More

    ‘ಕರೊನಾ ಮಧ್ಯೆ ಹೇಗಪ್ಪ ಇದನ್ನು ಮಾಡೋದು?’ ಅಂದ್ಕೊಂಡಿದ್ದ ಹಿರಿಯ ನಾಗರಿಕರಿಗೆ ಇಲ್ಲಿದೆ ಸಂತೋಷದ ಸುದ್ದಿ

    ನವದೆಹಲಿ: ಸರ್ಕಾರಿ ಕೆಲಸದಲ್ಲಿದ್ದು ನಿವೃತ್ತರಾಗಿರುವ ಎಲ್ಲ ಹಿರಿಯ ನಾಗರಿಕರಿಗೂ ಇದೊಂದು ಸಂತೋಷದ ಸುದ್ದಿ. ‘ಕರೊನಾ ನಡುವೆ ಹೇಗಪ್ಪ ಈ ಕೆಲಸ ಮಾಡೋದು?’ ಎಂಬ ಚಿಂತೆಯಲ್ಲಿದ್ದ ಅವರಿಗೆಲ್ಲ ಈಗ ಸದ್ಯಕ್ಕಂತೂ ಪೂರ್ತಿ ನಿರಾಳ ಎನಿಸುವಂಥ ಸುದ್ದಿ ಇದು.

    ಹೌದು.. ಕರೊನಾ ಸಂದರ್ಭದಲ್ಲಿ ಅತಿಹೆಚ್ಚು ತೊಂದರೆಗೆ ಒಳಗಾಗುವವರು ಮಕ್ಕಳು ಹಾಗೂ ವಯೋವೃದ್ಧರು. ಅದರಲ್ಲೂ ತೀರಾ ವಯಸ್ಸಾದ ಹಿರಿಯ ನಾಗರಿಕರು ಬಹುಬೇಗ ಸೋಂಕಿಗೆ ಒಳಗಾಗುತ್ತಾರೆ ಅಥವಾ ಸೋಂಕಿಗೆ ಒಳಗಾದರೆ ಎಲ್ಲರಿಗಿಂತ ಜಾಸ್ತಿ ತೊಂದರೆಗೆ ಸಿಲುಕುತ್ತಾರೆ. ಆದರೆ ಈಗ ಅಂಥ ಒಂದು ಭಯದಿಂದ ಅವರು ಸ್ವಲ್ಪಮಟ್ಟಿಗೆ ಹೊರಬರುವಂತಾಗಿದೆ.

    ಏಕೆಂದರೆ ರಾಜ್ಯ ಹಾಗೂ ಕೇಂದ್ರದ ನಿವೃತ್ತ ಸರ್ಕಾರಿ ನೌಕರರು ಲೈಫ್​ ಸರ್ಟಿಫಿಕೇಟ್​ ಕೊಡುವ ದಿನಾಂಕ ಇದೀಗ ವಿಸ್ತರಣೆ ಆಗಿದೆ. ಪಿಂಚಣಿ ಪಡೆಯುವ ಎಲ್ಲರೂ ಸಾಮಾನ್ಯವಾಗಿ ಪ್ರತಿವರ್ಷದ ನವೆಂಬರ್​ನಲ್ಲಿ ಲೈಫ್​ ಸರ್ಟಿಫಿಕೇಟ್​ ಸಲ್ಲಿಸುವುದು ಕಡ್ಡಾಯ. ಪಿಂಚಣಿ ಹಣ ದುರ್ಬಳಕೆ ಆಗಬಾರದು ಎಂಬ ನಿಟ್ಟಿನಲ್ಲಿ ಸರ್ಕಾರ ಇಂಥದ್ದೊಂದು ನಿಯಮ ಮಾಡಿದೆ. ಆ ಪ್ರಕಾರ ಪಿಂಚಣಿ ಪಡೆಯುವ ಎಲ್ಲ ನೌಕರರೂ ತಾವು ಜೀವಂತ ಇದ್ದೇವೆ ಎಂಬ ಬಗ್ಗೆ ಲೈಫ್ ಸರ್ಟಿಫಿಕೇಟ್ ಕೊಡಬೇಕಾದ್ದು ಅಗತ್ಯ.

    ಆದರೆ ಕರೊನಾ ಹಿನ್ನೆಲೆಯಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್​ಒ) ಪ್ರಸ್ತುತ ಲೈಫ್​ ಸರ್ಟಿಫಿಕೇಟ್ ಸಲ್ಲಿಕೆಗೆ ಇರುವ ಗಡುವನ್ನು ವಿಸ್ತರಿಸಿದೆ. 2021ರ ಫೆಬ್ರವರಿ 28ರ ವರೆಗೂ ಈ ಗಡುವು ವಿಸ್ತರಿಸಿರುವುದರಿಂದ ಪಿಂಚಣಿ ಪಡೆಯುವ ಹಿರಿಯ ನಾಗರಿಕರಿಗೆ ಲೈಫ್​ ಸರ್ಟಿಫಿಕೇಟ್​ ಸಲ್ಲಿಸಲು ಹೆಚ್ಚುವರಿಯಾಗಿ 3 ತಿಂಗಳ ಕಾಲಾವಕಾಶ ಸಿಕ್ಕಂತಾಗಿದೆ. ಈ ಮೊದಲು ಲೈಫ್​ ಸರ್ಟಿಫಿಕೇಟ್ ಸಲ್ಲಿಕೆಗೆ ಕಡೇ ದಿನ ನ. 30 ಆಗಿತ್ತು.

    Video | ಆಮೇಲ್​ ಕೊಡ್ತೀನಿ ಎಂದ, ನಂತರ ಕೊಟ್ಟಿದ್ದೇ ಬೇರೆ!; ಇವರಿಬ್ಬರು ಬರೀ 5 ರೂ.ಗೆ ನಡುರಸ್ತೇಲಿ ಹೀಗಾ ಮಾಡೋದು!?

    2.5 ಕೋಟಿ ದಂಪತಿಗಳಿಗೆ ಅದೇ ಸಿಗಲಿಲ್ವಂತೆ; ಕರೊನಾದಿಂದಾಗಿ ಶಿಶುಜನನ ಪ್ರಮಾಣ ಶೀಘ್ರ ಹೆಚ್ಚಳ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts