More

    ಅಕ್ರಮ ತಡೆಯಲು ಈ ಹೊಸ ಟೀಂ ಸನ್ನದ್ಧ! ಎಚ್ಚರದಿಂದಿರಿ

    ಆನಂದಪುರ: ಗ್ರಾಮೀಣ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆ ಮತ್ತು ಅಕ್ರಮ ತಡೆಗಟ್ಟಲು ಪೂರಕವಾಗಿ ಯುವಕರನ್ನೊಳಗೊಂಡ ಯುವಪಡೆ ರಚಿಸಲಾಗಿದೆ. ಯುವಪಡೆ ಅತ್ಯಂತ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಎಸ್‌ಪಿ ಮಿಥುನ್ ಕುಮಾರ್ ತಿಳಿಸಿದರು.

    ಗುರುವಾರ ಇಲ್ಲಿನ ಬಸವನ ಬೀದಿಯಲ್ಲಿನ ಶ್ರೀಸೀತಾರಾಮಾಂಜನೇಯ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿ, ಯುವಪಡೆ ತಮ್ಮ ಗ್ರಾಮದಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆ ಬಗ್ಗೆ ಅತ್ಯಂತ ಸೂಕ್ಷ÷್ಮ ಅವಲೋಕನ ನಡೆಸಬೇಕು. ಅನುಮಾನಾಸ್ಪದ ಸಂಗತಿ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು.
    ಪಟ್ಟಣದ ವ್ಯಾಪ್ತಿಯಲ್ಲಿ ಸಂಚಾರ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮುಗಿದಿದೆ. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಮತ್ತು ಎಲ್ಲ ಬಗೆಯ ವಾಹನ ಚಾಲಕರು ಅಗತ್ಯ ದಾಖಲೆಗಳ ಪತ್ರಿಯನ್ನು ಜತೆಯಲ್ಲಿ ಇರಿಸಿಕೊಂಡಿರಬೇಕು. ನಿಯಮ ಮೀರಿದವರಿಗೆ ಐಎಂವಿ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದರು.
    ವಾಹನ ಪಾರ್ಕಿಂಗ್ ಬಗ್ಗೆ ವಾರದ ನಿಯಮ ಜಾರಿಗೆ ತರಲಾಗುತ್ತಿದೆ. ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲಾಗಿದೆ. ಯಾವುದೇ ಬಗೆಯ ದೂರನ್ನು ತಕ್ಷಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು. ಪ್ರತಿಯೊಂದು ದೂರನ್ನೂ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.
    ಡಿವೈಎಸ್ಪಿ ರೋಹನ್ ಜಗದೀಶ್, ಸಿಪಿಐ ಪ್ರವೀಣ್, ಆನಂದಪುರ ಪಿಎಸ್‌ಐ ಯುವರಾಜ್ ಹಾಗೂ ಸಿಬ್ಬಂದಿ, ಗ್ರಾಮದ ವಿವಿಧ ಸಂಘ ಸಂಸ್ಥೆಯ ಪದಾಽಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts