More

    ಕೈಮುಗಿದು, ಮನೆಯೊಳಗೇ ಇರಿ ಎನ್ನುವ ಪೊಲೀಸ್ ಅಧಿಕಾರಿ !

    ಮಚಿಲಿಪಟ್ನಂ : ಲಾಟಿ ಎತ್ತಿದ್ದಾಯ್ತು, ಕೇಸ್​ ಹಾಕಿದ್ದಾಯ್ತು, ವಾಹನ ಜಪ್ತಿ ಮಾಡಿದ್ದಾಯ್ತು… ಜನರನ್ನು ಕರೊನಾ ಲಾಕ್​ಡೌನ್​ ಪಾಲಿಸುವಂತೆ ಪೊಲೀಸರು ಏನೆಲ್ಲಾ ಮಾಡ್ತಿದ್ದಾರೆ. ಇದೀಗ ಇಲ್ಲೊಬ್ಬ ಪೊಲೀಸ್​ ಅಧಿಕಾರಿ ಕೈಮುಗಿದು ಜನರಲ್ಲಿ ಪ್ರಾರ್ಥನೆ ಕೂಡ ಮಾಡುತ್ತಾ ಇದ್ದಾರೆ.

    ನೆರೆಯ ಆಂಧ್ರ ಪ್ರದೇಶದಲ್ಲೂ ಕರೊನಾ ಸೋಂಕಿನ ಸಂಖ್ಯೆ ಉಲ್ಬಣವಾಗಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಕರ್ಫ್ಯೂ ವಿಧಿಸಲಾಗಿದೆ. ಅಲ್ಲಿಯೂ ಕೆಲವು ಜನರು ಹೊರಗೆ ಓಡಾಡುವ ಪ್ರತೀತಿ ನಡೆಸುತ್ತಿದ್ದಾರೆ. ಇದಕ್ಕೆ ಮಚಿಲಿಪಟ್ನಂ ನಗರದಲ್ಲಿ ಕರ್ಫ್ಯೂ ಜಾರಿಗೊಳಿಸುವ ಜವಾಬ್ದಾರಿ ನಿರ್ವಹಿಸುತ್ತಿರುವ ಡಿಎಸ್​ಪಿ ರಮೇಶ್​ ರೆಡ್ಡಿ ಅವರು, ಜನರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಡಬಲ್ ರೂಪಾಂತರಿ ಕರೊನಾ ವೈರಸ್​​ಅನ್ನು ‘ಇಂಡಿಯನ್ ವೇರಿಯಂಟ್’ ಅನ್ನಬೇಡಿ : ಸರ್ಕಾರ

    ಡಿಎಸ್ಪಿ ರೆಡ್ಡಿ, ರಸ್ತೆಗಳಲ್ಲಿ ನಿಂತು ಹೊರಗೆ ಬರುವ ಸ್ಥಳೀಯರಿಗೆ ಕೈಮುಗಿದು, ಕರೊನಾಕ್ಕೆ ಒಳಗಾಗದಂತೆ, ಹರಡದಂತೆ ಮನೆಯಲ್ಲಿರಿ; ಸುರಕ್ಷಿತವಾಗಿರಿ ಎಂದು ಮನವಿ ಮಾಡುತ್ತಿದ್ದಾರೆ. ಲಾಕ್​ಡೌನ್ ನಿರ್ಬಂಧಗಳನ್ನು ಉಲ್ಲಂಘಿಸುವವರಿಗೆ ಮುಂಚೂಣಿ ಕಾರ್ಯಕರ್ತರು ಕರೊನಾ ವಿರುದ್ಧ ಹೋರಾಡಲು ಎದುರಿಸುತ್ತಿರುವ ಕಷ್ಟಗಳನ್ನು ವಿವರಿಸುತ್ತಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ರಾಷ್ಟ್ರಪ್ರೇಮವೆಂದರೆ ಕೇವಲ ಗಡಿಯಲ್ಲಿ ನಿಂತು ಹೋರಾಡುವುದಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಮನೆಯಲ್ಲೇ ಕುಳಿತುಕೊಂಡಿರುವುದೂ ದೇಶ ಸೇವೆ ಆಗಿದೆ ಎಂದಿದ್ದಾರೆ ರಮೇಶ್​ ರೆಡ್ಡಿ. (ಏಜೆನ್ಸೀಸ್)

    ಪಡಿತರ ಪಡೆಯಲು ಈ ತಿಂಗಳು ಹಲವು ಸೌಲಭ್ಯ ; ಬೆರಳಚ್ಚು ಕಡ್ಡಾಯವಲ್ಲ !

    ರೋಗ ಹರಡುವ ವೈರಸ್​ಅನ್ನು ಶಸ್ತ್ರವಾಗಿ ಬಳಸಲು ಚೀನಾ ಚಿಂತನೆ ನಡೆಸುತ್ತಿತ್ತು ಎನ್ನುವ ದಾಖಲೆ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts