More

    VIDEO| ಪುನೀತ್​ರನ್ನು ಗಂಗಾವತಿ ಪೊಲೀಸರು ಈಗಲೂ ನೆನಪಿಸಿಕೊಳ್ಳೋದು ಯಾಕೆ ಗೊತ್ತಾ?

    ಕೊಪ್ಪಳ: ಕನ್ನಡಿಗರ ಪ್ರೀತಿಯ ಅಪ್ಪು, ಪುನೀತ್ ರಾಜಕುಮಾರ್, ಸಂಭಾವನೆ ಪಡೆಯದೇ ಸರ್ಕಾರಿ ಯೋಜನೆಗಳಿಗೆ ಜಾಹೀರಾತು ನೀಡುತ್ತಿದ್ದರು ಅನ್ನೋದು ಎಲ್ಲರಿಗೂ ಗೊತ್ತು. ಕೆಎಂಎಫ್, ಸರ್ಕಾರಿ ಶಾಲೆಗಳ ಕುರಿತ ಜಾಹಿರಾತಿಗೆ ಉಚಿತವಾಗಿ ಅಭಿನಯಿಸಿದ್ದರು. ಅದರಂತೆ ಸಣ್ಣ ಪುಟ್ಟ‌ ಜನಪರ ಜಾಗೃತಿ ಕಾರ್ಯಕ್ರಮದಲ್ಲೂ ಅಪ್ಪು ಹಿಂದೆಮುಂದೆ ನೋಡದೇ ಭಾಗಿಯಾಗಿದ್ದನ್ನು ಕೊಪ್ಪಳ ಪೊಲೀಸರು ಸ್ಮರಿಸಿಕೊಳ್ಳುತ್ತಿದ್ದಾರೆ.

    ತಾವು ಒಬ್ಬ ದೊಡ್ಡ ಸ್ಟಾರ್ ಎಂಬ ಹಮ್ಮು-ಬಿಮ್ಮು ತೋರಿಸದೇ ಗಂಗಾವತಿ ಪೊಲೀಸರು ಕೈಗೊಂಡಿದ್ದ ಕರೊನಾ ಜಾಗೃತಿ ಕಾರ್ಯಕ್ಕೆ ಪುನೀತ್ ಬೈಟ್ ನೀಡಿದ್ದರು. ಜನರು ಕರೊನಾ ನಿಯಮ ಪಾಲನೆ ಮಾಡಬೇಕೆಂದು ಮನವಿ ಮಾಡಿದ್ದರು.

    ಇದನ್ನೂ ಓದಿ: ಮನೆ ಮನೆಗೆ ಕುಡಿಯುವ ನೀರು ಪ್ರಧಾನಿ ಗುರಿ : ಸಚಿವ ಡಾ.ಕೆ.ಸುಧಾಕರ್ ಹೇಳಿಕೆ

    2020ರ ಅಕ್ಟೋಬರ್ ತಿಂಗಳಲ್ಲಿ ಗಂಗಾವತಿ ತಾಲೂಕಿನಲ್ಲಿ ಜೇಮ್ಸ್ ಚಿತ್ರದ ಚಿತ್ರೀಕರಣಕ್ಕಾಗಿ ಆಗಮಿಸಿದ್ದಾಗ ಗಂಗಾವತಿಯಲ್ಲಿ ಸುಮಾರು ಒಂದು ವಾರ ಕಾಲ ತಂಗಿದ್ದರು. ಆಗ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಕರೊನಾ ಜಾಗೃತಿ ಅಭಿಯಾನ ಆರಂಭಿಸಿದ್ದರು. ಪುನೀತ್‌ರನ್ನು, ಪೊಲೀಸರು ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿಕೊಂಡಾಗ ತಕ್ಷಣ ಒಪ್ಪಿಕೊಂಡಿದ್ದರು.

    ಅಂದು ಅವರು ಮಾತನಾಡಿದ ವಿಡಿಯೋವನ್ನು ಪೊಲೀಸರು ಈಗಲೂ ಜಾಗೃತಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ಹಮ್ಮು ಬಿಮ್ಮು ಇಲ್ಲದೆ ಜನರೊಂದಿಗೆ ಬೆರೆಯುತ್ತಿದ್ದ ಅಪ್ಪು ಈಗ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಗ್ರಾಮೀಣ ಠಾಣೆ ಪಿಎಸ್ಐ ದೊಡ್ಡಪ್ಪ ನೆನಪಿಸಿಕೊಳ್ಳುತ್ತಾರೆ.

    VIDEO| ಪುನೀತ್​​ಗೆ ಬಿರಿಯಾನಿ, ಕೋಳಿ ಸಾರು ಎಡೆಯಿಟ್ಟ ಅಭಿಮಾನಿಗಳು; ಗ್ರಾಮಸ್ಥರಿಗೂ ವಿತರಣೆ

    VIDEO| ಮದ್ಯದ ಪ್ಯಾಕೆಟ್​ಗಳನ್ನ ನಡುರಸ್ತೇಲಿ ಚೆಲ್ಲಿ ನಾಶಪಡಿಸಿದ ಗ್ರಾಮಸ್ಥರು

    ಕ್ರೂಸ್​ ಪಾರ್ಟಿಗೆ ಆರ್ಯನ್​ನ ಕರ್ಕೊಂಡು ಹೋಗಿದ್ರು! ಮಹಾ ಸಚಿವನಿಂದ ಮತ್ತಷ್ಟು ಸ್ಫೋಟಕ ಹೇಳಿಕೆ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts