More

    ನಂಬಿದ್ರೆ ನಂಬಿ: ಕುಳ್ಳ ಇರುವವರ ಎತ್ತರ ಹೆಚ್ಚಿಸ್ತಾರಂತೆ ಈ ಡಾಕ್ಟರ್!

    ಕ್ಯಾಲಿಫೋರ್ನಿಯಾ: ಎಂತೆಂತ ಕಾಯಿಲೆಗಳನ್ನು ಎಂತೆಂತದ್ದೋ ಆಪರೇಷನ್ ಮಾಡಿ ಸರಿ ಮಾಡಿರುವುದನ್ನು ನೀವು ಕೇಳಿರುತ್ತೀರಿ. ಆದರೆ ಇಲ್ಲೊಬ್ಬ ಡಾಕ್ಟರ್ ಮಾಡ್ತಿರೋ ಆಪರೇಷನ್ ಮಹತ್ವ ಕೇಳಿದರೆ ನೀವು ನಿಜಕ್ಕೂ ದಂಗಾಗುತ್ತೀರಿ. ಕುಳ್ಳಗಿದ್ದೇನೆ ಎಂದು ಕೊರಗುವವರು ಖುಷಿಯಿಂದ ಕುಣಿದಾಡಿಬಿಡುತ್ತೀರಿ.

    ಕ್ಯಾಲಿಫೋರ್ನಿಯಾದ ಶಬಾಬ್ ಮಹಬೌಬಿಯಾನ್(45) ಹೆಸರಿನ ವೈದ್ಯ ಕುಳ್ಳ ಇರುವವರನ್ನು ಉದ್ದ ಮಾಡುತ್ತಾನಂತೆ. ಒಬ್ಬ ವ್ಯಕ್ತಿಯನ್ನು 5.6 ಅಡಿ ಎತ್ತದವರೆಗೆ ಉದ್ದ ಹೆಚ್ಚಿಸುವ ವಿದ್ಯೆ ಆತನಿಗೆ ಗೊತ್ತಂತೆ. ಕಳೆದ 10 ವರ್ಷಗಳಿಂದ ಪ್ರತಿ ವರ್ಷ ಸುಮಾರು 30-40 ಜನರಿಗೆ ಆಪರೇಷನ್ ಮಾಡಿ, ಅವರ ಎತ್ತರವನ್ನು ಹೆಚ್ಚಿಸುತ್ತಿದ್ದಾನಂತೆ. ಈ ವಿಚಾರವನ್ನು ಆತ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತ ಬಂದಿದ್ದು, ಇದೀಗ ಆತನ ವಿಡಿಯೋಗಳು ವೈರಲ್ ಆಗಿವೆ.

    ಈತನ ಬಳಿ ಎತ್ತರ ಆಗುವ ಬಯಕೆ ಇಟ್ಟುಕೊಂಡು ಬರುವವರಿಗೆ ಮ್ಯಾಗ್ನೆಟಿಕ್ ನೇಲ್ ಸರ್ಜರಿ ಮಾಡಲಾಗುತ್ತದೆ. ಎಲುಬನ್ನು ಮಧ್ಯ ಭಾಗದಲ್ಲಿ ತುಂಡರಿಸಿ, ಅಕ್ಕೆ ಮ್ಯಾಗ್ನೆಟಿಕ್ ನೇಲ್ ಹಾಕಲಾಗುವುದು. ಒಟ್ಟು ಎರಡು ರೀತಿಯಲ್ಲಿ ಸರ್ಜರಿ ಮಾಡಲಾಗುತ್ತಿದ್ದು, ಅದಕ್ಕೆ ಸುಮಾರು 1.15 ಕೋಟಿ ರೂಪಾಯಿ ಶುಲ್ಕ ಹಾಕಲಾಗುತ್ತದೆಯಂತೆ. ಅದೆಷ್ಟೋ ಜನರು ಖುಷಿಯಿಂದ ಬಂದು ಆಪರೇಷನ್ ಮಾಡಿಸಿಕೊಂಡು ಹೋಗುತ್ತಾರಂತೆ. (ಏಜೆನ್ಸೀಸ್)

    13 ತಿಂಗಳುಗಳಲ್ಲಿ ಮೂರು ಬಾರಿ ಕರೊನಾಕ್ಕೆ ತುತ್ತಾದ ವೈದ್ಯೆ! ಲಸಿಕೆ ಪಡೆದ ಮೇಲೆ ಎರಡು ಬಾರಿ ಸೋಂಕು ದೃಢ

    ಇಂದು 1,501 ಕರೊನಾ ಕೇಸ್ ಪತ್ತೆ; ಸಕ್ರಿಯ ಪ್ರಕರಣಗಳ ಸಂಖ್ಯೆ 22,500ಕ್ಕೆ ಇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts