ಭೀಮಸಮುದ್ರ: ಭೀಮಸಮುದ್ರ ಗ್ರಾಪಂ ವ್ಯಾಪ್ತಿಯ ಮನೆಗಳಲ್ಲಿ ಶನಿವಾರ ಹಿರಿಯರು ಹಾಗೂ ಅಂಗವಿಕಲರಿಗೆ ಮತದಾನ ಪ್ರಕ್ರಿಯೆ ನಡೆಯಿತು.
ಐವರು ಅಂಗವಿಕಲರು, ನಾಲ್ವರು ಮುತ್ಸದ್ಧಿಗಳು ಮತದಾನ ಮಾಡಿದರು. 81 ವರ್ಷದ ಎಂ.ಕೆ.ಮುದಿಯಜ್ಜ ಮಾತನಾಡಿ, ಚುನಾವಣಾ ಅಧಿಕಾರಿಗಳು ಮನೆ ಬಾಗಿಲಿನಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಅವರಿಗೆ ಧನ್ಯವಾದಗಳು.
ಮತಗಟ್ಟೆಗೆ ಹೋಗಿ ವಯಸ್ಸಾದ ಮೇಲೆ ಮತದಾನ ಮಾಡುವುದು ಕಷ್ಟ ಆದ್ದರಿಂದ ಮನೆಬಾಗಿಲಲ್ಲೇ ಹಕ್ಕು ಚಲಾಯಿಸಿರುವುದು ಅನುಕೂಲವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು ಪೊಲೀಸ್ ಸಿಬ್ಬಂದಿ ಇದ್ದರು.