More

    ಸೆಮಿಫೈನಲ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಹೀನಾಯ ಸೋಲು: ನಾಯಕ ರೋಹಿತ್​ ಕೊಟ್ಟ ಕಾರಣ ಹೀಗಿದೆ…

    ನವದೆಹಲಿ: ಟಿ20 ವಿಶ್ವಕಪ್​(T20 World Cup)ನಲ್ಲಿ ಸೆಮಿಫೈನಲ್​ ಪ್ರವೇಶ ಪಡೆದಿದ್ದ ಭಾರತ (India) ತಂಡ ಮಹತ್ವದ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಹೀನಾಯ ಸೋಲು ಅನುಭವಿಸುವ ಮೂಲಕ ಟೂರ್ನಿಯಿಂದಲೇ ಹೊರ ಬಿದ್ದಿದೆ. ಕೋಟ್ಯಂತರ ಕ್ರೀಡಾಭಿಮಾನಿಗಳಿಗೆ ಈ ಸೋಲು ಆಘಾತವನ್ನುಂಟು ಮಾಡಿದೆ.

    ನಾಯಕ ರೋಹಿತ್​ ಶರ್ಮ (Rohit Sharma) ಕ್ರೀಡಾಂಗಣದಲ್ಲೇ ಕಣ್ಣೀರಿಟ್ಟಿದ್ದಾರೆ. ತಂಡದ ಸೋಲಿನ ಬಗ್ಗೆ ಮಾತನಾಡಿರುವ ರೋಹಿತ್​, ಬೌಲಿಂಗ್​ನಲ್ಲಿ ಸರಿಯಾದ ನಿರ್ವಹಣೆ ತೋರಲು ಮತ್ತು ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

    ಇಂದಿನ ಪಂದ್ಯ ಹೇಗೆ ತಿರುವು ಪಡೆದುಕೊಂಡಿತು ಎಂಬುದು ಸಾಕಷ್ಟು ನಿರಾಶೆಯಾಗಿದೆ. ಸವಾಲಿನ ಮೊತ್ತ ಪಡೆಯಲು ನಾವು ಉತ್ತಮವಾಗಿ ಬ್ಯಾಟ್ ಮಾಡಿದೆವು. ಆದರೆ, ಬೌಲಿಂಗ್​ನಲ್ಲಿ ಸರಿಯಾದ ಹಿಡಿತವಿರಲಿಲ್ಲ. ನಾಕೌಟ್ ಪಂದ್ಯಗಳಲ್ಲಿ ಒತ್ತಡವನ್ನು ನಿಭಾಯಿಸುವ ಬಗೆಯು ಕೂಡ ಮುಖ್ಯವಾಗಿರುತ್ತದೆ. ನಮ್ಮ ಆಟಗಾರರು ಅದನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಆಡಿದ್ದಾರೆ. ಐಪಿಎಲ್ ಆಟಗಳಲ್ಲಿಯು ಒತ್ತಡದಲ್ಲಿ ಆಡಿದ್ದಾರೆ. ಇಲ್ಲಿ ಎಷ್ಟು ಶಾಂತವಾಗಿರುತ್ತೇವೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ ಎನ್ನುವ ಮೂಲಕ ಒತ್ತಡವೇ ಸೋಲಿಗೆ ಕಾರಣ ಎಂದು ಪರೋಕ್ಷವಾಗಿ ರೋಹಿತ್​ ಹೇಳಿದರು. ಇಂಗ್ಲೆಂಡ್​ ಓಪನರ್​ಗಳು ಉತ್ತಮವಾಗಿ ಆಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ (ನ.10) ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಮಾಡಿದ ರೋಹಿತ್​ ಪಡೆ ನಿಗದಿತ ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 168 ರನ್​ ಕಲೆಹಾಕಿತು. 169 ರನ್​ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್​ 16 ಓವರ್​ಗಳಲ್ಲಿ ಯಾವುದೇ ವಿಕೆಟ್​ ನಷ್ಟವಿಲ್ಲದೆ, 170 ರನ್​ ಕಲೆಹಾಕುವ ಮೂಲಕ ಅದ್ಭುತ ಜಯಭೇರಿ ಬಾರಿಸಿತು. ಸದ್ಯ ಇಂಗ್ಲೆಂಡ್​ ಮತ್ತು ಪಾಕಿಸ್ತಾನ ಫೈನಲ್​ನಲ್ಲಿ ಸೆಣಸಾಡಲಿವೆ. (ಏಜೆನ್ಸೀಸ್​)

    Gujrat Election| ಪತ್ನಿಗೆ ಬಿಜೆಪಿ ಟಿಕೆಟ್​ ಒಲಿದ ಬೆನ್ನಲ್ಲೇ ಹೆಮ್ಮೆಯ ಮಾತುಗಳಾಡಿದ ರವೀಂದ್ರ ಜಡೇಜಾ

    ಗುಜರಾತ್ 38 ಶಾಸಕರಿಗಿಲ್ಲ ಟಿಕೆಟ್; 160 ಕ್ಷೇತ್ರಗಳಿಗೆ ಅಭ್ಯರ್ಥಿ ಘೊಷಿಸಿದ ಬಿಜೆಪಿ

    ವಿಶ್ವ ಇತಿಹಾಸದಲ್ಲಿ ಅಮರ ವೀರವನಿತೆ ಒನಕೆ ಓಬವ್ವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts