್ತ್ರೀಶಕ್ತಿ ಗುಂಪುಗಳಲ್ಲಿ ಲಕ್ಷಾಂತರ ಸದಸ್ಯರಿದ್ದಾರೆ. ಈ ಗುಂಪಿನ ಸದಸ್ಯರು ಇಚ್ಛಿಸಿದರೆ ಚುನಾವಣೆಗೆ ಸ್ಪರ್ಧಿಸಬಹುದು. ಆದರೆ ಸ್ಪರ್ಧಿ ಪರ ಪ್ರಚಾರ ಮಾಡುವಂತಿಲ್ಲ. ನೀತಿ ಸಂಹಿತೆ ಪೂರ್ಣವಾಗುವವರೆಗೆ ಗುಂಪಿನ ಸದಸ್ಯರು ಸಭೆ ಅಥವಾ ಸಮಾರಂಭ ನಡೆಸುವಂತಿಲ್ಲ ಎಂಬಿತ್ಯಾದಿ ನೀತಿ ಸಂಹಿತೆಯನ್ನು ಸದಸ್ಯರ ಗಮನಕ್ಕೆ ತರುವ ಹೊಣೆಯನ್ನು ಗುಂಪಿನ ಪ್ರತಿನಿಧಿ (1 ಮತ್ತು 2) ಗಳ ಮೇಲಿರುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ನಿರ್ದೇಶನವನ್ನು ಆಧರಿಸಿ ಇಲಾಖೆ ಡಿ.1ರಂದು ಹೊರಡಿಸಿರುವ ಸುತ್ತೋಲೆ ತಿಳಿಸಿದೆ.

  ಕಣದಲ್ಲಿ ಕಂಡಿದ್ದು…

  • ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ವಿಜಯಕುಮಾರ ಶರಣಪ್ಪ ಭಜಂತ್ರಿ(46) ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದು, 8 ಲಕ್ಷ ರೂ.ಗಿಂತ ಹೆಚ್ಚು ಸಾಲ ಇತ್ತು.
  • ಗೌರಿಬಿದನೂರು ತಾಲೂಕಿನ ಅಲೀಪುರ ಗ್ರಾಪಂನಲ್ಲಿ ಬುಧವಾರ ಒಂದೇದಿನ ಜಿದ್ದಿಗೆಬಿದ್ದು 125 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಅಧಿಕಾರಿಗಳು ಇವೆಲ್ಲವನ್ನೂ ಸ್ವೀಕರಿಸುವಷ್ಟರಲ್ಲಿ ಬೆಳಗಿನಜಾವ 3 ಗಂಟೆಯಾಗಿತ್ತು! ಗ್ರಾಪಂನ 28 ಸ್ಥಾನಗಳಿಗೆ 140 ಉಮೇದುವಾರಿಕೆ ಸಲ್ಲಿಕೆಯಾಗಿವೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts