More

    ಮಹಿಳೆಯರಿಗೆ ವರದಾನ, ಈ ಸುಲಭ ಯೋಗಾಸನ!

    ಮಹಿಳೆಯರಿಗೆ ವರದಾನ ಎಂಬಂತಿರುವ ಆಸನವೆಂದರೆ ‘ಬದ್ಧ ಕೋನಾಸನ’. ಸ್ತ್ರೀಯರ ಮುಟ್ಟಿನ ದೋಷ ನಿವಾರಣೆಯಾಗುತ್ತದೆ. ಗರ್ಭಿಣಿ ಸ್ತ್ರೀಯರು ಶಿಸ್ತುಬದ್ಧವಾಗಿ ಮಾಡುತ್ತಿದ್ದರೆ, ಪ್ರಸವ ವೇದನೆ ಬಹುಮಟ್ಟಿಗೆ ತಗ್ಗಿ, ಸುಲಭ ಹೆರಿಗೆ ಸಾಧ್ಯವಾಗುತ್ತದೆ.

    ಪ್ರಯೋಜನಗಳು : ಮೂತ್ರ ವಿಸರ್ಜನೆಯಲ್ಲಿ ತೊಂದರೆ ಅನುಭವಿಸುವವರಿಗೆ ಈ ಆಸನ ಅತ್ಯುತ್ತಮ ಫಲ ನೀಡುತ್ತದೆ. ಕಿಬ್ಬೊಟ್ಟೆ ಮತ್ತು ಬೆನ್ನಿನ ಭಾಗಗಳಿಗೆ ಸಾಕಷ್ಟು ರಕ್ತ ಪರಿಚಲನೆಯಾಗಿ, ಮೂತ್ರಪಿಂಡಗಳು, ಮೂತ್ರಕೋಶ ಸುಸ್ಥಿತಿಯಲ್ಲಿರುತ್ತವೆ. ಬದ್ಧ ಕೋನಾಸನದ ಅಭ್ಯಾಸದಿಂದ ಕಾಲಿನ ನರಗಳ ಸೆಳೆತಕ್ಕೆ ಪರಿಹಾರ ಸಿಗುತ್ತದೆ. ಮಲಬದ್ಧತೆ ಮತ್ತು ಹರ್ನಿಯಾದಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ.

    ಇದನ್ನೂ ಓದಿ: ಮುಟ್ಟಿನ ದೋಷ ಮತ್ತು ಬೊಜ್ಜು ನಿವಾರಣೆಗೆ ಹೇಳಿಮಾಡಿಸಿದ ಆಸನವಿದು!

    ಮಾಡುವ ವಿಧಾನ : ಜಮಖಾನದ ಮೇಲೆ ಕೂತು, ಕಾಲುಗಳನ್ನು ಒಳಗೆ ತರುವುದು. ಪಾದದ ಮುಂಭಾಗವನ್ನು ಕೈಬೆರಳುಗಳಿಂದ ಹಿಡಿದುಕೊಳ್ಳುವುದು. ಚಿಟ್ಟೆಯ ರೆಕ್ಕೆ ಆಡಿಸುವ ರೀತಿಯಲ್ಲಿ ಮೊಣಕಾಲುಗಳನ್ನು ಮೇಲಕ್ಕೂ ಕೆಳಕ್ಕೂ ಆಡಿಸಬೇಕು. ಆರಂಭದಲ್ಲಿ ಸ್ವಲ್ಪ ಕಷ್ಟವಾದರೂ, ಅಭ್ಯಾಸವಾಗುತ್ತಾ ಸುಲಭವಾಗುತ್ತದೆ. ತುಂಬಾ ಸೊಂಟ ನೋವು ಇರುವವರು ಈ ಆಸನವನ್ನು ಮಾಡಬಾರದು.

    ಪಾದ ಹಸ್ತಾಸನ ಮಾಡಿ, ಬೊಜ್ಜಿಗೆ ಬೈ ಬೈ ಹೇಳಿ!

    2 ತಿಂಗಳ ಹಿಂದೆಯೇ ರಾಜೀನಾಮೆ ನೀಡುವುದಾಗಿ ಹೇಳಿದ್ದೆ : ಬಿಎಸ್​ವೈ

    ಜೀರ್ಣಶಕ್ತಿ ಹೆಚ್ಚಿಸಿ ಉಸಿರಾಟ ಸುಗಮವಾಗಿಸುತ್ತೆ, ವಜ್ರಾಸನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts