More

    ಅಂಜಲಿ ಕುಟುಂಬಕ್ಕೆ ತಿಪ್ಪಣ್ಣಪ್ಪ ನೆರವು

    ಕಲಬುರಗಿ: ಹುಬ್ಬಳ್ಳಿಯ ಕೋಲಿ ಸಮಾಜದ ಯುವತಿ ಅಂಜಲಿ ಅಂಬಿಗೇರ ಕುಟುಂಬಕ್ಕೆ ಮಂಗಳವಾರ ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಭೇಟಿ ನೀಡಿ ಸಾಂತ್ವಾನ ಹೇಳಿ ೧ ಲಕ್ಷ ರೂ. ವೈಯಕ್ತಿಕ ಪರಿಹಾರ ನೀಡಿ, ಕುಟುಂಬಕ್ಕೆ ಹೌಸಿಂಗ್ ಬೋರ್ಡ್ನಿಂದ ಮನೆ ಕೊಡುವುದಾಗಿ ಭರವಸೆ ನೀಡಿದರು.
    ನಂತರ ಮಾತನಾಡಿ, ಸಮಾಜದಲ್ಲಿ ಇಂತಹ ಘಟನೆಗಳಿಂದ ಭಯ ಉಂಟಾಗುತ್ತದೆ. ಕೋಲಿ ಸಮಾಜದ ಯುವತಿಯನ್ನು ಹಾಡುಹಗಲೇ ಮನೆಗೆ ನುಗ್ಗಿ ಕೊಂದಿರುವ ಅಮಾನವೀಯ ಘಟನೆ ಖಂಡನೀಯ. ಪೊಲೀಸರು ಕೊಲೆ ಮಾಡಿರುವ ಯುವಕನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಂಡು ಇತರರಿಗೆ ಪಾಠ ಆಗಬೇಕು ಎಂದು ಹೇಳಿದರು.

    ಮೃತ ಅಂಜಲಿಯ ಮೂರು ಸಹೋದರಿಯರ ರಕ್ಷಣೆ, ಅವರ ಶಿಕ್ಷಣ ಮತ್ತು ಉದ್ಯೋಗ ಕಲ್ಪಿಸುವ ಜವಾಬ್ದಾರಿ ಸರ್ಕಾರ ಹೊಂದಿದೆ. ವಿಧಾನ ಪರಿಷತ್‌ನಲ್ಲೂ ಚರ್ಚಿಸಿ, ಸ್ಪಂದಿಸಲಾಗುವುದು. ಸಮಸ್ಯೆ ಎದುರಾದರೆ ಸಂಪರ್ಕಿಸುವಂತೆ ಧೈರ್ಯ ತುಂಬಿದರು.

    ಶೀಘ್ರವೇ ಮೃತ ಅಂಜಲಿ ಕುಟುಂಬಕ್ಕೆ ಹೌಸಿಂಗ್ ಬೋರ್ಡ್ನಿಂದ ಮನೆ ಒದಗಿಸಲು ಬೋರ್ಡ್ ಅಧ್ಯಕ್ಷರಿಗೆ ಕರೆ ಮಾಡಿ, ಮಾತನಾಡಿದ ಕಮಕನೂರು, ಮನೆ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು. ಹುಬ್ಬಳ್ಳಿ ಕೋಲಿ ಸಮಾಜದ ಗುರು ಶ್ರೀ ವಾಸುದೇವ್ ಸ್ವಾಮೀಜಿ, ಮುಖಂಡರಾದ ವಿಜಯಕುಮಾರ ಹದಗಲ್, ಕಲ್ಯಾಣ ಕರ್ನಾಟಕ ಕೋಲಿ ಸಮನ್ವಯ ಸಮಿತಿ ಅಧ್ಯಕ್ಷ ಅಮೃತ ಡಿಗ್ಗಿ, ನಿಂಗಣ್ಣ ಸೋಮನೂರು, ಅರ್ಜುನಪ್ಪ ಜಮಾದಾರ, ಸಂಗಮನಾಥ ಕಣ್ಣಿ, ಶಿವರಾಜ ಕಿರಸಾವಳಗಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts