More

    ಮಕ್ಕಳ ದೈಹಿಕ ಬೆಳವಣಿಗೆಗೆ ಪೂರಕವಾದ ‘ಉತ್ಥಿತ ಪದ್ಮಾಸನ’

    ಉತ್ಥಿತ ಪದ್ಮಾಸನ ಅಥವಾ ತೋಲಾಸನ – ಇದು ತೋಳುಗಳ ಆಧಾರದ ಮೇಲೆ ಮಾಡುವ ಒಂದು ಸವಾಲಿನ ಭಂಗಿ. ಪದ್ಮ ಎಂದರೆ ಕಮಲದ ಹೂವು. ಆದ್ದರಿಂದ ಇದಕ್ಕೆ ಎತ್ತರದ ಕಮಲದ ಭಂಗಿ ಎಂಬ ಹೆಸರೂ ಇದೆ. ತೋಲ ಎಂದರೆ ತಕ್ಕಡಿ. ತಕ್ಕಡಿಯನ್ನು ಹೋಲುವಂತಹ ಭಂಗಿಯಿದು.

    ಎಳೆಯ ವಯಸ್ಸಿನ ಮಕ್ಕಳ ಶಾರೀರಿಕ ಬೆಳವಣಿಗೆಗೆ ಈ ಆಸನ ಪೂರಕ. ವಿದ್ಯಾರ್ಥಿಗಳು ಪದ್ಮಾಸನವನ್ನು ಕಲಿತರೆ ಏಕಾಗ್ರ ಮನಸ್ಸಿನಿಂದ ಹೆಚ್ಚು ಕಾಲ ಒಂದೆಡೆ ಕೂರಲು ಸುಲಭವಾಗುತ್ತದೆ. ಉತ್ಥಿತ ಪದ್ಮಾಸನ ಮಾಡಿದರೆ ತೋಳುಗಳಿಗೆ, ರಟ್ಟೆಗಳಿಗೆ ಹೆಚ್ಚು ಶಕ್ತಿ ನೀಡುತ್ತದೆ.

    ಇದನ್ನೂ ಓದಿ: ನ.8 ರಿಂದ ಅಂಗನವಾಡಿ‌ ಆರಂಭ

    ಪ್ರಯೋಜನಗಳು: ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ತೋಳುಗಳು ಮತ್ತು ಭುಜಗಳು ಬಲಯುತಗೊಳ್ಳುತ್ತವೆ. ಕೈಗಳು, ರಟ್ಟೆಗಳು ಮತ್ತು ಮಣಿಕಟ್ಟುಗಳು ಬಲಗೊಳ್ಳುತ್ತವೆ. ಕಿಬ್ಬೊಟ್ಟೆಯ, ಪಕ್ಕೆಗಳ ಮಾಂಸಖಂಡಗಳು ಶಕ್ತಿಯುತವಾಗುತ್ತವೆ. ಜೀರ್ಣಶಕ್ತಿ ಹೆಚ್ಚುತ್ತದೆ.

    ಅಭ್ಯಾಸ ಕ್ರಮ: ಪ್ರಥಮವಾಗಿ ಜಮಖಾನದ ಮೇಲೆ ದಂಡಾಸನದಲ್ಲಿ ಕುಳಿತುಕೊಳ್ಳುವುದು. ಬಲಗಾಲನ್ನು ಮಡಿಚಿ ಎಡತೊಡೆಯ ಮೇಲಿರಿಸಿ, ಎಡಗಾಲನ್ನು ಬಲತೊಡೆಯ ಮೇಲಿರಿಸಿ ಪದ್ಮಾಸನ ಮಾಡುವುದು. ಚಿನ್ಮುದ್ರೆಯಲ್ಲಿ ಸ್ವಲ್ಪ ಹೊತ್ತು ಶಾಂತವಾಗಿ ಕುಳಿತುಕೊಳ್ಳುವುದು. ನಂತರ ಎರಡೂ ಅಂಗೈಗಳನ್ನೂ ಸೊಂಟದ ಪಕ್ಕದಲ್ಲಿ ನೆಲದ ಮೇಲೆ ಊರಬೇಕು. ಒಮ್ಮೆ ಉಸಿರನ್ನು ತೆಗೆದುಕೊಂಡು ಉಸಿರು ಬಿಡುತ್ತಾ ದೇಹವನ್ನು ಮೇಲಕ್ಕೆತ್ತಬೇಕು. ಸ್ವಲ್ಪ ಹೊತ್ತು ಹಾಗೇ ಇದ್ದು, ಸಹಜ ಉಸಿರಾಟ ನಡೆಸಬೇಕು. ನಂತರ ಉಸಿರನ್ನು ಬಿಡುತ್ತಾ ದೇಹವನ್ನು ಕೆಳಕ್ಕೆ ತಂದು ವಿಶ್ರಮಿಸಬೇಕು.

    ಆರಂಭದಲ್ಲಿ ಪದ್ಮಾಸನವನ್ನು ಕಲಿತು ಅಭ್ಯಾಸ ಮಾಡಿಕೊಂಡು ನಂತರ ಉತ್ಥಿತ ಪದ್ಮಾಸನ ಮಾಡಲು ಪ್ರಯತ್ನಿಸಬೇಕು. ತೀರಾ ಸೊಂಟ ನೋವು, ಬೆನ್ನು ನೋವು ಇರುವವರು ಅಭ್ಯಾಸ ಮಾಡುವುದು ಸೂಕ್ತವಲ್ಲ.

    ಜಿಮ್​ ಮಾಡಬೇಕಾ ಬೇಡ್ವಾ? ಹೃದಯದ ಆರೋಗ್ಯಕ್ಕೆ ತಜ್ಞರ ಸಲಹೆ ಇಲ್ಲಿದೆ

    ಹೊಟ್ಟೆಯ ಕೊಬ್ಬು ಕರಗಿಸಲು ಉಪಯುಕ್ತ ಈ ಯೋಗಾಸನ! ಮಧುಮೇಹ, ಮಲಬದ್ಧತೆ ನಿಯಂತ್ರಣಕ್ಕೂ ಸಹಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts